ಇಂಫಾಲ್: ಕೇಂದ್ರ ಸಚಿವೆ ಸ್ಮೃತಿ ಇರಾನಿ ಮಣಿಪುರದಲ್ಲಿ ಕಲಾವಿದರ ಜೊತೆ ಸಾಂಪ್ರದಾಯಿಕ ನೃತ್ಯಕ್ಕೆ ಹೆಜ್ಜೆ ಹಾಕಿದ್ದಾರೆ. ಇಂಫಾಲ್ ಪೂರ್ವದ ವಾಂಗ್ಖೆ ಪ್ರದೇಶದಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಅವರು ಕಲಾವಿದರ ಜೊತೆ ನೃತ್ಯ ಮಾಡಿದ್ದಾರೆ.
0
samarasasudhi
ಫೆಬ್ರವರಿ 18, 2022
ಇಂಫಾಲ್: ಕೇಂದ್ರ ಸಚಿವೆ ಸ್ಮೃತಿ ಇರಾನಿ ಮಣಿಪುರದಲ್ಲಿ ಕಲಾವಿದರ ಜೊತೆ ಸಾಂಪ್ರದಾಯಿಕ ನೃತ್ಯಕ್ಕೆ ಹೆಜ್ಜೆ ಹಾಕಿದ್ದಾರೆ. ಇಂಫಾಲ್ ಪೂರ್ವದ ವಾಂಗ್ಖೆ ಪ್ರದೇಶದಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಅವರು ಕಲಾವಿದರ ಜೊತೆ ನೃತ್ಯ ಮಾಡಿದ್ದಾರೆ.
ವಿಧಾನಸಭೆ ಚುನಾವಣೆ ನಡೆಯುತ್ತಿರುವ ಪಂಚ ರಾಜ್ಯಗಳ ಪೈಕಿ ಮಣಿಪುರವೂ ಸೇರಿದೆ. ಇಲ್ಲಿ ಫೆಬ್ರುವರಿ 28 ಮತ್ತು ಮಾರ್ಚ್ 5ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ಮಾರ್ಚ್ 10ರಂದು ಮತ ಎಣಿಕೆ ನಡೆಯಲಿದೆ.
ಈ ಹಿಂದೆ ಫೆಬ್ರುವರಿ 27 ಮತ್ತು ಮಾರ್ಚ್ ತಿಂಗಳಲ್ಲಿ ಮತದಾನಕ್ಕೆ ದಿನಾಂಕ ನಿಗದಿ ಮಾಡಲಾಗಿತ್ತು. ಬಳಿಕ, ರಾಜಕಾರಣಿಗಳು ಮತ್ತು ಸ್ಥಳೀಯರ ಮನವಿ ಮೇರೆಗೆ ಚುನಾವಣಾ ದಿನಾಂಕವನ್ನು ಚುನಾವಣಾ ಆಯೋಗ ಬದಲಾವಣೆ ಮಾಡಿತ್ತು.