ಕಣ್ಣೂರು: ಸಿಪಿಎಂ ಪಕ್ಷದ ಸಮ್ಮೇಳನದ ಅಂಗವಾಗಿ ಜಿಲ್ಲೆಯ ವಿವಿಧೆಡೆ ಮುಚ್ಚಿಲೊಟ್ಟು ಭಗವತಿ ಮೂರ್ತಿ ದ್ಯೆವದ ಚಿತ್ರ ಬಳಸಿ ಪ್ರಚಾರ ನಡೆಸಲಾಯಿತು. ಕೂತುಪರಂಬು, ಪಾಪ್ಪನಸ್ಸೆರಿ, ಪಲ್ಲಿಪೊಯಿಲ್‌ನಂತಹ ವಿವಿಧೆಡೆ ಪ್ರಚಾರ ಫಲಕಗಳಲ್ಲಿ ಭಗವತಿಯ ಚಿತ್ರವನ್ನು ಬಳಸಲಾಗಿತ್ತು.
ಮಲಬಾರಿನ ಸುಮಾರು 108 ಮುಚ್ಚಿಲೋಟ್ ಕಾವುಗಳಲ್ಲಿ ಮುಚ್ಚಿಲೋಟ್ ಭಗವತಿಯನ್ನು ಲಕ್ಷಗಟ್ಟಲೆ ವಾಣಿಯ ಸಮುದಾಯದವರು ಕುಲದೇವತೆಯಾಗಿ ಪೂಜಿಸುತ್ತಾರೆ. ಆಚಾರ-ವಿಚಾರಗಳೊಂದಿಗೆ ಸಂಪೂರ್ಣ ರಕ್ಷಣೆ ಮಾಡಬೇಕಾದ ಆದಿವಾಸಿಗಳ ಆರಾಧ್ಯ ದೈವದ ವಿಕೃತ ಪ್ರದರ್ಶನದ ವಿರುದ್ಧ ಪ್ರತಿಭಟನೆ ಬಲವಾಗಿದೆ.




