ಮಂಗಳೂರು : ಹಿಜಾಬ್ ವಿವಾದ ಕುರಿತ ಪ್ರಕರಣದ ಕರ್ನಾಟಕ ಹೈಕೋರ್ಟ್ ವಿಚಾರಣೆಯನ್ನು ನ್ಯಾಯಾಲಯದ ಯುಟ್ಯೂಬ್ ಚಾನಲ್‍ನಲ್ಲಿ ಲೈವ್ ಸ್ಟ್ರೀಮಿಂಗ್ ಮಾಡುತ್ತಿರುವುದು ಲಕ್ಷಾಂತರ ಮಂದಿಗೆ ಈ ಕುತೂಹಲಕಾರಿ ಪ್ರಕರಣದ ವಿಚಾರಣೆಯನ್ನು ನೇರವಾಗಿ ನೋಡುವ ಅವಕಾಶ ಒದಗಿಸಿದೆ.
0
samarasasudhi
ಫೆಬ್ರವರಿ 26, 2022
ಮಂಗಳೂರು : ಹಿಜಾಬ್ ವಿವಾದ ಕುರಿತ ಪ್ರಕರಣದ ಕರ್ನಾಟಕ ಹೈಕೋರ್ಟ್ ವಿಚಾರಣೆಯನ್ನು ನ್ಯಾಯಾಲಯದ ಯುಟ್ಯೂಬ್ ಚಾನಲ್‍ನಲ್ಲಿ ಲೈವ್ ಸ್ಟ್ರೀಮಿಂಗ್ ಮಾಡುತ್ತಿರುವುದು ಲಕ್ಷಾಂತರ ಮಂದಿಗೆ ಈ ಕುತೂಹಲಕಾರಿ ಪ್ರಕರಣದ ವಿಚಾರಣೆಯನ್ನು ನೇರವಾಗಿ ನೋಡುವ ಅವಕಾಶ ಒದಗಿಸಿದೆ.
ಈ ವರ್ಷಾರಂಭದಿಂದಲೇ ನ್ಯಾಯಾಲಯದ ಕಲಾಪಗಳನ್ನು ಯುಟ್ಯೂಬ್‍ನಲ್ಲಿ ಲೈವ್ ಸ್ಟ್ರೀಮ್ ಮಾಡುವುದನ್ನು ಕರ್ನಾಟಕ ಹೈಕೋರ್ಟ್ ಆರಂಭಿಸಿತ್ತು.
ಕರ್ನಾಟಕ ಹೈಕೋರ್ಟಿನ ಯುಟ್ಯೂಬ್ ಚಾನಲ್ ಚಂದಾದಾರರ ಸಂಖ್ಯೆಯೂ ಒಂದು ಲಕ್ಷ ದಾಟಿದೆ. ಹಿಜಾಬ್ ಪ್ರಕರಣದ ವಿಚಾರಣೆ ಫೆಬ್ರವರಿ 10ರಿಂದ ಫೆಬ್ರವರಿ 25ರವರೆಗೆ 11 ದಿನಗಳ ಕಾಲ ಪ್ರತಿ ದಿನ ಅಪರಾಹ್ನ 2.30ರಿಂದ ಸುಮಾರು 5 ಗಂಟೆ ತನಕ ನಡೆದಿದೆ.
ಸಾಮಾನ್ಯವಾಗಿ ಇತರ ಪ್ರಕರಣಗಳ ಲೈವ್ ಸ್ಟ್ರೀಮಿಂಗ್ ವೀಕ್ಷಿಸುವವರ ಸಂಖ್ಯೆ ಸಾಕಷ್ಟು ಇಲ್ಲದೇ ಇದ್ದರೂ ಹಿಜಾಬ್ ಪ್ರಕರಣವಂತೂ ಎಲ್ಲೆಡೆ ಭಾರೀ ಕುತೂಹಲ ಕೆರಳಿಸಿದೆ.
ಒಂದು ಹಂತದಲ್ಲಿ ಹಿಜಾಬ್ ಕಲಾಪವನ್ನು ಸುಮಾರು 25,000 ಮಂದಿ ವೀಕ್ಷಿಸಿದ್ದು ಇದು ಕೂಡ ಒಂದು ದಾಖಲೆಯೆಂದೇ ಹೇಳಲಾಗಿದೆ.