HEALTH TIPS

ಕೋವಿಶೀಲ್ಡ್‌: 8 ವಾರಗಳ ನಂತರ 2ನೇ ಡೋಸ್‌ಗೆ ಶಿಫಾರಸು

           ನವದೆಹಲಿ: ಕೋವಿಡ್‌ ಲಸಿಕೆ ಕೋವಿಶೀಲ್ಡ್‌ನ ಮೊದಲ ಡೋಸ್‌ ನೀಡಿದ ನಂತರ 8-16 ವಾರಗಳ ಅವಧಿಯಲ್ಲಿ ಎರಡನೇ ಡೋಸ್‌ ನೀಡಬಹುದು ಎಂದು ಕೋವಿಡ್‌-19 ಕುರಿತ ರಾಷ್ಟ್ರೀಯ ತಾಂತ್ರಿಕ ಸಲಹಾ ಸಮಿತಿ (ಎನ್‌ಟಿಎಜಿಐ) ಶಿಫಾರಸು ಮಾಡಿದೆ.

               ಪ್ರಸ್ತುತ, ಕೋವಿಶೀಲ್ಡ್‌ನ ಮೊದಲ ಡೋಸ್‌ ನೀಡಿದ ನಂತರ 12-16 ವಾರಗಳ ಅವಧಿಯಲ್ಲಿ ಎರಡನೇ ಡೋಸ್‌ ನೀಡಲಾಗುತ್ತಿದೆ.


               ಕೋವಿಶೀಲ್ಡ್‌ ಲಸಿಕೆಗೆ ಸಂಬಂಧಿಸಿದ ಈ ಶಿಫಾರಸನ್ನು ರಾಷ್ಟ್ರೀಯ ಕೋವಿಡ್‌-19 ಲಸಿಕೆ ಕಾರ್ಯಕ್ರಮದಡಿ ಇನ್ನೂ ಅನುಷ್ಠಾನಗೊಳಿಸಿಲ್ಲ.

                ಆದರೆ, ಭಾರತ್ ಬಯೋಟೆಕ್‌ ಉತ್ಪಾದಿಸುವ ಕೋವ್ಯಾಕ್ಸಿನ್‌ ಲಸಿಕೆಯ ಮೊದಲ ಡೋಸ್‌ ನೀಡಿದ 28 ದಿನಗಳ ನಂತರ ಎರಡನೇ ಡೋಸ್‌ ನೀಡಲಾಗುತ್ತಿದೆ. ಈ ಲಸಿಕೆಯ ಎರಡು ಡೋಸ್‌ಗಳ ನಡುವಿನ ಅಂತರ ಬದಲಾಯಿಸುವುದಕ್ಕೆ ಸಂಬಂಧಿಸಿ ಎನ್‌ಟಿಎಜಿಐ ಯಾವುದೇ ಶಿಫಾರಸು ಮಾಡಿಲ್ಲ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries