HEALTH TIPS

ವೀಳ್ಯದೆಲೆ ಆರೋಗ್ಯಕ್ಕಷ್ಟೇ ಅಲ್ಲ, ಅಂದಕ್ಕೂ ಅದ್ಭುತ ಮದ್ದು!

 ಊಟದ ಬಳಿಕ ವೀಳ್ಯದೆಲೆ ಹಾಕಿಕೊಳ್ಳುವುದು ಬಹಳ ಹಿಂದಿನಿಂದಲೂ ನಡೆದುಕೊಂಡು ಬಂದ ವಾಡಿಕೆ. ಇದರಿಂದ, ಜೀರ್ಣಕ್ರಿಯೆ ಉತ್ತಮವಾಗುವುದರ ಜೊತೆಗೆ, ಬಾಯಿಯ ರುಚಿಯೂ ಹೆಚ್ಚಾಗುವುದು. ಆದರೆ ವೀಳ್ಯದೆಲೆ ಚರ್ಮಕ್ಕೂ ಪ್ರಯೋಜನಕಾರಿ ಎಂದು ನಿಮಗೆ ತಿಳಿದಿದೆಯೇ?

ಹೌದು, ವೀಳ್ಯದೆಲೆ ಆರೋಗ್ಯದ ಜೊತೆಗೆ ಸೌಂದರ್ಯವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದರ ಸಾಟಿಯಿಲ್ಲದ ಔಷಧೀಯ ಗುಣಗಳು ನಿಮ್ಮ ತ್ವಚೆಯ ಹೊಳಪನ್ನು ಹೆಚ್ಚಿಸುವುದರ ಜೊತೆಗೆ ಕಲೆಗಳನ್ನು ಹೋಗಲಾಡಿಸುವುದು. ಎಷ್ಟೋ ಹುಡುಗಿಯರ ಸೌಂದರ್ಯದ ಗುಟ್ಟು ವೀಳ್ಯದೆಲೆ ಎಂದರೆ ತಪ್ಪಾಗಲಾರದು. ಹಾಗಾದರೆ, ತ್ವಚೆಯ ಸಮಸ್ಯೆಗಳಿಗೆ ಇದನ್ನು ಬಳಸುವ ವಿಧಾನ ಹೇಗೆ ಎಂಬುದನ್ನು ಇಲ್ಲಿ ನೋಡೋಣ.

ತ್ವಚೆಯ ಸಮಸ್ಯೆ ನಿವಾರಣೆಗೆ ವೀಳ್ಯದೆಲೆ ಹೇಗೆ ಬಳಸಬೇಕು ಎಂಬುದನ್ನು ಈ ಕೆಳಗೆ ನೀಡಲಾಗಿದೆ:

ಮೊಡವೆಗಳ ನಿವಾರಣೆಗೆ:

ವೀಳ್ಯದೆಲೆಯು ಉರಿಯೂತದ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದ್ದು, ಇದು ಮೊಡವೆಗಳನ್ನು ತೆಗೆದುಹಾಕುವಲ್ಲಿ ಪರಿಣಾಮಕಾರಿಯಾಗಿದೆ. ಇದಕ್ಕಾಗಿ ನೀವು ಮಾಡಬೇಕಾಗಿರುವುದಿಷ್ಟೇ. ಕೆಲವು ವೀಳ್ಯದೆಲೆಗಳನ್ನು ತೆಗೆದುಕೊಂಡು ಪೇಸ್ಟ್‌ಮಾಡಿ, ಈಗ ಅದಕ್ಕೆ 2 ಚಿಟಿಕೆ ಅರಿಶಿನ ಮತ್ತು ಅಲೋವೆರಾ ಜೆಲ್ ಸೇರಿಸಿ ಮಿಶ್ರಣ ಮಾಡಿ, ಅದನ್ನು ನಿಮ್ಮ ಮುಖಕ್ಕೆ ಹಚ್ಚಿ ಮತ್ತು 20 ನಿಮಿಷಗಳ ಕಾಲ ಬಿಡಿ. ರಾತ್ರಿ ಮತ್ತೊಮ್ಮೆ ಈ ಪೇಸ್ಟ್ ಅನ್ನು ಮೊಡವೆಗಳಿರುವ ಜಾಗಕ್ಕೆ ಹಚ್ಚಿ, 20 ನಿಮಿಷಗಳ ನಂತರ ಮುಖವನ್ನು ತೊಳೆಯಿರಿ. ಮೊಡವೆಗಳು ಕ್ರಮೇಣ ಕಡಿಮೆಯಾಗಲು ಪ್ರಾರಂಭಿಸುವುದನ್ನು ನೀವು ಕಾಣಬಹುದು.

