ಕುಂಬಳೆ: ಕಣಿಪುರ ಶ್ರೀ ಗೋಪಾಲ ಕೃಷ್ಣ ದೇವಸ್ಥಾನದ ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶಾಭಿಷೇಕ ಸಮಿತಿಯ ವಾರ್ಷಿಕ ಮಹಾ ಸಭೆ ಇತ್ತೀಚೆಗೆ ಕ್ಷೇತ್ರ ಪರಿಸರದಲ್ಲಿ ಬಿ. ರಘುನಾಥ ಪೈಯವರ ಅಧ್ಯಕ್ಷತೆಯಲ್ಲಿ ಜರಗಿತು.
ಜಯಕುಮಾರ್ ವರದಿ ಮತ್ತು ಉದನೇಶ್ವರ ಭಟ್ ಲೆಕ್ಕ ಪತ್ರ ಗಳನ್ನು ಮಂಡಿಸಿದರು. ಮಂಜುನಾಥ ಆಳ್ವ, ಕೃಷ್ಣರಾಜ ವರ್ಮ, ವಿದ್ಯಾ ಪೈ, ಸುಧಾಕರ ಕಾಮತ್, ಕೆ..ಸಿ. ಮೋಹನ್, ಅಣ್ಣಪ್ಪ ಮಾಸ್ತರ್, ಮಧುಸೂದನ ಕಾಮತ್, ಪುಂಡರೀಕಾಕ್ಷಾ ಕೆ.ಎಲ್, ರಘುನಾಥ್ ಪೈ, ಶಂನಾ ಅಡಿಗ ಕುಂಬಳೆ ಶುಭಾಶಂಸನೆ ಗೈದರು. ಶಂಕರ ಆಳ್ವ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಕ್ರಂ ಪೈ ಸ್ವಾಗತಿಸಿ, ವಂದಿಸಿದರು. ಶಶಿಕಲಾ ಟೀಚರ್ ನಿರೂಪಿಸಿದರು.




