ವರ್ಷದ ಬೇರೆಲ್ಲಾ ಕಾಲದಲ್ಲಿ ಮೂಲೆಗುಂಪಾದ ಫ್ರಿಡ್ಜ್ ಉಪಯೋಗಕ್ಕೆ ಬರೋದು ಬೇಸಿಗೆ ಕಾಲದಲ್ಲೇ.. ಬಿರು ಬೇಸಿಗೆಯಲ್ಲಿ ತಣ್ಣನೆಯ ನೀರು ಆರಾಮದಾಯಕ ಅನುಭವ ನೀಡುವುದು. ಅದೇ ಕಾರಣಕ್ಕೆ ಹೆಚ್ಚಿನವರು ಫ್ರಿಡ್ಜ್ ನ ಕೋಲ್ಡ್ ನೀರನ್ನೇ ಕುಡಿಯಲು ಬಯಸುತ್ತಾರೆ. ಆದರೆ, ಈ ಫ್ರಿಡ್ಜ್‌ನ ತಣ್ಣನೆಯ ನೀರು ಎಲ್ಲರಿಗೂ ಒಳ್ಳೆಯದಲ್ಲ. ಆರೋಗ್ಯಕ್ಕೆ ಸಂಬಂಧಿಸಿದಂತೆ ಅನೇಕ ಅಡ್ಡಪರಿಣಾಮಗಳನ್ನು ಉಂಟು ಮಾಡುವುದು. ಅದು ಹೇಗೆ? ಎಂತಹ ಹಾನಿ ಆಗುವುದು ಎಂಬುದನ್ನು ಈ ಲೇಖನದಲ್ಲಿ ನೋಡೋಣ.
ಫ್ರಿಜ್ ನೀರನ್ನು ಕುಡಿಯುವುದರಿಂದ ಆಗುವ ಅಡ್ಡಪರಿಣಾಮಗಳೇನು ಎಂಬುದನ್ನ ಈ ಕೆಳಗೆ ನೀಡಲಾಗಿದೆ:
ಫ್ರಿಜ್‌ನ ತಣ್ಣೀರಿನ ಅಡ್ಡ ಪರಿಣಾಮಗಳು:
ಬೇಸಿಗೆಯಲ್ಲಿ ಫ್ರಿಡ್ಜ್ ನೀರು ಎಲ್ಲರಿಗೂ ಒಳ್ಳೆಯದಲ್ಲ, ವಿಶೇಷವಾಗಿ ದುರ್ಬಲ ರೋಗನಿರೋಧಕ ಶಕ್ತಿ ಹೊಂದಿರುವ ಜನರಿಗೆ ಇದು ಅಪಾಯದ ಅಂಶವಾಗಿದೆ. ರೋಗನಿರೋಧಕ ಶಕ್ತಿ ಉತ್ತಮವಾಗಿರುವವರಿಗೆ ಇದು ಸಮಸ್ಯೆಯಲ್ಲ, ಆದರೆ ರೋಗನಿರೋಧಕ ಶಕ್ತಿ ದುರ್ಬಲವಾಗಿರುವವರಿಗೆ ಇದು ದೊಡ್ಡ ಸಮಸ್ಯೆಯಾಗಬಹುದು. ತಣ್ಣೀರು ಕುಡಿಯುವುದರಿಂದ ರೋಗನಿರೋಧಕ ಶಕ್ತಿ ಕಡಿಮೆ ಇರುವವರಲ್ಲಿ ಗಂಟಲು ನೋವು, ಕೆಮ್ಮು ಅಥವಾ ಯಾವುದೇ ರೀತಿಯ ಸೋಂಕಿಗೆ ಕಾರಣವಾಗಬಹುದು. ಆದ್ದರಿಂದ ದುರ್ಬಲ ರೋಗನಿರೋಧಕ ಶಕ್ತಿ ಹೊಂದಿರುವವರು ಫ್ರಿಡ್ಜ್‌ನಲ್ಲಿರುವ ತಣ್ಣೀರಿನಿಂದ ದೂರವಿರಬೇಕು ಎಂದು ತಜ್ಞರು ಹೇಳುತ್ತಾರೆ.
ಬೇಸಿಗೆಯಲ್ಲಿ ಯಾವ ರೀತಿಯ ನೀರು ಕುಡಿಯಬೇಕು?:
ರೋಗನಿರೋಧಕ ಶಕ್ತಿ ದುರ್ಬಲವಾಗಿರುವ ಜನರು ತಮ್ಮ ಕೋಣೆಯ ಉಷ್ಣಾಂಶಕ್ಕೆ ಸಮಾನವಾದ ನೀರನ್ನು ಕುಡಿಯಬೇಕು ಎಂದು ತಜ್ಞರು ಹೇಳುತ್ತಾರೆ. ಬೆಚ್ಚಗಿನ ಅಥವಾ ಉಗುರುಬೆಚ್ಚನೆಯ ನೀರು ಆರೋಗ್ಯಕ್ಕೆ ತುಂಬಾ ಒಳ್ಳೆಯದು, ಆದರೆ ಬೇಸಿಗೆಯಲ್ಲಿ ಅಂತಹ ನೀರನ್ನು ಕುಡಿಯಲು ಸಾಧ್ಯವಾಗದಿದ್ದರೆ, ನಿಮ್ಮ ಕೋಣೆಯ ಉಷ್ಣಾಂಶಕ್ಕೆ ಸಮಾನವಾದ ನೀರನ್ನು ಕುಡಿಯಬೇಕು. ಇದು ನಿಮ್ಮ ಆರೋಗ್ಯವನ್ನು ಉತ್ತಮವಾಗಿಡುತ್ತದೆ ಮತ್ತು ಅನಾರೋಗ್ಯಕ್ಕೆ ಒಳಗಾಗುವುದೂ ತಪ್ಪುತ್ತದೆ. ಇದಕ್ಕಾಗಿ ನೀವು ಮಡಕೆ ನೀರನ್ನು ಬಳಸಬಹುದು.
ಕೋಲ್ಡ್ ನೀರಿನಿಂದ ಉಂಟಾಗುವ ಸಮಸ್ಯೆಗಳು:
ಫ್ರಿಜ್‌ನಲ್ಲಿಟ್ಟ ನೀರು ಕುಡಿಯುವುದರಿಂದ ಈ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು, ಅವುಗಳೆಂದರೆ:
- ಗಂಟಲು ನೋವು
- ಗಂಟಲಿನ ಸೋಂಕು
- ಕೆಮ್ಮು-ಜ್ವರ
- ತಲೆನೋವು
- ಮಲಬದ್ಧತೆ ಸಮಸ್ಯೆ
- ರೋಗನಿರೋಧಕ ಶಕ್ತಿ ದುರ್ಬಲಗೊಳ್ಳುವುದು
ತಣ್ಣೀರು ಕುಡಿಯುವುದರಿಂದ ಕರೋನಾ ಬರಬಹುದೇ?:
ಫ್ರಿಡ್ಜ್ ನೀರು ಕುಡಿದರೆ ಕರೋನಾ ಸೋಂಕು ತಗಲುತ್ತದೆ ಎಂದಲ್ಲ, ಆದರೆ ಬಿಸಿನೀರು ನಮ್ಮ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ ಎಂಬುದು ನಿಜ. ಅದೇ ಸಮಯದಲ್ಲಿ, ನಾವು ತಣ್ಣೀರನ್ನು ಬಳಸಿದಾಗ, ನಮ್ಮ ದೇಹವು ದುರ್ಬಲಗೊಳ್ಳುತ್ತದೆ. ಇದು ಸೋಂಕಿನ ಅಪಾಯವನ್ನು ಹೆಚ್ಚಿಸಬಹುದು. ಬಿಸಿನೀರು ಕುಡಿಯುವುದರಿಂದ ಹಲವಾರು ಪ್ರಯೋಜನಗಳಿವೆ, ಉದಾಹರಣೆಗೆ ಗಂಟಲು ಮತ್ತು ಮೂಗಿಗೆ ಸಂಬಂಧಿಸಿದ ಅನೇಕ ರೀತಿಯ ಸೋಂಕುಗಳನ್ನು ಇದು ತೊಡೆದುಹಾಕುತ್ತದೆ. ಹಾಗಾಗಿ ವೈದ್ಯರು ಸಾಮಾನ್ಯ ದಿನಗಳಲ್ಲಿ ಬಿಸಿ ನೀರು ಕುಡಿಯಲು ಸಲಹೆ ನೀಡುತ್ತಾರೆ.




