HEALTH TIPS

6ಜಿ ತಂತ್ರಜ್ಞಾನದಲ್ಲಿ ಚೀನಾ 'ವಿಶ್ವ ದಾಖಲೆ': 5ಜಿ ಗಿಂತ ನೂರು ಪಟ್ಟು ವೇಗ!!!

         ನವದೆಹಲಿ: ಪ್ರಪಂಚದಾದ್ಯಂತ 5ಜಿ ಯಲ್ಲಿ ಕೆಲಸಗಳನ್ನು ನಿರ್ವಹಣೆ ಮಾಡಲಾಗುತ್ತಿದೆ. ಆದರೆ, ಚೀನಾ ಮಾತ್ರ 6ಜಿ ನಲ್ಲಿ ಹೊಸ ದಾಪುಗಾಲು ಇಟ್ಟಿದೆ. 6G ತಂತ್ರಜ್ಞಾನದಲ್ಲಿ ಕೆಲಸ ಮಾಡುತ್ತಿರುವ ಚೀನಾದ ಸಂಶೋಧಕರು ವಿಶ್ವವೇ ಬೆಚ್ಚಿಬೀಳುವಂತಹ ವಿಚಾರವನ್ನು ಪ್ರಕಟಿಸಿದ್ದಾರೆ.

          ಹೊಸ ತಂತ್ರಜ್ಞಾನವನ್ನು ಬಳಸಿಕೊಂಡು ಅತಿ ವೇಗದಲ್ಲಿ ಡೇಟಾ ಸ್ಟ್ರೀಮಿಂಗ್ ಮಾಡಿರುವುದಾಗಿ ಚೀನಾ ಹೇಳಿದೆ. ಮುಂದಿನ ಪೀಳಿಗೆಯ ವೈರ್‌ಲೆಸ್ ಕಮ್ಯುನಿಕೇಷನ್ ಗಾಗಿ ಚೀನಾ ಸ್ಪರ್ಧಾತ್ಮಕ ಪ್ರಯೋಜನವನ್ನು ಪಡೆಯಲು ಇದು ಸಹಾಯ ಮಾಡುತ್ತದೆ. ವೋರ್ಟೆಕ್ಸ್ ಮಿಲಿಮೀಟರ್ ವೇವ್ಸ್ ಅನ್ನು ಬಳಸಿಕೊಂಡು ಸಂಶೋಧಕರು ಒಂದು ಸೆಕೆಂಡಿನಲ್ಲಿ ಒಂದು ಕಿಲೋಮೀಟರ್‌ವರೆಗೆ ಒಂದು ಟೆರಾಬೈಟ್ (1 TB equals 1,000 gigabytes (GB) or 1,000,000 megabytes (mb). ಡೇಟಾವನ್ನು ಕಳುಹಿಸಿದ್ದಾರೆ.

            ಸೌತ್ ಚೈನಾ ಮಾರ್ನಿಂಗ್ ಪೋಸ್ಟ್ ವರದಿಯ ಪ್ರಕಾರ, ವೋರ್ಟೆಕ್ಸ್ ಮಿಲಿಮೀಟರ್ ತರಂಗಗಳು ಒಂದು ರೀತಿಯ ಹೈ-ಫ್ರೀಕ್ವೆನ್ಸಿ ರೇಡಿಯೋ ತರಂಗವಾಗಿದ್ದು, ಅದು ವೇಗವಾಗಿ ಸ್ಪಿನ್ ಆಗುತ್ತದೆ ಎಂದು ಹೇಳಿದ್ದಾರೆ. ಕಳೆದ ತಿಂಗಳು ಬೀಜಿಂಗ್ ವಿಂಟರ್ ಒಲಿಂಪಿಕ್ಸ್ ಕಾಂಪೌಂಡ್‌ನಲ್ಲಿ ಸ್ಥಾಪಿಸಲಾದ ಪ್ರಾಯೋಗಿಕ ವೈರ್‌ಲೆಸ್ ಕಮ್ಯುನಿಕೇಷನ್ ಲೈನ್ ಏಕಕಾಲದಲ್ಲಿ 10,000 ಕ್ಕೂ ಅಧಿಕ ಹೈ ಡೆಫಿನೇಷನ್ ಲೈವ್ ಫೀಡ್ ಸ್ಟ್ರೀಮ್ ಮಾಡಲಿದೆ ಎಂದು ತ್ಸಿಂಗ್ವಾ ವಿಶ್ವವಿದ್ಯಾಲಯದ ಏರೋಸ್ಪೇಸ್ ಎಂಜಿನಿಯರಿಂಗ್ ಶಾಲೆಯ ಪ್ರೊಫೆಸರ್ ಜಾಂಗ್ ಚಾವೊ ನೇತೃತ್ವದ ತಂಡ ಫೆಬ್ರವರಿ 9ರಂದು ತಿಳಿಸಿದೆ.

