HEALTH TIPS

ಜಪಾನ್ ಮುಂದಿನ ಐದು ವರ್ಷಗಳಲ್ಲಿ ಭಾರತದಲ್ಲಿ ರೂ. 3.2 ಲಕ್ಷ ಕೋಟಿ ಹೂಡಿಕೆ - ಪ್ರಧಾನಿ ಮೋದಿ

            ನವದೆಹಲಿ:  ಜಪಾನ್ ಮುಂದಿನ ಐದು ವರ್ಷಗಳಲ್ಲಿ ಭಾರತದಲ್ಲಿ ಐದು ಟ್ರಿಲಿಯನ್ ಯೆನ್ ಅಥವಾ ರೂ. 3. 2 ಲಕ್ಷ ಕೋಟಿ ಹೂಡಿಕೆ ಮಾಡಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

          ನಿನ್ನೆಯಿಂದ ಆರಂಭವಾದ ಭಾರತ-ಜಪಾನ್ ಆರ್ಥಿಕ ಶೃಂಗಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಪ್ರಗತಿ, ಸೌಹಾರ್ದತೆ ಮತ್ತು ಪಾಲುದಾರಿಕೆ ಭಾರತ- ಜಪಾನ್ ಸಂಬಂಧದ ಮೂಲ ಎಂದರು.

               ಜಪಾನ್ ದೇಶದಲ್ಲಿ ದೊಡ್ಡ ಹೂಡಿಕೆಯ ರಾಷ್ಟ್ರಗಳಲ್ಲಿ ಒಂದಾಗಿದ್ದು, ಮುಂಬೈ- ಅಹಮದಾಬಾದ್ ಹೈ ಸ್ಪೀಡ್ ರೈಲು ಕಾರಿಡಾರ್ ನಲ್ಲಿ ಒನ್ ಟೀಮ್- ಒನ್ ಪ್ರಾಜೆಕ್ಟ್ ರೀತಿಯಲ್ಲಿ ಭಾರತ- ಜಪಾನ್ ಕಾರ್ಯನಿರ್ವಹಿಸುತ್ತಿರುವುದಾಗಿ ತಿಳಿಸಿದರು. 

              ಭಾರತದೊಂದಿಗೆ ಸೇರಿ ಉಕ್ರೇನ್ ನಲ್ಲಿ ಯುದ್ಧ ಕೊನೆಗಾಣಿಸಿ, ಉಕ್ರೇನ್ ಮತ್ತು ಅದರ ನೆರೆಯ ರಾಷ್ಟ್ರಗಳಿಗೆ ನೆರವು ನೀಡಲು ಪ್ರಯತ್ನಿಸುತ್ತಿದ್ದೇವೆ. ಇಂಡೋ- ಫೆಸಿಪಿಕ್ ಪ್ರದೇಶದಲ್ಲಿ ಮುಕ್ತತೆಗಾಗಿ ಉಭಯ ದೇಶಗಳು ಪ್ರಯತ್ನವನ್ನು ಹೆಚ್ಚಿಸಬೇಕಾಗಿದೆ ಎಂದು ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿಡಾ ಹೇಳಿದರು. 

                  ಸೈಬರ್ ಭದ್ರತೆಯಲ್ಲಿ ಸಹಕಾರದ ಒಪ್ಪಂದವನ್ನು ನಾವು ಸ್ವಾಗತಿಸುತ್ತೇವೆ. ಶೀಘ್ರದಲ್ಲಿಯೇ ಭಾರತ- ಜಪಾನ್ ಮುಂದಿನ ಮಾತುಕತೆ ನಡೆಸುತ್ತೇವೆ. ಭಾರತ ಜಪಾನಿನ ಅತ್ಯಂತ ಪ್ರಮುಖ ಪಾಲುದಾರ ರಾಷ್ಟ್ರವಾಗಿದೆ. ಟೋಕಿಯೊದಲ್ಲಿನ ಕ್ವಾಡ್ ಶೃಂಗಸಭೆಗಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಹ್ವಾನಿಸಿರುವುದಾಗಿ ಕಿಶಿಡಾ ತಿಳಿಸಿದರು. 



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries