ಮಂಜೇಶ್ವರ: ಕೇರಳ ಸರ್ಕಾರದ ಆಡಳಿತದಲ್ಲಿ ಸ್ತ್ರೀ ದೌರ್ಜನ್ಯ, ಅತ್ಯಾಚಾರ ಹೆಚ್ಚಾಗಿದ್ದು ಕೇರಳ ಪೋಲೀಸ್ ಇಲಾಖೆ ಅತ್ಯಾಚಾರಿಗಳನ್ನು ಸಂರಕ್ಷಿಸುವ ಕೆಲಸ ಮಾಡುತ್ತಿದೆ ಎಂದು ಬಿಜೆಪಿ ಜಿಲ್ಲಾ ಕಾರ್ಯದರ್ಶಿ ವಿಜಯ ಕುಮಾರ್ ರೈ ಆರೋಯಿಸಿದರು.
ಮಂಜೇಶ್ವರ ಮಂಡಲ ಬಿಜೆಪಿ ನೇತೃತ್ವ ದಲ್ಲಿ ವರ್ಕಾಡಿ ಮಜೀರ್ಪಳ್ಳದಲ್ಲಿ ಜರಗಿದ ಸ್ತ್ರೀ ಸಂರಕ್ಷಣೆಗೆ ನಾರಿ ಶಕ್ತಿ ಎಂಬ ಘೋಷಣೆಯಲ್ಲಿ ಬಿಜೆಪಿ ಕಾರ್ಯಕ್ರಮ ಹಮ್ಮಿಕೊಂಡಿತ್ತು.
ತುಳಸಿ ಕುಮಾರಿ ಅಧ್ಯಕ್ಷತೆ ವಹಿಸಿದ್ದರು. ಮಹಿಳಾ ಮೋರ್ಚಾ ರಾಷ್ಟ್ರೀಯ ಸಮಿತಿ ಸದಸ್ಯೆ ಅಶ್ವಿನಿ ಪಜ್ವ, ಮಮತಾ ಕುಲಾಲ್, ಸರೋಜ ಬಲ್ಲಾಳ್, ಆದರ್ಶ್ ಬಿಎಂ, ಹರಿಶ್ಚಂದ್ರ ಎಂ, ಸುಬ್ರಹ್ಮಣ್ಯ ಭಟ್, ಎ.ಕೆ. ಕೈಯ್ಯಾರ್, ಅಶಲತಾ ಪೇಲಪಾಡಿ,ರಾಜಕುಮಾರ್, ರಕ್ಷಣ್ ಅಡಕಲಕಟ್ಟೆ ಉಪಸ್ಥಿತರಿದ್ದರು. ಚಂದ್ರಹಾಸ ಪೂಜಾರಿ ಸ್ವಾಗತಿಸಿ, ರವಿರಾಜ್. ವಂದಿಸಿದರು.




