ಕಾಸರಗೋಡು|: ದೇಶ ಇಂದು ಅತಿಯಾದ ನಿರುದ್ಯೋಗ ಸಮಸ್ಯೆ ಎದುರಿಸುತ್ತಿದ್ದು, ಆರ್ಥಿಕ ವಲಯ ಸಂದಿಗ್ಧ ಪರಿಸ್ಥಿತಿ ಎದುರಿಸುತ್ತಿರುವುದಾಗಿ ಎಸ್‍ಟಿಯು ಕಾರ್ಮಿಕ ಸಂಘಟನೆ ರಾಷ್ಟ್ರೀಯ ಸಮಿತಿ ಅಧ್ಯಕ್ಷ, ವಕೀಲ ಎಂ. ರಹಮತ್ತುಲ್ಲ ತಿಳಿಸಿದ್ದಾರೆ.
ಅವರು ವಿವಿಧ ಬೇಡಿಕೆ ಮುಂದಿರಿಸಿ ಸಂಯುಕ್ತ ಹೋರಾಟಸಮಿತಿ ವತಿಯಿಂದ ಮಾ. 28ಹಾಗೂ 29ರಂದು ನಡೆಯಲಿರುವ ರಾಷ್ಟ್ರೀಯ ಮುಷ್ಕರ ಪ್ರಚಾರಾರ್ಥ ಜಿಲ್ಲಾ ಸಮಿತಿ Áಯೋಜಿಸಲಾಗಿದ್ದ ವಾಹನಪ್ರಚಾರಜಾಥಾ ಉದ್ಘಾಟಿಸಿ ಮಾತನಾಡಿದರು. ಕೇಂದ್ರ ಸರ್ಕಾರದ ಕೃಷಿಕ, ಕಾರ್ಮಿಕ ವಿರೋಧಿ ನೀತಿ ವಿರುದ್ಧ ನಡೆಯಲಿರುವ ಮುಷ್ಕರದಲ್ಲಿ ಎಲ್ಲ ವಿಭಾಗದ ಜನತೆ ಕೈಜೋಡಿಸುವಂತೆ ಅವರು ಮನವಿ ಮಾಡಿದರು. ಸಿಐಟಿಯು ಮುಖಂಡ ಭಾಸ್ಕರನ್ ಅಧ್ಯಕ್ಷತೆ ವಹಿಸಿದ್ದರು. ವಿವಿಧ ಕಾರ್ಮಿಕ ಸಂಘಟನೆಗಳ ಮುಖಂಡರಾದ ಪಿ.ಜಿ ದೇವ್, ಟಿ.ಕೆ ರಾಜನ್, ಎ.ಅಹಮ್ಮದ್ ಹಾಜಿ, ಶರೀಫ್ ಕೊಡವಂಜಿ, ಮುತ್ತಲಿಬ್ ಪಾರಕ್ಕಾಟ್, ಟಿ.ವಿ ಕುಞÂರಾಮನ್, ಅಬ್ದುಲ್‍ರಹಮಾನ್, ಕರಿವೆಳ್ಳೂರ್ ವಿಜಯನ್ ಮುಂತಾದವರು ಉಪಸ್ಥಿತರಿದ್ದರು. ಕೆ.ವಿ ಕೃಷ್ಣನ್ ಸ್ವಾಗತಿಸಿದರು.

