ಕೊಚ್ಚಿ: ಇಸ್ಲಾಂ ಮತದಿಂದ ಹೊರಬಂದವರ ಹೊಸ ಸಂಘಟನೆಯೊಂದು ರೂಪುಗೊಂಡಿದ್ದು, ಎಕ್ಸ್ ಮುಸ್ಲಿಮ್ಸ್ ಆ|ಫ್ ಕೇರಳ ಎಂಬ ಹೆಸರಲ್ಲಿ ರಚನೆಗೊಂಡು ಘೋಷಣೆಯಾಗಿದೆ. ಕೊಚ್ಚಿಯಲ್ಲಿ ಸಂಘಟನೆಯ ಮೊದಲ ಸಭೆ ಇಂದು ನಡೆಯಿತು. ಇಸ್ಲಾಂ ಮತದಿಂದ ಹೊರಬರುವವರಿಗೆ ಸಾಮಾಜಿಕ ಬೆಂಬಲವನ್ನು ನೀಡುವ ಗುರಿಯನ್ನು ಈ ಸಂಸ್ಥೆ ಹೊಂದಿದೆ. ಪ್ರತಿ ವರ್ಷ ಜನವರಿ 9 ರಂದು ಕೇರಳ ಎಕ್ಸ್ ಮುಸ್ಲಿಂ ದಿನವನ್ನು ಆಚರಿಸಲು ಸಂಘಟನೆ ನಿರ್ಧರಿಸಿದೆ.
ವಿವಿ|ಧ ಕಾರಣಗಳಿಂದ ಇಸ್ಲಾಂ ಮತವನ್ನು ಬಿಟ್ಟುಬಂದವರಿಗಾಗಿರುವ ದೇಶದ ಮೊದಲ ಸಂಘಟನೆ ಇದಾಗಿದೆ. ಸಂಘಟನೆಯ ಬಹುತೇಕ ಸದಸ್ಯರು ಇಸ್ಲಾಂ ಧರ್ಮದ ಮೂಢನಂಬಿಕೆಗಳು ಮತ್ತು ಅವೈಜ್ಞಾನಿಕ ಸ್ವರೂಪವನ್ನು ಉಲ್ಲೇಖಿಸಿ ಇಸ್ಲಾಮಿಕ್ ನಂಬಿಕೆಗೆ ವಿದಾಯ ಹೇಳಿದವರು. ಈ ರೀತಿ ಧರ್ಮವನ್ನು ತೊರೆದವರು ದೈಹಿಕವಾಗಿ ಮತ್ತು ಸಾಮಾಜಿಕವಾಗಿ ದೊಡ್ಡ ಸಮಸ್ಯೆಗಳನ್ನು ಎದುರಿಸುತ್ತಾರೆ. ಅದಕ್ಕಾಗಿಯೇ ಎಕ್ಸ್ ಮುಸ್ಲಿಂ ಎಂಬ ಸಂಘಟನೆಯನ್ನು ಪ್ರಾರಂಭಿಸಲಾಯಿತು.
ಇಸ್ಲಾಂ ಮತ ಸ್ವಯಂ ಕಲಿತವರು ಇನ್ನು ಮುಂದೆ ಇಸ್ಲಾಂನೊಂದಿಗೆ ಉಳಿಯಲು ಸಾಧ್ಯವಿಲ್ಲ ಮತ್ತು ಇಸ್ಲಾಂ ಧರ್ಮವನ್ನು ತೊರೆದವರು ಎದುರಿಸುತ್ತಿರುವ ದೈಹಿಕ ಮತ್ತು ಮಾನಸಿಕ ಹಿಂಸೆ ಅಸಹನೀಯವಾಗಿದೆ ಎಂದು ವೆಬ್‍ಸೈಟ್ 'ಎಕ್ಸ್ ಮುಸ್ಲಿಮ್ಸ್' ಹೇಳುತ್ತದೆ. ಇಸ್ಲಾಂ ವಿಮರ್ಶಕ ಹಾಗೂ ವಿಚಾರವಾದಿ ಸಿ.ಎಂ.ಲಿಯಾಖತ್ ಅಲಿ ಅಧ್ಯಕ್ಷ ತೆ ವಹಿಸಿರುವ ಈ ಸಂಸ್ಥೆಯ ಕಾರ್ಯದರ್ಶಿ ಪಿ.ಎಂ.ಸಫಿಯಾ ಆಗಿರುವರು.

