HEALTH TIPS

ರಾಜ್ಯದಲ್ಲಿ ಇಂದು 22,524 ಮಂದಿಗೆ ಕೋವಿಡ್ ಪತ್ತೆ: ಪರೀಕ್ಷೆಗಳ ಸಂಖ್ಯೆಯಲ್ಲಿ ಕುಸಿತ

         ತಿರುವನಂತಪುರ: ಕೇರಳದಲ್ಲಿ ಇಂದು 22,524 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ತಿರುವನಂತಪುರ 3493, ಎರ್ನಾಕುಳಂ 3490, ಕೊಟ್ಟಾಯಂ 2786, ಕೊಲ್ಲಂ 2469, ತ್ರಿಶೂರ್ 1780, ಕೋಝಿಕ್ಕೋಡ್ 1612, ಮಲಪ್ಪುರಂ 1218, ಆಲಪ್ಪುಳ 1109, ಪತ್ತನಂತಿಟ್ಟ 1053, ಕಣ್ಣೂರು 1031, ಪಾಲಕ್ಕಾಡ್ 816, ಇಡುಕ್ಕಿ 737, ವಯನಾಡ್ 617, ಕಾಸರಗೋಡು 313 ಎಂಬಂತೆ ಸೋಂಕು ದೃಢಪಟ್ಟಿದೆ. 

         ಕಳೆದ 24 ಗಂಟೆಗಳಲ್ಲಿ 78,682 ಮಾದರಿಗಳನ್ನು ಪರೀಕ್ಷಿಸಲಾಗಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರಸ್ತುತ 4,74,949 ಮಂದಿ ಜನರು ನಿಗಾದಲ್ಲಿದ್ದಾರೆ. ಇವರಲ್ಲಿ 4,65,565 ಮಂದಿ ಮನೆ/ ಸಾಂಸ್ಥಿಕ ಕ್ವಾರಂಟೈನ್‍ನಲ್ಲಿದ್ದಾರೆ ಮತ್ತು 9,384 ಮಂದಿ ಆಸ್ಪತ್ರೆಯ ನಿಗಾದಲ್ಲಿದ್ದಾರೆ. ಒಟ್ಟು 847 ಮಂದಿ ಹೊಸದಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

         ಪ್ರಸ್ತುತ 3,01,424 ಕೊರೋನಾ ಪ್ರಕರಣಗಳಲ್ಲಿ, ಕೇವಲ 3.2 ಪ್ರತಿಶತ ಜನರು  ಆಸ್ಪತ್ರೆ / ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. 

            ಕಳೆದ 24 ಗಂಟೆಗಳಲ್ಲಿ ಕೋವಿಡ್ ಬಾಧಿಸಿ 14 ಮಂದಿ ಬಲಿಯಾಗಿದ್ದಾರೆ. ಇದಲ್ಲದೆ, ದಾಖಲೆಗಳನ್ನು ತಡವಾಗಿ ಸ್ವೀಕರಿಸಿದ ಕಾರಣ ಹಿಂದಿನ ದಿನಗಳಲ್ಲಿ 113 ಸಾವುಗಳು ಮತ್ತು ಸುಪ್ರೀಂ ಕೋರ್ಟ್‍ನ ಹೊಸ ಮಾರ್ಗಸೂಚಿಗಳ ಅಡಿಯಲ್ಲಿ ಕೇಂದ್ರ ಸರ್ಕಾರವು ಮೇಲ್ಮನವಿ ಸಲ್ಲಿಸಿದ್ದರಿಂದ 733 ಸಾವುಗಳು ವರದಿಯಾಗಿವೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸಾವಿನ ಸಂಖ್ಯೆ 59,115ಕ್ಕೆ ಏರಿಕೆಯಾಗಿದೆ.

          ಇಂದು, ಸೋಂಕು ಪತ್ತೆಯಾದವರಲ್ಲಿ 114 ಮಂದಿ ಜನರು ಹೊರ ರಾಜ್ಯದವರು. ಸಂಪರ್ಕದ ಮೂಲಕ 21,033 ಮಂದಿ ಜನರು ಸೋಂಕಿಗೆ ಒಳಗಾಗಿದ್ದಾರೆ. 1207 ಮಂದಿಯ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ. ಇಂದು 170 ಮಂದಿ ಆರೋಗ್ಯ ಕಾರ್ಯಕರ್ತರಿಗೆ ಕೋವಿಡ್ ದೃಢಪಡಿಸಲಾಗಿದೆ. 

          ಒಟ್ಟು 49,586 ಮಂದಿ ಜನರು ಇಂದು ಚಿಕಿತ್ಸೆಪಡೆದು ಸೋಂಕು ಮುಕ್ತರಾಗಿದ್ದಾರೆ. ತಿರುವನಂತಪುರ 4739, ಕೊಲ್ಲಂ 4365, ಪತ್ತನಂತಿಟ್ಟ 1950, ಅಲಪ್ಪುಳ 2802, ಕೊಟ್ಟಾಯಂ 4400, ಇಡುಕ್ಕಿ 2486, ಎರ್ನಾಕುಳಂ 8943, ತ್ರಿಶೂರ್ 7038, ಪಾಲಕ್ಕಾಡ್ 3387, ಮಲಪ್ಪುರಂ 2185, ಕೋಝಿಕ್ಕೋಡ್ 3970, ವಯನಾಡ್ 1296, ಕಣ್ಣೂರು 1572, ಕಾಸರಗೋಡು 453 ಎಂಬಂತೆ ಗುಣಮುಖರಾಗಿದ್ದಾರೆ. ಇದರೊಂದಿಗೆ 3,01,424 ಮಂದಿಗೆ ಸೋಂಕು ದೃಢಪಟ್ಟಿದ್ದು, ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೆ 59,32,609 ಮಂದಿ ಜನರು ಕೊರೋನಾದಿಂದ ಮುಕ್ತರಾಗಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries