ಬದಿಯಡ್ಕ: ಕಾಸರಗೋಡು ಜಿಲ್ಲಾ ಮೊಗೇರ ಸಂಘದ ಬೆಳ್ಳಿ ಹಬ್ಬ ಆಚರಣೆಯ ಸಲುವಾಗಿ ಹಮ್ಮಿಕೊಳ್ಳಲಾದ ಒಂದು ವರ್ಷದ ಕಾರ್ಯಕ್ರಮದ ಅಂಗವಾಗಿ ಆದೂರು ಕೊಯಕುಡ್ಲು ಕೊರಗಜ್ಜ ದೈವಸ್ಥಾನದ ಪರಿಸರದಲ್ಲಿ ತೆಂಗಿನ ಗಿಡ ನೆಡುವ ಕಾರ್ಯಕ್ರಮವನ್ನು ಜಿಲ್ಲಾ ಸಮಿತಿ ಸದಸ್ಯರಾದ ಗುರು ಚೆನ್ನಕೋಡ್ ಹಾಗೂ ರಾಮ ಪಟ್ಟಾಜೆ ನೇತೃತ್ವ ನೀಡಿದರು. ಇವರೊಂದಿಗೆ ಜಿಲ್ಲಾ ಅಧ್ಯಕ್ಷ ರಾಮಪ್ಪ ಮಂಜೇಶ್ವರ, ಕಾರ್ಯದರ್ಶಿ ಹರಿಶ್ಚಂದ್ರ ಪುತ್ತಿಗೆ ಹಾಗೂ ಮತ್ತಿತರರು ಉಪಸ್ಥಿತರಿದ್ದರು.




