ಪೆರ್ಲ: ಪೆರ್ಲ ಪೇಟೆಯಿಂದ ಗುಂಡ್ಯಡ್ಕ ಶಿವಗಿರಿ ಸೂರ್ಡೇಲು ಹಾಗೂ ಸ್ವರ್ಗ, ಪಾಣಾಜೆಯಿಂದ ಕನ್ಯಾರುಮೂಲೆ ದಾರಿಯಾಗಿ ಕಾಟುಕುಕ್ಕೆ ಪಿಲಿಂಗಲ್ಲು ಸಂಪರ್ಕಿಸುವ ಸೂರ್ಡೇಲು ಕನ್ಯಾರುಮೂಲೆ ನೀರ್ಚಾಲು ಕಾಂಕ್ರೀಟ್ ರಸ್ತೆಯನ್ನು ಬ್ಲಾಕ್ ಪಂಚಾಯಿತಿ ಸದಸ್ಯ ಕೆ.ಬಟ್ಟು ಶೆಟ್ಟಿ ಭಾನುವಾರ ಉದ್ಘಾಟಿಸಿದರು. ಶಿವಗಿರಿ 5ನೇ ವಾರ್ಡ್ ಸದಸ್ಯೆ ಇಂದಿರಾ ನಾಯ್ಕ್, ಸ್ಥಳೀಯರಾದ ಜೋರ್ಜ್ ನಡುಮ್ನಿಲಂ, ಕೆ.ವೈ.ಸುಬ್ರಹ್ಮಣ್ಯ ಭಟ್, ಸುನಿಲ್ ಪಿಲಿಂಗಲ್ಲು ಹಾಗೂ ರಸ್ತೆ ಫಲಾನುಭವಿಗಳು ಉಪಸ್ಥಿತರಿದ್ದರು.
ಮಂಜೇಶ್ವರ ಬ್ಲಾಕ್ ಪಂಚಾಯಿತಿ 2021-22 ಸಾಲಿನ ಆರ್ಥಿಕ ವರ್ಷದ ಯೋಜನೆಯಂತೆ ಸುಮಾರು 5 ಲಕ್ಷ ಅನುದಾನದಲ್ಲಿ ಕನ್ಯಾರುಮೂಲೆ ನೀರ್ಚಾಲು ರಸ್ತೆಯ ಆರಂಭದ ಸುಮಾರು 150 ಮೀ.ಭಾಗದ ಕಾಂಕ್ರೀಟ್ ಕಾಮಗಾರಿ ನಡೆದಿದೆ. ಎಣ್ಮಕಜೆ ಪಂಚಾಯಿತಿ 9ನೇ ವಾರ್ಡ್ ಪೆರ್ಲ ಈಸ್ಟ್, 8 ನೇ ವಾರ್ಡ್ ಕಜಂಪಾಡಿ, 5 ನೇ ವಾರ್ಡ್ ಶಿವಗಿರಿ ಹಾಗೂ 6ನೇ ವಾರ್ಡ್ ಸ್ವರ್ಗ ಕನ್ಯಾರುಮೂಲೆ ಮೂಲಕ ಈ ರಸ್ತೆ 4ನೇ ವಾರ್ಡ್ ಕಾಟುಕುಕ್ಕೆಯ ನೀರ್ಚಾಲು ಪಿಲಿಂಗಲ್ಲು ಸಂಪರ್ಕಿಸುತ್ತಿದೆ.
2002ರಲ್ಲಿ ಕಾಟುಕುಕ್ಕೆ ವಾರ್ಡ್ ಸದಸ್ಯರಾಗಿದ್ದ ಬಟ್ಟು ಶೆಟ್ಟಿ ಮುತುವರ್ಜಿಯಲ್ಲಿ ಈ ರಸ್ತೆ ನಿರ್ಮಿಸಲಾಗಿದ್ದರೂ ಕನ್ಯಾರುಮೂಲೆ -ನೀರ್ಚಾಲು ಸಂಪರ್ಕ ಸಾಧ್ಯವಾಗಿರಲಿಲ್ಲ. ಫಲಾನುಭವಿಗಳ ಕೋರಿಕೆಯಂತೆ ಸುದರ್ಶನ ಕ್ರಿಯಾ ಸಮಿತಿ ನೇತೃತ್ವದಲ್ಲಿ ಈ ಭಾಗದಲ್ಲಿ ಸ್ಥಳ ಖರೀದಿಸಿದ್ದ ಕೋಟ್ಟಾಯಂ ಜಿಲ್ಲೆಯ ಸ್ಥಳದ ಮಾಲಕರಲ್ಲಿ ರಸ್ತೆ ಸಂಪರ್ಕದ ಅಗತ್ಯವನ್ನು ಮನವರಿಕೆ ಮಾಡಿ ಸ್ಥಳ ಬಿಟ್ಟು ಕೊಡುವಂತೆ ಭಿನ್ನವಿಸಿ ಅವರ ಒಪ್ಪಿಗೆಯಂತೆ ಫಲಾನುಭವಿಗಳಿಂದ ಸಂಗ್ರಹಿಸಿದ ಲಕ್ಷಾಂತರ ರೂ. ವೆಚ್ಚದಲ್ಲಿ ಸುದರ್ಶನ ಮೇಲ್ನೋಟದಲ್ಲಿ 2017 ರ ಮಾರ್ಚ್ 4 ರಂದು ಕನ್ಯಾರುಮೂಲೆ ನೀರ್ಚಾಲು ಸಂಪರ್ಕ ರಸ್ತೆ ನಿರ್ಮಿಸಲಾಗಿದೆ.
ಇತಿಹಾಸ ಪ್ರಸಿದ್ಧ ಮಾಯಿಲಾಂಕೋಟೆ, ಸೂರ್ಡೇಲು ವ್ಯೂ ಪಾಯಿಂಟ್ ಇದೇ ಭಾಗದಲ್ಲಿದೆ. ಪೆರ್ಲ- ಗುಂಡ್ಯಡ್ಕ- ಶಿವಗಿರಿ - ಬೆದ್ರಕ್ಕಾಡ್, ಸ್ವರ್ಗ- ಸೂರಂಬೈಲುಕಟ್ಟೆ - ಕನ್ಯಾರುಮೂಲೆ, ಪಾಣಾಜೆ-ಸೂರಂಬೈಲುಕಟ್ಟೆ - ಕನ್ಯಾರುಮೂಲೆ, ಸ್ವರ್ಗ - ಮಲೆತ್ತಡ್ಕ ಜಟಾಧಾರಿ ಮೂಲಸ್ಥಾನ- ದುಗ್ಗಜ್ಜಮೂಲೆ- ಬೆದ್ರಕ್ಕಾಡ್ ಮೂಲಕ ಕಾಟುಕುಕ್ಕೆ ವಾರ್ಡ್ ಪಿಲಿಂಗಲ್ಲು ನೀರ್ಚಾಲು ಸಂಪರ್ಕ ಸಾಧ್ಯವಾಗಿದೆ.




