ತಿರುವನಂತಪುರಂ: ಸಿಪಿಎಂ ಕೇಂದ್ರ ಸಮಿತಿ ಸದಸ್ಯ ಇಪಿ ಜಯರಾಜನ್ ಎಲ್ ಡಿಎಫ್ ಸಂಚಾಲಕರಾಗಲಿದ್ದಾರೆ. ಎ.ವಿಜಯರಾಘವನ್ ರಾಜೀನಾಮೆ ನೀಡುವ ಹಿನ್ನೆಲೆಯಲ್ಲಿ ಜಯರಾಜನ್ ಸಂಚಾಲಕರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ನಾಳೆ ನಡೆಯುವ ರಾಜ್ಯ ಸಮಿತಿ ಸಭೆಯ ನಂತರ ಅಧಿಕೃತ ಘೋಷಣೆ ಹೊರಬೀಳಲಿದೆ. ಪಕ್ಷದ ರಾಜ್ಯ ಕಾರ್ಯದರ್ಶಿಯದ್ದೇ ಅಂತಿಮ ನಿರ್ಧಾರವಾಗಿದೆ.
ಎ.ವಿಜರಾಘವನ್ ಪಾಲಿಟ್ ಬ್ಯೂರೋ ಸದಸ್ಯರಾಗಿರುವ ಕಾರಣ ಇ.ಪಿ.ಜಯರಾಜನ್ ಎಲ್ ಡಿಎಫ್ ಸಂಚಾಲಕರಾಗಲಿದ್ದಾರೆ. ಪಾಲಿಟ್ ಬ್ಯೂರೋ ಸದಸ್ಯರಾಗಿ ದಿಲ್ಲಿಯತ್ತ ಗಮನ ಹರಿಸಬೇಕಾಗಿರುವುದರಿಂದ ವಿಜರಾಘವನ್ ಸ್ಥಾನ ಬಿಟ್ಟುಕೊಡಲಿದ್ದಾರೆ.
ಮೊದಲ ಪಿಣರಾಯಿ ಸರ್ಕಾರದ ಅವಧಿಯಲ್ಲಿ ಇ.ಪಿ.ಜಯರಾಜನ್ ಅವರು ಕೈಗಾರಿಕೆ ಸಚಿವರಾಗಿದ್ದರು, ಆದರೆ ಸ್ವಜನಪಕ್ಷಪಾತದ ವಿವಾದದಿಂದ ಸ್ವಲ್ಪ ಕಾಲ ಸಚಿವ ಸ್ಥಾನವನ್ನು ತೆರವು ಮಾಡಿ ನಂತರ ಮರಳಿದರು.




