ನವದೆಹಲಿ: ಉತ್ತರ ಪ್ರದೇಶದಲ್ಲಿ ಸರ್ಕಾರಿ ಆದೇಶದ ಪ್ರಕಾರ 6,031 ಧಾರ್ಮಿಕ ಕೇಂದ್ರಗಳಲ್ಲಿ ಪೊಲೀಸರು ಧ್ವನಿ ವರ್ಧಕಗಳನ್ನು ತೆರವುಗೊಳಿಸಿದ್ದು, 30,000 ಧ್ವನಿವರ್ಧಕಗಳಲ್ಲಿನ ಶಬ್ದವನ್ನು ಕಡಿಮೆ ಮಾಡಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.
ರಾಜ್ಯಾದ್ಯಂತ ಧ್ವನಿವರ್ಧಕಗಳ ತೆರವು ಹಾಗೂ ಶಬ್ದ ಕಡಿಮೆ ಮಾಡುವ ಅಭಿಯಾನ ನಡೆಯುತ್ತಿದ್ದು ಕೆಲವು ಧ್ವನಿವರ್ಧಕಗಳಲ್ಲಿ ಅನುಮತಿ ನೀಡಲಾದ ಪ್ರಮಾಣಕ್ಕೆ ಶಬ್ದವನ್ನು ನಿಗದಿಪಡಿಸಲಾಗುತ್ತಿದೆ ಎಂದು ಡಿಜಿಪಿ (ಕಾನೂನು ಸುವ್ಯವಸ್ಥೆ) ಪ್ರಶಾಂತ್ ಕುಮಾರ್ ತಿಳಿಸಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಬುಧವಾರ ಮಧ್ಯಾಹ್ನದ ವರೆಗೆ 6,031 ಧ್ವನಿವರ್ಧಕಗಳನ್ನು ತೆರವುಗೊಳಿಸಲಾಗಿದೆ. 29,674 ಧ್ವನಿವರ್ಧಕಗಳನ್ನು ಅನುಮತಿ ನೀಡಲಾಗಿರುವ ಶಬ್ದಕ್ಕೆ ಬದಲಾವಣೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಕಾನೂನು ಸುವ್ಯವಸ್ಥೆಗೆ ಸಂಬಂಧಿಸಿದಂತೆ ನಡೆಸಿದ ಸಭೆಯಲ್ಲಿ ಧ್ವನಿ ವರ್ಧಕಗಳ ತೆರವು ಕಾರ್ಯಾಚರಣೆಗೆ ಆದೇಶಿಸಿದ್ದರು.
ಜನರಿಗೆ ತಮ್ಮ ನಂಬಿಕೆಗಳ ಪ್ರಕಾರ ಮತವನ್ನು ಅನುಸರಿಸುವ, ಪಾಲಿಸುವ ಸ್ವಾತಂತ್ರ್ಯವಿದೆ. ಆದರೆ ಮೈಕ್ರೋಫೋನ್ ಗಳನ್ನು ಬಳಕೆ ಮಾಡುವಂತಿಲ್ಲ ಹಾಗೂ ಅನುಮತಿ ನೀಡಿರುವುದಕ್ಕಿಂತಲೂ ಹೆಚ್ಚಿನ ಶಬ್ದ ಧಾರ್ಮಿಕ ಕೇಂದ್ರಗಳಿಂದ ಹೊರಗೆ ಬರಬಾರದು ಜನರಿಗೆ ಯಾವುದೇ ತೊಂದರೆಯೂ ಆಗಬಾರದು ಎಂದು ಸಿಎಂ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರ ಆದೇಶ ಹೊರಡಿಸಿತ್ತು.




.jpg)
