HEALTH TIPS

ರಾಜ್ಯದಲ್ಲಿ ಇಂದು 4069 ಮಂದಿಗೆ ಕೋವಿಡ್ ಪತ್ತೆ: 42,700 ಮಾದರಿಗಳ ಪರೀಕ್ಷೆ


        ತಿರುವನಂತಪುರ: ರಾಜ್ಯದಲ್ಲಿ ಇಂದು 4069 ಮಂದಿ ಜನರಿಗೆ ಹೊಸತಾಗಿ ಕೋವಿಡ್ ಪತ್ತೆಯಾಗಿದೆ. ಎರ್ನಾಕುಳಂ 647, ತಿರುವನಂತಪುರ 531, ಕೊಟ್ಟಾಯಂ 414, ಕೊಲ್ಲಂ 410, ಕೋಝಿಕ್ಕೋಡ್ 353, ತ್ರಿಶೂರ್ 333, ಆಲಪ್ಪುಳ 224, ಮಲಪ್ಪುರಂ 222, ಪತ್ತನಂತಿಟ್ಟ 222, ಇಡುಕ್ಕಿ, 186,ಕಣ್ಣೂರು 179, ಪಾಲಕ್ಕಾಡ್ 151, ವಯನಾಡ್ 104, ಕಾಸರಗೋಡು 93 ಎಂಬಂತೆ ಕೋವಿಡ್ ದೃಢಪಡಿಸಲಾಗಿದೆ.
       ಕಳೆದ 24 ಗಂಟೆಗಳಲ್ಲಿ 42,700 ಮಾದರಿಗಳನ್ನು ಪರೀಕ್ಷಿಸಲಾಗಿದೆ.
       ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರಸ್ತುತ 1,57,090 ಮಂದಿ ಜನರು ನಿಗಾದಲ್ಲಿದ್ದಾರೆ.  ಇವರಲ್ಲಿ 1,53,490 ಮಂದಿ ಮನೆ/ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿದ್ದಾರೆ ಮತ್ತು 3,600 ಮಂದಿ ಆಸ್ಪತ್ರೆಗಳಲ್ಲಿದ್ದಾರೆ.  500 ಮಂದಿ ಹೊಸದಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.  ಪ್ರಸ್ತುತ 58,932 ಕೊರೋನಾ ಪ್ರಕರಣಗಳಲ್ಲಿ, ಕೇವಲ 6.2 ಪ್ರತಿಶತದಷ್ಟು ಜನರು ಆಸ್ಪತ್ರೆ / ಸ್ಥಳೀಯ ಆಸ್ಪತ್ರೆ ಗಳಿಗೆ ದಾಖಲಿಸಲಾಗಿದೆ.
       ಕಳೆದ 24 ಗಂಟೆಗಳಲ್ಲಿ ಕೋವಿಡ್ ಬಾಧಿಸಿ
ಹನ್ನೊಂದು ಮಂದಿ ಮೃತರಾಗಿದ್ದಾರೆ. ಇದಲ್ಲದೆ, ಹಿಂದಿನ ದಿನಗಳಲ್ಲಿ ದಾಖಲೆಗಳ ವಿಳಂಬದಿಂದ 76 ಸಾವುಗಳು ಮತ್ತು ಸುಪ್ರೀಂ ಕೋರ್ಟ್‌ನ ಹೊಸ ಮಾರ್ಗಸೂಚಿಗಳ ಅಡಿಯಲ್ಲಿ ಕೇಂದ್ರ ಸರ್ಕಾರವು ಮೇಲ್ಮನವಿ ಸಲ್ಲಿಸಿದ್ದರಿಂದ 41 ಸಾವುಗಳು ವರದಿಯಾಗಿವೆ.  ಈ ಮೂಲಕ ರಾಜ್ಯದಲ್ಲಿ ಒಟ್ಟು ಸಾವಿನ ಸಂಖ್ಯೆ 64,273ಕ್ಕೆ ಏರಿಕೆಯಾಗಿದೆ.  
        ಇಂದು ಸೋಂಕು ಪತ್ತೆಯಾದವರಲ್ಲಿ 18 ಮಂದಿ ಹೊರ ರಾಜ್ಯದವರು.  3775 ಮಂದಿ ಜನರು ಸಂಪರ್ಕದಿಂದ ಸೋಂಕಿಗೆ ಒಳಗಾಗಿದ್ದಾರೆ.  244 ಮಂದಿಯ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ.  ಇಂದು ಮೂವತ್ತೆರಡು ಮಂದಿ ಆರೋಗ್ಯ ಕಾರ್ಯಕರ್ತರಿಗೆ ಕೋವಿಡ್ ದೃಢಪಡಿಸಲಾಗಿದೆ.
        ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದ ಒಟ್ಟು 11,026 ಮಂದಿ ಜನರು ಗುಣಮುಖರಾಗಿದ್ದಾರೆ.  ತಿರುವನಂತಪುರ 1063, ಕೊಲ್ಲಂ 668, ಪತ್ತನಂತಿಟ್ಟ 519, ಆಲಪ್ಪುಳ 634, ಕೊಟ್ಟಾಯಂ 1278, ಇಡುಕ್ಕಿ 838, ಎರ್ನಾಕುಲಂ 1555, ತ್ರಿಶೂರ್ 1112, ಪಾಲಕ್ಕಾಡ್ 459, ಮಲಪ್ಪುರಂ 894, ಕೋಯಿಕ್ಕೋಡ್ 825, ವಯನಾಡ್ 461, ಕಣ್ಣೂರು 562, ಕಾಸರಗೋಡು 158 ಮಂದಿ ಎಂಬಂತೆ ಗುಣಮುಖರಾಗಿದ್ದಾರೆ.
         ಇದರೊಂದಿಗೆ, 58,932 ಮಂದಿ ಜನರು ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ.  ಇದುವರೆಗೆ 63,49,057 ಮಂದಿ ಕೊರೊನಾದಿಂದ ಮುಕ್ತರಾಗಿದ್ದಾರೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries