ನವದೆಹಲಿ: ಛತ್ರಪತಿ ಶಿವಾಜಿ ಮಹಾರಾಜ್ ಜಯಂತಿ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಗೌರವ ನಮನ ಸಲ್ಲಿಸಿದರು.
0
samarasasudhi
ಫೆಬ್ರವರಿ 19, 2022
ನವದೆಹಲಿ: ಛತ್ರಪತಿ ಶಿವಾಜಿ ಮಹಾರಾಜ್ ಜಯಂತಿ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಗೌರವ ನಮನ ಸಲ್ಲಿಸಿದರು.
'ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯಂದು ಅವರಿಗೆ ನಮನ ಸಲ್ಲಿಸುತ್ತೇನೆ. ಶಿವಾಜಿ ಮಹಾರಾಜ್ ಅವರ ಅತ್ಯುತ್ತಮ ನಾಯಕತ್ವ, ಅವರು ಸಾಮಾಜಿಕ ಕಲ್ಯಾಣಕ್ಕೆ ನೀಡಿದ ಒತ್ತು ತಲೆಮಾರುಗಳಿಂದ ಜನರಿಗೆ ಪ್ರೇರಣೆಯಾಗಿದೆ. ಸತ್ಯ ಮತ್ತು ನ್ಯಾಯದ ಮೌಲ್ಯದ ಪರವಾಗಿ ನಿಲ್ಲಬೇಕಾದ ಸಂದರ್ಭಗಳಲ್ಲಿ ಅವರು ಯಾವತ್ತೂ ರಾಜಿ ಮಾಡಿಕೊಂಡಿರಲಿಲ್ಲ. ಅವರ ಆಶಯಗಳನ್ನು ಈಡೇರಿಸಲು ನಾವು ಬದ್ಧರಾಗಿದ್ದೇವೆ' ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
'ಮರಾಠ ರಾಜ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯಂದು ಅವರಿಗೆ ನಮನಗಳು. ನಿರ್ಭೀತಿ ಮತ್ತು ಅಸಾಧಾರಣ ಯುದ್ಧತಂತ್ರಗಳಿಗೆ ಹೆಸರುವಾಸಿಯಾಗಿದ್ದ ಅವರು ಆ ಕಾಲದಲ್ಲೇ ಅತ್ಯುತ್ತಮ ಆಡಳಿತಗಾರರಾಗಿದ್ದರು. ತಾಯ್ನೆಲದ ಮೇಲಿನ ಅವರ ಪ್ರೀತಿ ಪ್ರತಿಯೊಬ್ಬ ಭಾರತೀಯನಿಗೂ ಸ್ಫೂರ್ತಿ' ಎಂದು ವೆಂಕಯ್ಯ ನಾಯ್ಡು ಹೇಳಿದ್ದಾರೆ.