ಲಂಡನ್: ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರು ಭಾರತದ ಪ್ರವಾಸಕ್ಕೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ, ಅವರು 'ಪಾರ್ಟಿಗೇಟ್'ಗೆ (ಕೊರೊನಾ ಲಾಕ್‌ಡೌನ್ ಉಲ್ಲಂಘಿಸಿ ಸಂಭ್ರಮದಲ್ಲಿ ತೊಡಗುವುದು) ಸಂಬಂಧಿಸಿದ ಹೊಸ ಹಗರಣಗಳಲ್ಲಿ ಸಿಲುಕಿಕೊಂಡಿದ್ದಾರೆ.
0
samarasasudhi
ಏಪ್ರಿಲ್ 18, 2022
ಲಂಡನ್: ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರು ಭಾರತದ ಪ್ರವಾಸಕ್ಕೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ, ಅವರು 'ಪಾರ್ಟಿಗೇಟ್'ಗೆ (ಕೊರೊನಾ ಲಾಕ್‌ಡೌನ್ ಉಲ್ಲಂಘಿಸಿ ಸಂಭ್ರಮದಲ್ಲಿ ತೊಡಗುವುದು) ಸಂಬಂಧಿಸಿದ ಹೊಸ ಹಗರಣಗಳಲ್ಲಿ ಸಿಲುಕಿಕೊಂಡಿದ್ದಾರೆ.
2020ರಲ್ಲಿ ಅವರ ಹುಟ್ಟುಹಬ್ಬದ ಪ್ರಯುಕ್ತ ಅವರ ಪತ್ನಿ ಕ್ಯಾರಿ ಅವರು ಸಂಪುಟದ ಕೊಠಡಿಗೆ ಕೇಕ್ ತಂದು ಕತ್ತರಿಸಿದ ಪ್ರಕರಣದಲ್ಲಿ ಜಾನ್ಸನ್ ಅವರು ಈಗಾಗಲೇ ದಂಡ ಪಾವತಿಸಿದ್ದಾರೆ. ಇದೇ ಪ್ರಕರಣದಲ್ಲಿ ಬ್ರಿಟನ್ ಚಾನ್ಸಲರ್ ರಿಷಿ ಸುನಾಕ್ ಅವರಿಗೂ ದಂಡ ಹಾಕಲಾಗಿದೆ.
ಆದರೆ ಬ್ರಿಟನ್ ಪೊಲೀಸರು ತನಿಖೆ ನಡೆಸುತ್ತಿರುವ 12 ಲಾಕ್‌ಡೌನ್ ಪಾರ್ಟಿಗಳ ಪೈಕಿ ಸುಮಾರು 6 ಪಾರ್ಟಿಗಳು ಜಾನ್ಸನ್ ಅವರಿಗೆ ಸಂಬಂಧಿಸಿದ್ದು ಎಂದು ಮೂಲಗಳನ್ನು ಆಧರಿಸಿ ಇಲ್ಲಿನ ಮಾಧ್ಯಮಗಳು ವರದಿ ಮಾಡಿವೆ.
ಈ ವರದಿಗಳನ್ನು ಆಧಾರವಾಗಿಟ್ಟುಕೊಂಡು ಪ್ರಧಾನಿ ಬೋರಿಸ್ ಜಾನ್ಸನ್ ವಿರುದ್ಧ ಪ್ರತಿಪಕ್ಷಗಳು ವಾಗ್ದಾಳಿ ನಡೆಸಿವೆ.