ತಿರುವನಂತಪುರಂ: ಸಿಲ್ವರ್ ಲೈನ್ ವಿರೋಧಿ ಅಭಿಯಾನದ ವಿರುದ್ಧ ಹೋರಾಡಲು ಸರ್ಕಾರ ಸಿದ್ದತೆ ನಡೆಸಿದೆ. ಕೆ-ರೈಲ್ ಜಾಗೃತಿಗಾಗಿ ಮಂತ್ರಿಗಳು ನೇರವಾಗಿ ಮನೆಗಳಿಗೆ ತೆರಳಲಿದ್ದಾರೆ. ಸರ್ಕಾರದ ಪರ ಪ್ರಚಾರವನ್ನು ಬಲಪಡಿಸಲು ಡಿವೈಎಫ್‌ಐ ಕೂಡ ಮುಂದೆಬಂದಿದೆ. ಮನೆ ಮನೆಗೆ ತೆರಳಿ ಪ್ರಚಾರ ಮಾಡುತ್ತೇನೆ ಎಂದು ಸಚಿವ ಎಂ.ವಿ.ಗೋವಿಂದನ್ ಹೇಳಿರುವರು. ಪುನರ್ವಸತಿ ಮತ್ತು ಪರಿಹಾರವನ್ನು ಖಾತರಿಪಡಿಸಿದ ನಂತರ ಭೂಮಿ ಹಸ್ತಾಂತರಿಸಿದರೆ ಸಾಕೆಂದು ಸರ್ಕಾರ ಹೇಳಿದೆ. ಸ್ಥಳೀಯ ಸಂಸ್ಥೆಗಳಲ್ಲೂ ಜಾಗೃತಿ ಮೂಡಿಸಲಾಗುವುದು ಎಂದು ಸಚಿವರು ತಿಳಿಸಿದರು.
ಸಿಲ್ವರ್‌ಲೈನ್‌ನಲ್ಲಿ ಎಲ್‌ಡಿಎಫ್‌ನ ರಾಜಕೀಯ ವಿವರಣಾತ್ಮಕ ಸಭೆಗಳು ಇಂದು ಪ್ರಾರಂಭವಾಗಲಿವೆ. ಮೊದಲ ಸಭೆಯನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಉದ್ಘಾಟಿಸಲಿದ್ದಾರೆ. ಮುಂದಿನ ದಿನಗಳಲ್ಲಿ ಜಿಲ್ಲಾವಾರು ಸಭೆ, ಸಮಾಲೋಚನೆ ನಡೆಸಲು ಎಲ್‌ಡಿಎಫ್ ನಿರ್ಧರಿಸಿದೆ. ಜನರು ವಿರೋಧವನ್ನು ಮುಂದುವರೆಸಿದ ಹಿನ್ನೆಲೆಯಲ್ಲಿ ಈ ಕ್ರಮಕ್ಕೆ ಮುಂದಾಗಬೇಕಾಯಿತೆಂದು ಸರ್ಕಾರ ಹೇಳಿದೆ. ಸಿಪಿಎಂ ಪಕ್ಷದ ಕಾಂಗ್ರೆಸ್ ನ ನಿರ್ಣಯದ ಹಿನ್ನೆಲೆಯಲ್ಲಿ ರಕ್ಷಣಾ ಅಭಿಯಾನಗಳನ್ನು ಪ್ರಾರಂಭಿಸಲಾಗುತ್ತಿದೆ.




