HEALTH TIPS

2ನೇ ಕ್ಲಾಸ್​ನಲ್ಲಿದ್ದಾಗ ಅವಮಾನ ಮಾಡಿದ ಟೀಚರ್​ಗೆ 30 ವರ್ಷಗಳ ಬಳಿಕ ಇರಿದು ಬರ್ಬರವಾಗಿ ಹತ್ಯೆ ಮಾಡಿದ!

             ಬೆಲ್ಜಿಯಂ: ಏಳನೇ ವಯಸ್ಸಿನಲ್ಲಿ ಟೀಚರ್ ಅವಮಾನಿಸಿದಕ್ಕೆ ಅವನು 30 ವರ್ಷಗಳ ನಂತರ 101 ಬಾರಿ ಇರಿದು ಕೊಂದಿರುವ ಘಟನೆ ಬೆಲ್ಜಿಯಂನಲ್ಲಿ ನಡೆದಿದೆ. ಕೊಲೆ ಯಾರು ಮಾಡಿದ್ದು ಎಂದು ನಿಗೂಢವಾಗಿ ಉಳಿದುಕೊಂಡಿದ್ದ ಪ್ರಕರಣ ಎರಡು ವರ್ಷಗಳ ಬಳಿಕ ಇದೀಗ ಬಹಿರಂಗಗೊಂಡಿದೆ.

             ಗೂಂಟರ್ ಊವೆಂಟ್ಸ್ ಎಂಬ ವ್ಯಕ್ತಿ ಇಂಥದ್ದೊಂದು ಕೃತ್ಯ ಎಸಗಿದ್ದಾನೆ. ಶಿಕ್ಷಕಿ ಮರಿಯಾ ವರ್ಲಿನ್ಡೆನ್ ಎಂಬುವವರನ್ನು 101 ಬಾರಿ ಇರಿದು ಕೊಂದಿದ್ದಾರೆ. ಈ ಕೊಲೆ ನಡೆದದ್ದು 2020ರಲ್ಲಿ. ಆದರೆ ಬೆಳಕಿಗೆ ಬಂದದ್ದು ಈಗ. ಅಂದರೆ ಎರಡು ವರ್ಷಗಳ ಬಳಿಕ!

             ಶಿಕ್ಷಕಿ ಮರಿಯಾ ವರ್ಲಿನ್ಡೆನ್ ಅವರ ರಕ್ತಸಿಕ್ತ ದೇಹ ಅವರ ಮನೆಯಲ್ಲಿ ಪತ್ತೆಯಾಗಿತ್ತು. ಮನೆಯಿಂದ ಯಾವುದೇ ಸಾಮಗ್ರಿ, ನಗದು, ಚಿನ್ನಾಭರಣ ದೋಚಿರಲಿಲ್ಲ. ಆದ್ದರಿಂದ ಇದು ದರೋಡೆಗಾಗಿ ನಡೆದ ಕೊಲೆಯಲ್ಲ, ಬದಲಿಗೆ ವೈಯಕ್ತಿಕ ದ್ವೇಷದಿಂದ ನಡೆದ ಕೊಲೆ ಎನ್ನುವುದು ಪೊಲೀಸರಿಗೆ ತಿಳಿದಿತ್ತು. ಆದರೆ ಜಪ್ಪಯ್ಯ ಎಂದರೂ ಕೊಲೆಯ ರಹಸ್ಯವನ್ನು ಭೇದಿಸಲು ಅವರಿಗೆ ಸಾಧ್ಯವೇ ಆಗಿರಲಿಲ್ಲ. ಏಕೆಂದರೆ ಶಿಕ್ಷಕಿಗೆ ಅಂಥ ಶತ್ರುಗಳು ಯಾರೂ ಇರಲಿಲ್ಲ. ಅನುಮಾನ ಬಂದ ನೂರಾರು ಜನರ ವಿಚಾರಣೆ ನಡೆಸಿ ಡಿ ಎನ್ ಎ ಪರೀಕ್ಷೆಗಳನ್ನು ನಡೆಸಿದಾಗ್ಯೂ ಹಂತಕನನ್ನು ಪತ್ತೆ ಮಾಡುವುದು ಸಾಧ್ಯವಾಗಿರಲಿಲ್ಲ.

             ಹೀಗೆಯೇ ಆಗಿದ್ದರೆ, ಈ ಕೊಲೆ ಕೇಸ್​ ಅಲ್ಲಿಗೇ ಮುಚ್ಚಿಹೋಗುವ ಹಂತದಲ್ಲಿತ್ತು. ಆದರೆ ಗೂಂಟರ್ ಊವೆಂಟ್ಸ್ ತಾವು ಏಳನೇ ವಯಸ್ಸಿನಲ್ಲಿ ಇದ್ದಾಗ ಈ ಶಿಕ್ಷಕಿ ತನ್ನ ಮನಸ್ಸಿಗೆ ಘಾಸಿಯಾಗುವಂತೆ ನಡೆದುಕೊಂಡಿದ್ದರಿಂದ ಆಕೆಯ ಕೊಲೆ ಮಾಡಿದೆ ಎಂದು ತನ್ನ ಆಪ್ತಮಿತ್ರನಲ್ಲಿ ಹೇಳಿಕೊಂಡಿದ್ದ. ಇದರಿಂದ ಗಾಬರಿಗೊಂಡಿದ್ದ ಆ ಸ್ನೇಹಿತ ಪೊಲೀಸರಲ್ಲಿ ಎರಡು ವರ್ಷಗಳವರೆಗೆ ಸುಮ್ಮನಿದ್ದರೂ, ಈ ಪ್ರಕರಣದ ತನಿಖೆ ಜೋರಾಗುತ್ತಿದ್ದಂತೆಯೇ ಪೊಲೀಸರಲ್ಲಿ ಹೇಳಿದ್ದಾನೆ.

ಇದರ ಆಧಾರದ ಮೇಲೆ ಗೂಂಟರ್ ಊವೆಂಟ್ಸ್ ನನ್ನು ಬಂಧಿಸಲಾಗಿದೆ. 7 ವರ್ಷದ ಬಾಲಕನಾಗಿದ್ದಾಗ ಟೀಚರ್ ಅವಹೇಳನಕಾರಿ ಕಾಮೆಂಟ್​ಗಳನ್ನು ಮಾಡುತ್ತಿದ್ದರು. ಇದನ್ನು ಮರೆಯುವುದು ಸಾಧ್ಯವೇ ಅಗಿರಲಿಲ್ಲ. ಪದೇ ಪದೇ ಆ ಅವಮಾನ ಕಾಡುತ್ತಿತ್ತು. ಆದ್ದರಿಂದ ಕೊಲೆ ಮಾಡಿದೆ ಎಂದು ಒಪ್ಪಿಕೊಂಡಿದ್ದಾನೆ.

              ಅಂದಹಾಗೆ ಗೂಂಟರ್ ಊವೆಂಟ್ಸ್ ನಿರಾಶ್ರಿತರಿಗೆ ತನ್ನ ಶಕ್ತಿಮೀರಿ ಸಹಾಯ ಮಾಡುತ್ತಿದ್ದುದರಿಂದ ಆತ ಬಹು ಜನಪ್ರಿಯತೆ ಗಳಿಸಿದ್ದ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries