ಕಾಸರಗೋಡು: ವಿಶ್ವಕರ್ಮ ಸಮುದಾಯ ಉದುಮ ಏರೋಲ್ ಗ್ರಾಮ ಸಮಿತಿಗಾಗಿ ನಿರ್ಮಿಸುತ್ತಿರುವ ಕಚೇರಿ ಕಟ್ಟಡಕ್ಕೆ ಕುಟ್ಟಿಹೊಡೆಯುವ ಕಾರ್ಯಕ್ರಮ ಹಾಗೂ ನಿಧಿಸಂಗ್ರಹ ಅಭಿಯಾನ ಆರಂಭಗೊಂಡಿತು. ಅಜಾನೂರ್ ವಿಶ್ವಕರ್ಮ ಕ್ಷೇತ್ರದ ಅರ್ಚಕ ಎಂ.ಎಸ್ ಮಹೇಶ್ ಕುಮಾರ್ ಕುಟ್ಟಿಹೊಡೆಯುವ ಕಾರ್ಯ ನಡೆಸಿಕೊಟ್ಟರು. ಅಜನೂರ್ ವಿಶ್ವಕರ್ಮ ಸಮಿತಿ ಅಧ್ಯಕ್ಷ ಪುರುಷೋತ್ತಮನ್ ಆಚಾರಿ ನಿಧಿಸಂಗ್ರಹ ಕಾರ್ಯಕ್ರಮ ಉದ್ಘಾಟಿಸಿದರು. ಏರೋಲ್ ಗ್ರಾಮ ಸಮಿತಿ ಅಧ್ಯಕ್ಷ ಶಶಿಧರನ್ ಆಚಾರಿ ಅಧ್ಯಕ್ಷತೆ ವಹಿಸಿದ್ದರು. ಮೊದಲ ನಿಧಿಯನ್ನು ಉದ್ಯಮಿ ಕೆ. ಕಡಂಬಂಚೋಲಿಲ್ ಅವರಿಂದ ಭಾಸ್ಕರನ್ ಆಯತ್ತಾರ್ ಸ್ವೀಕರಿಸಿದರು.
ಅಂಬಾಪುರ ಶ್ರೀಭಗವತೀ ಕ್ಷೇತ್ರ ಸಮಿತಿ ಅಧ್ಯಕ್ಷ ಜನಾರ್ದನನ್ ಪಳ್ಳಂ, ಉದುಮ-ಕಳ್ನಾಡ್ ಗ್ರಾಮ ಸಮಿತಿ ಕಾರ್ಯದರ್ಶಿ ಜಯಚಂದ್ರನ್ ಆಚಾರಿ, ಅರಮಂಗಾನ ಗ್ರಾಮ ಸಮಿತಿ ಕಾರ್ಯದರ್ಶಿ ಕೆ.ಕೆ ಚಂದ್ರನ್ ಉಪಸ್ಥಿತರಿದ್ದರು. ಏರೋಲ್ ಸಮಿತಿ ಉಪಾಧ್ಯಕ್ಷ ವೈ. ಕೃಷ್ಣದಾಸ್ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಪಿಬಿಷ್ ಚಂದ್ರನ್ ವಂದಿಸಿದರು.

