ಕಾಸರಗೋಡು: ಕ.ಸಾ.ಪ. ಗಡಿನಾಡ ಘಟಕದ ಸಭಾಂಗಣದಲ್ಲಿ ಕನ್ನಡ ಹೋರಾಟ ಸಮಿತಿ ಅಧ್ಯಕ್ಷ ನ್ಯಾಯವಾದಿ ಕೆ.ಎಂ.ಮುರಳೀಧರ ಬಳ್ಳಕ್ಕುರಾಯ ಅವರ ಅಧ್ಯಕ್ಷತೆಯಲ್ಲಿ ಕನ್ನಡ ಹೋರಾಟ ಸಮಿತಿ ಸಭೆ ಶನಿವಾರ ಸಂಜೆ ನಡೆಯಿತು.
ಸಭೆಯಲ್ಲಿ ವಿವಿಧ ಕನ್ನಡ ಸಮಸ್ಯೆಗಳ ಕುರಿತು ಚರ್ಚಿಸಿ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಮುಂದಿನ ಕ್ರಮದ ಬಗ್ಗೆ ಮಾಹಿತಿ ಕ್ರೋಢೀಕರಿಸಲಾಯಿತು. ಕನ್ನಡ ಹೋರಾಟ ಸಮಿತಿ ಕಾರ್ಯದರ್ಶಿ ಕೆ.ಭಾಸ್ಕರ, ಕನ್ನಡ ಸಾಹಿತ್ಯ ಪರಿಷತ್ ಕೇರಳ ಗಡಿನಾಡ ಘಟಕ ಅಧ್ಯಕ್ಷ ಎಸ್.ವಿ.ಭಟ್, ವಿಶಾಲಾಕ್ಷ ಪುತ್ರಕಳ, ಟಿ.ಶಂಕರನಾರಾಯಣ ಭಟ್, ನ್ಯಾಯವಾದಿ ಸದಾನಂದ ರೈ, ಗಣೇಶ್ ಪ್ರಸಾದ್ ಪಾಣೂರು, ಡಾ.ರತ್ನಾಕರ ಮಲ್ಲಮೂಲೆ, ಸತೀಶ್ ಮಾಸ್ತರ್ ಕೂಡ್ಲು, ಎಂ.ವಿ.ಮಹಾಲಿಂಗೇಶ್ವರ ಭಟ್, ಪಿ.ಜಯ ಕುಮಾರ್, ಲಕ್ಷ್ಮಣ ಪ್ರಭು ಕುಂಬಳೆ, ಶ್ರೀಶ ಪಂಜಿತ್ತಡ್ಕ, ಪ್ರದೀಪ್ ರೈ ಬೇಳ ಮೊದಲಾದವರು ಮಾತನಾಡಿದರು.
ಮುಂದಿನ ಸಭೆ ಇದೇ ಸಭಾಂಗಣದಲ್ಲಿ ಎ.9 ರಂದು ಮಧ್ಯಾಹ್ನ 2.30 ರಿಂದ ನಡೆಸಲು ತೀರ್ಮಾನಿಸಲಾಯಿತು.