                     ಹೈಪರ್ಸಾನಿಕ್ ಶಸ್ತ್ರಾಸ್ತ್ರಗಳಿಗೆ 6G ತಂತ್ರಜ್ಞಾನ ಅತ್ಯಗತ್ಯ
       ಹೈಪರ್‌ಸಾನಿಕ್ ಶಸ್ತ್ರಾಸ್ತ್ರಗಳಿಗೆ 6G ತಂತ್ರಜ್ಞಾನವನ್ನು ಬಳಸಿಕೊಂಡು ಗುರಿಗಳನ್ನು ಪತ್ತೆಹಚ್ಚುತ್ತದೆ ಮತ್ತು ಕಮ್ಯುನಿಕೇಷನ್ ನಡೆಸುತ್ತದೆ ಎಂದು ತಂಡ ಹೇಳಿಕೊಂಡಿದೆ. ಧ್ವನಿಯ ವೇಗಕ್ಕಿಂತ ಐದು ಪಟ್ಟು ಹೆಚ್ಚು ವೇಗವನ್ನು ಹೊಂದಿರುವ ಹೈಪರ್ಸಾನಿಕ್ ಕ್ಷಿಪಣಿಗಳು ಕೆಲವೊಮ್ಮೆ ನೆಟ್‌ವರ್ಕ್‌ನಿಂದಾಗಿ ಬ್ಲ್ಯಾಕ್‌ಔಟ್‌ ಎದುರಿಸುತ್ತವೆ. ಭವಿಷ್ಯದ 6G ತಂತ್ರಜ್ಞಾನವನ್ನು ಯುದ್ಧಕ್ಕಾಗಿ ಬಳಕೆ ಮಾಡಲಾಗುತ್ತಿದೆ ಎಂದು ಚೀನಾ ಹಲವಾರು ಬಾರಿ ಹೇಳಿಕೊಂಡಿದೆ. ಜಾಂಗ್ ಮತ್ತು ಅವರ ಸಹೋದ್ಯೋಗಿಗಳ ಪ್ರಕಾರ, ಕಳೆದ ಶತಮಾನದ ಬಳಿಕ ವೋರ್ಟೆಕ್ಸ್ ವೈರ್‌ಲೆಸ್ ಟಾನ್ಸ್ ಮಿಷನ್ ಹೊಸ ಆಯಾಮ ಒದಗಿಸಿದೆ ಎಂದು ಹೇಳಿದ್ದಾರೆ.

                   6ಜಿ ವೇಗವು 5ಜಿ ಗಿಂತ 100 ಪಟ್ಟು ವೇಗ
         6ಜಿ ಗಾಗಿ ಸಂಭಾವ್ಯ ಪ್ರಮುಖ ತಂತ್ರಜ್ಞಾನಗಳ ಸಂಶೋಧನೆಯಲ್ಲಿ ಚೀನಾ ವಿಶ್ವವನ್ನು ಮುನ್ನಡೆಸುತ್ತಿದೆ ಎಂಬುದು ಈ ಪ್ರಯೋಗವು ತೋರಿಸಿದೆ ಎಂದು ಚೀನಾದ ಸಂಶೋಧಕರು ಹೇಳಿದ್ದಾರೆ. ಈ ವರ್ಷದ ಆರಂಭದಲ್ಲಿ ಚೀನಾದ ವಿಜ್ಞಾನಿಗಳು 5ಜಿ ಗಿಂತ ಕನಿಷ್ಠ 100 ಪಟ್ಟು ವೇಗದ 6G ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ್ದಾರೆ ಎಂದು ಘೋಷಣೆ ಮಾಡಿದ್ದಾರೆ. 6G ಸಂಶೋಧಕರ ಪ್ರಕಾರ, ವಿಂಟರ್ ಒಲಿಂಪಿಕ್ ಕಾಂಪೌಂಡ್‌ನಲ್ಲಿ ಸ್ಥಾಪಿಸಲಾದ ಪ್ರಾಯೋಗಿಕ ವೈರ್‌ಲೆಸ್ ಲೈನ್ ಏಕಕಾಲದಲ್ಲಿ 10,000 HD ಲೈವ್ ವೀಡಿಯೊ ಫೀಡ್‌ಗಳನ್ನು ಸ್ಟ್ರೀಮ್ ಮಾಡಬಹುದು. ಇದು ಹೊಸ ಭೌತಿಕ ಆಯಾಮವನ್ನು ಪರಿಚಯಿಸಿದೆ. ಇದು ಬಹುತೇಕ ಮಿತಿಯಿಲ್ಲದ ಸಾಧ್ಯತೆಗಳೊಂದಿಗೆ ಸಂಪೂರ್ಣ ಹೊಸ ಜಗತ್ತಿಗೆ ಕಾರಣವಾಗಲಿದೆ ಎಂದು ಹೇಳಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries