HEALTH TIPS

ಏಕದಿನ ಸರಣಿ: ವೆಸ್ಟ್ ಇಂಡೀಸ್ ವಿರುದ್ಧ ವೈಟ್ ವಾಶ್ ಸಾಧನೆ ಮಾಡಿದ ಟೀಂ ಇಂಡಿಯಾ!

          ಅಹಮದಾಬಾದ್: ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 96 ರನ್ ಗಳಿಂದ ಗೆಲುವು ಸಾಧಿಸಿದ್ದು ವಿಂಡೀಸ್ ವಿರುದ್ಧ ವೈಟ್ ವಾಶ್ ಸಾಧನೆ ಮಾಡಿದೆ.


          ಅಹಮದಾಬಾದ್ ನಲ್ಲಿ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿ ಟೀಂ ಇಂಡಿಯಾ ಪರ ಶ್ರೇಯಸ್ ಅಯ್ಯರ್ 80 ಹಾಗೂ ರಿಷಬ್ ಪಂತ್ 56 ರನ್ ಬಾರಿಸಿದ್ದು ಭಾರತ 265 ಪೇರಿಸಲು ಸಾಧ್ಯವಾಯಿತು. ಟೀಂ ಇಂಡಿಯಾ ಪರ ರೋಹಿತ್ ಶರ್ಮಾ 13, ಶಿಖರ್ ಧವನ್ 10, ವಿರಾಟ್ ಕೊಹ್ಲಿ 0, ವಾಷಿಂಗ್ಟನ್ ಸುಂದರ್ 33, ದೀಪಕ್ ಚಹಾರ್ 38 ರನ್ ಬಾರಿಸಿದ್ದಾರೆ.

             ವೆಸ್ಟ್ ಇಂಡೀಸ್ ಪರ ಬೌಲಿಂಗ್ ನಲ್ಲಿ ಜೇಸನ್ ಹೋಲ್ಡರ್ 4, ಜೋಸೆಫ್ ಮತ್ತು ವಾಲ್ಶ್ ತಲಾ 2 ವಿಕೆಟ್ ಪಡೆದಿದ್ದರೆ ಸ್ಮಿತ್ ಮತ್ತು ಅಲೆನ್ ತಲಾ 1 ವಿಕೆಟ್ ಪಡೆದಿದ್ದಾರೆ.

             ಭಾರತ ನೀಡಿದ 266 ರನ್ ಗುರಿ ಬೆನ್ನಟ್ಟಿದ ವೆಸ್ಟ್ ಇಂಡೀಸ್ 169 ರನ್ ಗಳಿಗೆ ಆಲೌಟ್ ಆಗಿದ್ದು 96 ರನ್ ಗಳಿಂದ ಸೋಲು ಕಂಡಿದೆ. ಟೀಂ ಇಂಡಿಯಾ ಬೌಲರ್ ಗಳು ಆಕ್ರಮಣಕಾರಿ ಬೌಲಿಂಗ್ ನಡೆಸಿದರು. ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ ತಲಾ 3 ವಿಕೆಟ್ ಪಡೆದಿದ್ದರೆ ದೀಪಕ್ ಚಹಾರ್, ಕುಲದೀಪ್ ಯಾದವ್ ತಲಾ 2 ವಿಕೆಟ್ ಪಡೆದಿದ್ದಾರೆ.

            ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತ ಮೂರು ಪಂದ್ಯಗಳನ್ನು ಗೆಲ್ಲುವ ಮೂಲಕ ವೈಟ್ ವಾಶ್ ಸಾಧನೆ ಮಾಡಿದೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries