ಮುಂಬೈ: ದೇಶದಲ್ಲಿ ಹಿಂದು ಮುಸ್ಲಿಂ ನಡುವಿನ ಕೋಮು ಸಂಘರ್ಷ ಜೋರಾಗಿದ್ದು ಸಮುದಾಯಗಳ ನಡುವೆ ಹಿಂಸಾಚಾರದ ಬೆಂಕಿ ಹೊತ್ತಿ ಉರೀತಿದೆ. ಈ ಬಿಸಿಯ ಮಧ್ಯೆಯೂ ಮಹಿಳೆಯೊಬ್ಬರ ಕಾರ್ಯ ನೆಟ್ಟಿಗರ ಮನಗೆದ್ದಿದೆ. ಮುಂಬೈ ಮಹಿಳೆಯು ಮುಸ್ಲಿಂ ಯುವಕನಿಗೆ ನಮಾಜ್ ಮಾಡಲು ಅವಕಾಶ ಕೊಟ್ಟಿರೋದು ಮೆಚ್ಚುಗೆ ಗಳಿಸಿದೆ.
ಪ್ರಿಯಾ ಸಿಂಗ್ ಎಂಬ ಮಹಿಳೆ ತಮ್ಮ ಲಿಂಕ್ಡ್ಇನ್ ಪುಟದಲ್ಲಿ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಅವರು ಆ ಫೋಟೋ ಕಥೆಯನ್ನು ವಿವರಿಸಿದ್ದಾರೆ.
ನಾನು ವಿಮಾನ ನಿಲ್ದಾಣದಿಂದ ಕ್ಯಾಬ್ ತೆಗೆದುಕೊಂಡು ಹೊರಟೆ. 10 ನಿಮಿಷಗಳ ನಂತರ ಡ್ರೈವರ್ ಮೊಬೈಲ್‌ನಲ್ಲಿ ಆಜಾನ್ ಪ್ಲೇ ಮಾಡಲು ಪ್ರಾರಂಭಿಸಿದರು. ನಾನು ಅವರನ್ನು ಇಫ್ತಾರ್ ಕಿಯಾ ಅಪ್ನೆ ಎಂದು ಕೇಳಿದೆ, ಅದಕ್ಕವರು ಹಾ, ಇಂದು ಬಾಡಿಗೆ ಇದ್ದಿದ್ದರಿಂದ ರಸ್ತೆಯಲ್ಲೇ ಸಮಯ ಕಳೆದೋಗಿದೆ ಎಂದರು.
ನಾನು ಮತ್ತೆ ಅವರನ್ನು ನೀವು ನಮಾಜ್ ಮಾಡಲು ಬಯಸುತ್ತೀರಾ ಎಂದು ಪ್ರಶ್ನಿಸಿದೆ. ನಾನು ಮಾಡಬಹುದೇ ಎಂದು ಅವರು ಪಶ್ನಿಸಿದರು. ನಂತರ ಅವರು ಕ್ಯಾಬ್ ನ ಹಿಂಭಾಗದ ಸೀಟಿನಲ್ಲಿ ಪ್ರಾರ್ಥನೆ ಮಾಡಲು ಕಾರನ್ನು ರೋಡ್ ಬದಿಯಲ್ಲಿ ನಿಲ್ಲಿಸಿದೆವು ಎಂದು ತಾವು ಮುಂದಿನ ಸೀಟ್ ನಲ್ಲಿ ಕುಳಿತಿರೋ ಫೋಟೋ ತೆಗೆದು ಪೋಸ್ಟ್ ಮಾಡಿದ್ದಾರೆ.
ನಾವು ಸಾಮರಸ್ಯದ ಬಗ್ಗೆ ಸುದೀರ್ಘವಾಗಿ ಮಾತನಾಡಿದ್ದೇವೆ. ಇದು ನನಗೆ ನನ್ನ ಪೋಷಕರು ಕಲಿಸಿದ ಭಾರತದ ಬದುಕು. ಎಲ್ಲಾ ಸಾಮಾಜಿಕ ಮಾಧ್ಯಮಗಳಲ್ಲಿ ಮಾನವೀಯತೆಯ ಮೂಲಭೂತ ಅಂಶಗಳನ್ನು ಉತ್ತೇಜಿಸಲು ಇದನ್ನು ಪೋಸ್ಟ್ ಮಾಡಲು ನಾನು ಬಯಸುತ್ತೇನೆ ಎಂದು ಪ್ರಿಯಾಸಿಂಗ್ ಹೇಳಿದ್ದಾರೆ..





