ಬೆಂಗಳೂರು: ಏರ್‌ಟೆಲ್‌ನ ಬ್ರಾಡ್‌ಬ್ಯಾಂಡ್ ಮತ್ತು ಮೊಬೈಲ್ ಸೇವೆ ಸ್ಥಗಿತಗೊಂಡಿದೆ. ದೇಶಾದ್ಯಂತ ಅನೇಕ ಬಳಕೆದಾರರು ಈ ಬಗ್ಗೆ ದೂರು ನೀಡುತ್ತಿದ್ದಾರೆ. ಈ ಬಗ್ಗೆ ಏರ್ ಟೆಲ್ ಬಳಕೆದಾರರು ಟ್ವಿಟ್ಟರ್ ನಲ್ಲಿಯೂ ದೂರುತ್ತಿದ್ದಾರೆ.
ಏರ್‌ಟೆಲ್ ನೆಟ್‌ವರ್ಕ್ ಸ್ಥಗಿತದಿಂದಾಗಿ ಇಂಟರ್ನೆಟ್ ಚಾಲನೆಯಲ್ಲಿಯೂ ಸಮಸ್ಯೆ ಇದೆ. ಈ ವಿಷಯದ ಬಗ್ಗೆ ಕಂಪನಿಯು ಇನ್ನೂ ಏನನ್ನೂ ಹೇಳಿಲ್ಲ. ಆದರೆ ಈ ಸಮಸ್ಯೆ ದೇಶಾದ್ಯಂತ ಇದೆ ಎಂದು ಆನ್‌ಲೈನ್ ವರದಿಗಳಲ್ಲಿ ಹೇಳಲಾಗಿದೆ. ಇದು ಏರ್‌ಟೆಲ್ ಮೊಬೈಲ್ ಇಂಟರ್ನೆಟ್ ಬಳಕೆದಾರರು ಮತ್ತು ಕಂಪನಿಯ ಬ್ರಾಡ್‌ಬ್ಯಾಂಡ್ ಮತ್ತು ವೈ-ಫೈ ಸೇವಾ ಬಳಕೆದಾರರ ಮೇಲೂ ಪರಿಣಾಮ ಬೀರುತ್ತಿದೆ.
ವರದಿಯ ಪ್ರಕಾರ, ಏರ್ ಟೆಲ್ ನ ಅಧಿಕೃತ ಅಪ್ಲಿಕೇಶನ್ ಅನ್ನು ಆಕ್ಸೆಸ್ ಮಾಡಲು ಸಾಧ್ಯವಾಗುತ್ತಿಲ್ಲ. ಈ ಸುದ್ದಿಯನ್ನು ಪ್ರಕಟಿಸುವವರೆಗೆ ಕಂಪನಿಯ ಸರ್ವರ್ ಡೌನ್ ಇತ್ತು. ಫೈಬರ್ ಇಂಟರ್ನೆಟ್‌ನಿಂದ ಬ್ರಾಡ್‌ಬ್ಯಾಂಡ್ ಮತ್ತು ಮೊಬೈಲ್ ನೆಟ್‌ವರ್ಕ್‌ಗಳಿಗೆ ಏರ್‌ಟೆಲ್ ಸಂಪರ್ಕಗಳು ಕಡಿಮೆಯಾಗಿವೆ. ದೆಹಲಿ, ಮುಂಬೈ, ನೋಯ್ಡಾ ಸೇರಿದಂತೆ ಬೇರೆ ಕಡೆಗಳಲ್ಲೂ ಈ ಸಮಸ್ಯೆ ಕಂಡುಬಂದಿದೆ.
ಔಟ್ಟೇಜ್ ಟ್ರ್ಯಾಕರ್ ಡೌನ್‌ಡೆಕ್ಟರ್ ಪ್ರಕಾರ, ಏರ್‌ಟೆಲ್ ಇಂದು ಬೆಳಗ್ಗೆ 11:30 ರಿಂದ ಇಂಟರ್ನೆಟ್ ಸಮಸ್ಯೆ ಉದ್ಭವವಾಗಿದೆ. ಅನೇಕ ಬಳಕೆದಾರರು ಈ ಬಗ್ಗೆ ದೂರಿದ್ದಾರೆ. ಗ್ರಾಹಕರು ಇಂತಹ ಸಮಸ್ಯೆಯನ್ನು ಎದುರಿಸುತ್ತಿರುವುದು ಇದು ಎರಡನೇ ಬಾರಿಗೆ. ಆದ್ರೆ, ಈ ವಿಷಯದ ಬಗ್ಗೆ ಕಂಪನಿಯು ಇನ್ನೂ ಏನನ್ನೂ ಹೇಳಿಲ್ಲ.
ಸಮಸ್ಯೆಗೆ ಕಾರಣ ಸದ್ಯಕ್ಕೆ ಸ್ಪಷ್ಟವಾಗಿಲ್ಲ. ಆದರೆ, ಏರ್‌ಟೆಲ್‌ನ ಅಧಿಕೃತ ಹೇಳಿಕೆ ಬಂದ ನಂತರವೇ ಈ ಬಗ್ಗೆ ಮಾಹಿತಿ ಹೊರಬೀಳಲಿದೆ. ಈ ವಾರದ ಆರಂಭದಲ್ಲಿ ಜಿಯೋ ಸೇವೆಯೂ ಡೌನ್ ಆಗಿತ್ತು. ಆದರೆ, ಸಮಸ್ಯೆ ಮುಂಬೈನಲ್ಲಿ ಮಾತ್ರ ಕಾಡಿತ್ತು.

