ಕಾಸರಗೋಡು: ಉನ್ನತ ಶಿಕ್ಷಣ, ಕಾನೂನು ಸಹಾಯ ಹಾಗೂ ಆರ್ಥಿಕ ಸಬಲೀಕರಣದೊಂದಿಗೆ ಕೇರಳದ ಪರಿಶಿಷ್ಟ ವರ್ಗದ ಜನತೆಯ ಜೀವನಮಟ್ಟ ಸುಧಾರಿಸುವ ನಿಟ್ಟಿನಲ್ಲಿ ಸರ್ಕಾರ ಎಲ್ಲ ರೀತಿಯ ಶ್ರಮ ನಡೆಸುತ್ತಿರುವುದಾಗಿ ಶಾಸಕ ಇ.ಚಂದ್ರಶೇಖರನ್ ತಿಳಿಸಿದ್ದಾರೆ.
ಅವರು ಕಾಞಂಗಾಡು ಅಲಾಮಿಪಳ್ಳಿಯಲ್ಲಿ ಪರಿಶಿಷ್ಟ ವರ್ಗ ಅಭಿವೃದ್ಧಿ ಇಲಾಖೆ ಅಧೀನದಲ್ಲಿ ಜಿಲ್ಲಾಮಟ್ಟದ ಪಾರಂಪರಿಕ ಗೋತ್ರ ಕಲಾ ಪ್ರದರ್ಶನ, ಮಾರಾಟ ಮೇಳ'ದುಡಿ ತಾಳ-2022'ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕಾಞಂಗಾಡು ನಗರಸಭಾ ಅಧ್ಯಕ್ಷೆ ಕೆ.ವಿ ಸಉಜಾತಾ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಧಿಕಾರಿ ಭಂಡಾರಿ ಸವಾಗತ್ ರಣವೀರ್‍ಚಂದ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಬ್ಲಾಕ್ ಪಂಚಾಯಿತಿ ಅಧ್ಯಕ್ಷ ಕೆ. ಮಣಿಕಂಠನ್, ನಗರಸಭಾ ಉಪಾಧ್ಯಕ್ಷ ಅಬ್ದುಲ್ಲ ಬಿಲ್ಟೆಕ್, ಸ್ಥಾಯೀ ಸಮಿತಿ ಸದಸ್ಯರು, ಜನಪ್ರತಿನಿಧಿಗಳು, ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಂಗವಾಗಿ ಮಂಗಳಂಕಳಿ, ಕೊರಗ ನೃತ್ಯ, ಸಿಂಗರಿ ಮೇಳ, ಮರಾಟಿ ನೃತ್ಯ ಆಯೋಜಿಸಲಾಗಿತ್ತು. ಪ. ವರ್ಗದ ಜನತೆ ಪಾರಂಪರಿಕವಾಗಿ ತಯಾರಿಸುವ ವಾದ್ಯೋಪಕರಣ ಸೇರಿದಂತೆ ವಿವಿಧ ಪರಿಕರಗಳಿಗೆ ಮಾರುಕಟ್ಟೆ ಒದಗಿಸುವ ನಿಟ್ಟಿನಲ್ಲಿ ಮೇಳ ಅಯೋಜಿಸಲಾಗಿತ್ತು. ಮೂರು ದಿವಸಗಳ ಕಾಲ ನಡೆದ ಕಲಾ, ಸಂಸ್ಕøತಿಕ ಮೇಳಕ್ಕೆ ದುಡಿ ವಾದ್ಯೋಪಕರಣ ನುಡಿಸುವ ಮೂಲಕ ಶಾಸಕ ಇ.ಚಂದ್ರಶೇಖರನ್ ಚಾಲನೆ ನೀಡಿದರು.