ಮುಖದ ಕಾಂತಿ ಸುಧಾರಣೆಗೆ:

ವೀಳ್ಯದೆಲೆಯ ಫೇಸ್ ಪ್ಯಾಕ್‌ನ್ನು ಹಲವು ವಿಧಗಳಲ್ಲಿ ಬಳಸಲಾಗುತ್ತದೆ. ಮುಖದ ಕಾಂತಿಯನ್ನು ಹೆಚ್ಚಿಸಲು, ಅದರ ಪೇಸ್ಟ್‌ಗೆ, 1 ಚಮಚ ಅಕ್ಕಿ ಹಿಟ್ಟನ್ನು ಮಿಶ್ರಣ ಮಾಡಿ. ಇದನ್ನು ನಿಮ್ಮ ಮುಖದ ಮೇಲೆ ಹಚ್ಚಿ ಸ್ವಲ್ಪ ಒಣಗಲು ಬಿಡಿ. 15 ನಿಮಿಷಗಳ ನಂತರ ನಿಮ್ಮ ಕೈಗಳನ್ನು ಒದ್ದೆ ಮಾಡಿಕೊಂಡು, ವೃತ್ತಾಕಾರದ ಚಲನೆಯಲ್ಲಿ ಮಸಾಜ್ ಮಾಡಲು ಪ್ರಾರಂಭಿಸಿ. 4 ರಿಂದ 5 ನಿಮಿಷಗಳ ಕಾಲ ಸ್ಕ್ರಬ್ ಮಾಡಿದ ನಂತರ ಸಾಮಾನ್ಯ ನೀರಿನಿಂದ ಮುಖವನ್ನು ಸ್ವಚ್ಛಗೊಳಿಸಿ. 4 ರಿಂದ 5 ದಿನಗಳಲ್ಲಿ, ನಿಮ್ಮದೇ ಆದ ವ್ಯತ್ಯಾಸವನ್ನು ನೋಡಲು ಪ್ರಾರಂಭಿಸುತ್ತೀರಿ.

ಚರ್ಮ ಸ್ವಚ್ಛಗೊಳಿಸುವಿಕೆಗೆ: ನಿಮ್ಮ ಬೆಳಿಗ್ಗೆ ಮತ್ತು ರಾತ್ರಿ ಚರ್ಮದ ಆರೈಕೆಯನ್ನು ಪ್ರಾರಂಭಿಸುವ ಮೊದಲು ವೀಳ್ಯದೆಲೆಯ ನೀರಿನಿಂದ ನಿಮ್ಮ ಮುಖವನ್ನು ತೊಳೆಯಿರಿ. ಇದರಿಂದ ಮುಖದಲ್ಲಿರುವ ಕೊಳೆ, ಕಲ್ಮಶಗಳು ಹೋಗಿ, ಸ್ವಚ್ಛವಾದ ಚರ್ಮ ನಿಮ್ಮದಾಗುವುದು. ಇದಕ್ಕಾಗಿ, ಮಾಡಬೇಕಾಗಿರುವುದು ಇಷ್ಟೇ, ಒಂದು ದೊಡ್ಡ ಪಾತ್ರೆಯಲ್ಲಿ ನೀರನ್ನು ಹಾಕಿ, ಅದಕ್ಕೆ 5 ರಿಂದ 6 ವೀಳ್ಯದೆಲೆಗಳನ್ನು ಹಾಕಿ, ನೀರು ಹಸಿರು ಬಣ್ಣಕ್ಕೆ ಬರುವವರೆಗೆ ಕುದಿಸಿ. ಅದು ಚೆನ್ನಾಗಿ ಕುದಿದ ನಂತರ ಗ್ಯಾಸ್ ಆಫ್ ಮಾಡಿ ಮತ್ತು ನೀರನ್ನು ಸೋಸಿ, ತಣ್ಣಗಾದ ಮೇಲೆ ಆ ನೀರಿನಿಂದ ನಿಮ್ಮ ಮುಖವನ್ನು ತೊಳೆಯಿರಿ. ಇದನ್ನು ಪ್ರತಿದಿನ ಮಾಡಬಹುದು.

