HEALTH TIPS

ರಾಜ್ಯದಲ್ಲಿ ಕೋವಿಡ್ ಅಲ್ಪ ಏರಿಕೆ: ಇಂದು 12,223 ಮಂದಿಗೆ ಸೋಂಕು ಪತ್ತೆ

                     ತಿರುವನಂತಪುರ: ರಾಜ್ಯದಲ್ಲಿ ಇಂದು 12,223 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಎರ್ನಾಕುಳಂ 2944, ತಿರುವನಂತಪುರ 1562, ಕೊಟ್ಟಾಯಂ 1062, ಕೊಲ್ಲಂ 990, ಕೋಝಿಕ್ಕೋಡ್ 934, ತ್ರಿಶೂರ್ 828, ಇಡುಕ್ಕಿ 710, ಅಲಪ್ಪುಳ 578, ಪತ್ತನಂತಿಟ್ಟ 555, ವಯನಾಡ್ 495, ಕಣ್ಣೂರು 444, ಪಾಲಕ್ಕಾಡ್ 438, ಮಲಪ್ಪುರಂ 419, ಕಾಸರಗೋಡು 264 ಎಂಬಂತೆ ಕೊರೊನಾ ದೃಢಪಟ್ಟಿದೆ. 

                  ಕಳೆದ 24 ಗಂಟೆಗಳಲ್ಲಿ 77,598 ಮಾದರಿಗಳನ್ನು ಪರೀಕ್ಷಿಸಲಾಗಿದೆ.

                 ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರಸ್ತುತ 2,32,052 ಮಂದಿ ಜನರು ನಿಗಾದಲ್ಲಿದ್ದಾರೆ. ಇವರಲ್ಲಿ 2,26,887 ಮಂದಿ ಮನೆ/ ಸಾಂಸ್ಥಿಕ ಕ್ವಾರಂಟೈನ್‍ನಲ್ಲಿದ್ದಾರೆ ಮತ್ತು 5165 ಮಂದಿ ಆಸ್ಪತ್ರೆಗಳಲ್ಲಿ ನಿಗಾದಲ್ಲಿದ್ದಾರೆ. ಒಟ್ಟು 765 ಮಂದಿ ಹೊಸದಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಪ್ರಸ್ತುತ, 1,13,798 ಕೊರೋನಾ ಪ್ರಕರಣಗಳಲ್ಲಿ, 4.5 ಪ್ರತಿಶತದಷ್ಟು ಜನರು  ಆಸ್ಪತ್ರೆ / ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ.

             ಕಳೆದ 24 ಗಂಟೆಗಳಲ್ಲಿ 25 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಅಲ್ಲದೆ, ಹಿಂದಿನ ದಿನಗಳಲ್ಲಿ ದಾಖಲೆಗಳ ವಿಳಂಬದಿಂದ 118 ಸಾವುಗಳು ಮತ್ತು ಸುಪ್ರೀಂ ಕೋರ್ಟ್‍ನ ಹೊಸ ಮಾರ್ಗಸೂಚಿಗಳ ಅಡಿಯಲ್ಲಿ ಕೇಂದ್ರ ಸರ್ಕಾರವು ಮೇಲ್ಮನವಿ ಸಲ್ಲಿಸಿದ್ದರಿಂದ 195 ಸಾವುಗಳು ವರದಿಯಾಗಿವೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸಾವಿನ ಸಂಖ್ಯೆ 63,019ಕ್ಕೆ ಏರಿಕೆಯಾಗಿದೆ.

              ಇಂದು ಸೋಂಕು ಪತ್ತೆಯಾದವರಲ್ಲಿ 33 ಮಂದಿ ಹೊರ ರಾಜ್ಯದವರು. ಸಂಪರ್ಕದಿಂದ 11,046 ಮಂದಿ ಜನರು ಸೋಂಕಿಗೆ ಒಳಗಾಗಿದ್ದಾರೆ. 1056 ಮಂದಿಯ ಸಂಪರ್ಕ ಮೂಲ  ಸ್ಪಷ್ಟವಾಗಿಲ್ಲ. ಇಂದು 88 ಮಂದಿ ಆರೋಗ್ಯ ಕಾರ್ಯಕರ್ತರಿಗೆ ಕೋವಿಡ್ ದೃಢಪಟ್ಟಿದೆ. 

                      ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದವರಲ್ಲಿ 21,906 ಮಂದಿ ಚೇತರಿಸಿಕೊಂಡಿದ್ದಾರೆ. ತಿರುವನಂತಪುರ 1956, ಕೊಲ್ಲಂ 3182, ಪತ್ತನಂತಿಟ್ಟ 605, ಆಲಪ್ಪುಳ 1577, ಕೊಟ್ಟಾಯಂ 2713, ಇಡುಕ್ಕಿ 1220, ಎರ್ನಾಕುಳಂ 3514, ತ್ರಿಶೂರ್ 1402, ಪಾಲಕ್ಕಾಡ್ 1115, ಮಲಪ್ಪುರಂ 1300, ಕೋಝಿಕ್ಕೋಡ್ 1563, ವಯನಾಡ್ 511, ಕಣ್ಣೂರು 966, ಕಾಸರಗೋಡು 282 ಎಂಬಂತೆ ಸೋಂಕಿನಿಂದ ಗುಣಮುಖರಾಗಿದ್ದಾರೆ. 

                 ಇದರೊಂದಿಗೆ 1,13,798 ಮಂದಿಗೆ ಸೋಂಕು ದೃಢಪಟ್ಟಿದ್ದು, ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೆ 62,62,770 ಮಂದಿ ಕೊರೊನಾದಿಂದ ಮುಕ್ತರಾಗಿದ್ದಾರೆ. 


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries