ಕೊಚ್ಚಿ: ರಾಜ್ಯದಲ್ಲಿ ಚಿನ್ನದ ಬೆಲೆ ಏರಿಕೆಯಾಗುತ್ತಿದೆ. ಒಂದು ಪವನ್ ಗೆ 800 ರೂ. ಏರಿಕೆಯಾಗಿದೆ. ಇದರೊಂದಿಗೆ ಪವನ್ ಚಿನ್ನದ ಬೆಲೆ 37,440 ರೂ.ಆಗಿ ಹೆಚ್ಚಳಗೊಂಡಿದೆ. ಪ್ರತಿ ಗ್ರಾಂಗೆ 100 ರೂ.ನಂತೆ ಹೆಚ್ಚಳಗೊಂಡಿದ್ದು ಒಂದು ಗ್ರಾಂ ಗೆ 4,680 ರೂ.ಆಗಿ ವರ್ಧನೆಗೊಂಡಿದೆ.
ಇಂದು ಈ ತಿಂಗಳ ಗರಿಷ್ಠ ಬೆಲೆ ದಾಖಲಾಗಿದೆ. ಕಳೆದ ಕೆಲವು ದಿನಗಳಿಂದ ಚಿನ್ನದ ಬೆಲೆಯಲ್ಲಿ ಏರಿಕೆಯಾಗುತ್ತಿದೆ. ಕಳೆದ ಶನಿವಾರ ಪವನ್ ಗೆ 36080 ರೂ. ಇತ್ತು. ಒಂದೇ ವಾರದಲ್ಲಿ 1360 ರೂಪಾಯಿ ಏರಿಕೆಯಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲೂ ಚಿನ್ನದ ಬೆಲೆ ಏರಿಕೆಯಾಗುತ್ತಿದೆ. ಈ ವ್ಯತ್ಯಾಸವು ದೇಶೀಯ ಮಾರುಕಟ್ಟೆಯಲ್ಲೂ ಪ್ರತಿಫಲಿಸುತ್ತದೆ.

