ಕಾಸರಗೋಡು: ಅಸಂಘಟಿತ ಕಾರ್ಮಿಕರ ಸಂಘಟನೆ(ಬಿಎಂಎಸ್)ಕಾಸರಗೋಡು ಜಿಲ್ಲಾ ಸಮಾವೇಶ ಬಿಎಂಎಸ್ ಕಚೇರಿಯಲ್ಲಿ ಜರುಗಿತು. ಒಕ್ಕೂಟ್ ರಾಜ್ಯ ಸಮಿತಿ ಅಧ್ಯಕ್ಷ ಪಿ.ಜಿ ಹರಿಕುಮಾರ್ ಸಮಾವೇಶ ಉದ್ಘಾಟಿಸಿದರು.
ಕಾಸರಗೋಡು ಸೇರಿದಂತೆ ದೇಶದ ನಾನಾ ಕಡೆ ಅಸಂಘಟಿತ ವಲಯದಲ್ಲಿ ಹೆಚ್ಚಿನ ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದಾರೆ. ಈ ವಲಯದಲ್ಲಿ ಕೆಲಸ ನಿರ್ವಹಿಸುತ್ತಿರುವ ಕಾರ್ಮಿಕರಿಗಾಗಿ ಜಾರಿಗೊಳಿಸಲಾಗಿರುವ ಅಸಂಘಟಿತ ಕಾರ್ಮಿಕರ ಕ್ಷೇಮನಿಧಿ ಕಚೇರಿಗಳನ್ನು ಪ್ರತಿ ಜಿಲ್ಲೆಯಲ್ಲಿ ತೆರೆಯಬೇಕು, ಅಸಂಘಟಿತ ವಲಯದ ಕಾರ್ಮಿಕರ ಹಿತ ಕಾಯಬೇಕು, ಕಾರ್ಮಿಕರ ಕ್ಷೇಮನಿಧಿ ಸಂರಕ್ಷಿಸಬೇಕು, ಕನಿಷ್ಠ ಪಿಂಚಣಿ ಮೊತ್ತವನ್ನು 5ಸಾವಿರ ನಿಗದಿಪಡಿಸಬೇಕು ಮುಂತಾದ ಬೇಡಿಕೆ ಈಡೇರಿಸುವಂತೆ ಸರ್ಕಾರವನ್ನು ಆಗ್ರಹಿಸಲಾಯಿತು.
ಸಂಘಟನೆ ಜಿಲ್ಲಾಧ್ಯಕ್ಷ ಎಂ.ಕೆ ರಾಘವನ್ ಅಧ್ಯಕ್ಷತೆ ವಹಿಸಿದ್ದರು. ಗೋವಿಂದನ್ ಮಡಿಕೈ, ಬಾಬುಮೋನ್, ಪುರುಷೋತ್ತಮನ್, ಅನೀಶ್ ಉಪಸ್ಥಿತರಿದ್ದರು.




