ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಮೂರು ದಶಕಗಳಿಂದ ಗಡಿಯಾಚೆಗಿನ ಭಯೋತ್ಪಾದನೆಯನ್ನು ಉತ್ತೇಜಿಸುತ್ತಿದ್ದ ಪಾಕಿಸ್ತಾನವು ತನ್ನ ಕಾರ್ಯವೈಖರಿಯನ್ನು ಬದಲಿಸಿದ್ದು, ಧರ್ಮ ಮತ್ತು ಶೋಷಣೆಯ ಹೆಸರಿನಲ್ಲಿ ಯುವಕರ ಮನಪರಿವರ್ತನೆ ಮಾಡುತ್ತಿದೆ ಎಂದು ಅಧಿಕಾರಿಗಳು ಭಾನುವಾರ ಹೇಳಿದ್ದಾರೆ.
0
samarasasudhi
ಮಾರ್ಚ್ 20, 2022
ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಮೂರು ದಶಕಗಳಿಂದ ಗಡಿಯಾಚೆಗಿನ ಭಯೋತ್ಪಾದನೆಯನ್ನು ಉತ್ತೇಜಿಸುತ್ತಿದ್ದ ಪಾಕಿಸ್ತಾನವು ತನ್ನ ಕಾರ್ಯವೈಖರಿಯನ್ನು ಬದಲಿಸಿದ್ದು, ಧರ್ಮ ಮತ್ತು ಶೋಷಣೆಯ ಹೆಸರಿನಲ್ಲಿ ಯುವಕರ ಮನಪರಿವರ್ತನೆ ಮಾಡುತ್ತಿದೆ ಎಂದು ಅಧಿಕಾರಿಗಳು ಭಾನುವಾರ ಹೇಳಿದ್ದಾರೆ.
ಹಣಕಾಸು ಕಾರ್ಯಪಡೆಯ (ಎಫ್‌ಎಟಿಎಫ್) ಬೂದುಪಟ್ಟಿಯಿಂದ ಹೊರಬರಲು ಪ್ರಯತ್ನಿಸುತ್ತಿರುವ ಪಾಕಿಸ್ತಾನವು ಇಂತಹ ಹೊಸ ತಂತ್ರವನ್ನು ಅನುಸರಿಸುತ್ತಿದೆ ಎಂದಿದ್ದಾರೆ.
ಆಜಾದಿ (ಸ್ವಾತಂತ್ರ್ಯ) ಹೆಸರಿನಲ್ಲಿ ಪಾಕಿಸ್ತಾನದ ಐಎಸ್‌ಐ ಆರಂಭಿಸಿದ್ದ ಭಯೋತ್ಪಾದನಾ ಚಟುವಟಿಕೆಗಳು ನಿಧಾನವಾಗಿ ತೀವ್ರತೆ ಕಳೆದುಕೊಳ್ಳುತ್ತಿದೆ ಎಂದೂ ಅಧಿಕಾರಿಗಳು ತಿಳಿಸಿದ್ದಾರೆ.
2016ರಿಂದಲೂ ಎಫ್‌ಎಟಿಎಫ್‌ನ ಬೂದುಪಟ್ಟಿಯಿಂದ ಹೊರಬರಲು, ದಿ ರೆಸಿಸ್ಟೆನ್ಸಿ ಫ್ರಂಟ್ (ಟಿಆರ್‌ಎಫ್), ಕಾಶ್ಮೀರ್ ಟೈಗರ್ಸ್(ಕೆ.ಟಿ), ಕಾಶ್ಮೀರ್ ಜನ್‌ಬಾಜ್ ಫೋರ್ಸ್ (ಕೆಜೆಎಫ್) ಮೊದಲಾದ ಭಯೋತ್ಪಾದಕ ಸಂಘಟನೆಗಳನ್ನು ಐಎಸ್‌ಐ ರಚಿಸಿದೆ ಎಂದೂ ಹೇಳಿದ್ದಾರೆ.