ತುರಿಕೆಯನ್ನು ಶಮನಗೊಳಿಸಲು: ತುರಿಕೆ ಸಮಸ್ಯೆ ಯಾವುದೇ ಋತುವಿನಲ್ಲಿ ಪ್ರಾರಂಭವಾಗಬಹುದು. ಹಾಗೇನಾದರೂ, ಚರ್ಮ ತುರಿಕೆ ಸಮಸ್ಯೆ ಕಂಡುಬಂದಾಗ, ಬಿಸಿನೀರಿನಲ್ಲಿ ವೀಳ್ಯದೆಲೆಯನ್ನು ಬೆರೆಸಿ ಸ್ನಾನ ಮಾಡಿ. ಇದರಿಂದ ತುರಿಕೆ ನಿವಾರಣೆಯಾಗುವುದು. ಕೈಕಾಲುಗಳಲ್ಲಿ ಮಾತ್ರ ತುರಿಕೆ ಉಂಟಾದರೆ , ನೀರನ್ನು ಪ್ರತ್ಯೇಕವಾಗಿ ಬಿಸಿ ಮಾಡಿ ಅದರಲ್ಲಿ 6 ರಿಂದ 7 ವೀಳ್ಯದೆಲೆಗಳನ್ನು ಹಾಕಿ, ಚೆನ್ನಾಗಿ ಕುದಿಸಿ. ನಂತರ ಎಲೆಯನ್ನು ತೆಗೆದು, ನೀರನ್ನು ತಣ್ಣಗಾಗಿಸಿ, ಅದರಿಂದ ಕೈ ಕಾಲುಗಳನ್ನು ತೊಳೆಯಿರಿ. ಇದರಿಂದ ತುರಿಕೆ ಸಮಸ್ಯೆಗೆ ಪರಿಹಾರ ದೊರೆಯುವುದು.
ಕಲೆಗಳನ್ನು ಹೋಗಲಾಡಿಸಲು: ಕಲೆಗಳನ್ನು ಹೋಗಲಾಡಿಸಲು ವೀಳ್ಯದೆಲೆಯನ್ನೂ ಸಹ ಬಳಸಬಹುದು. ಆದರೆ, ನೀವು ಹೆಚ್ಚು ಸೂಕ್ಷ್ಮ ಚರ್ಮವನ್ನು ಹೊಂದಿದ್ದರೆ ಅದನ್ನು ಬಳಸಬೇಡಿ. ಕಲೆಗಳನ್ನು ತೆಗೆದುಹಾಕಲು, ಒಂದು ಚಮಚ ವೀಳ್ಯದೆಲೆ ಪುಡಿಯನ್ನು ತೆಗೆದುಕೊಂಡು ಅದಕ್ಕೆ, ರೋಸ್ ವಾಟರ್ ಮಿಶ್ರಣ ಮಾಡಿ ಪೇಸ್ಟ್ ಮಾಡಿ. ಈಗ ಅದನ್ನು ನಿಮ್ಮ ಮುಖಕ್ಕೆ ಹಚ್ಚಿಕೊಳ್ಳಿ. ಇದರಿಂದ ಮುಖದ ಕಲೆಗಳು ನಿಧಾನವಾಗಿ ಮಾಸುವುದು.




Tags

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries