ಕುಂಬಳೆ: ಕುಂಬಳೆ ಕಣ್ಣೂರು ಜುಮಾ ಮಸೀದಿ ಅಧೀನದಲ್ಲಿರುವ ಸೀದಿ ವಲಿಯಲ್ಲಾಹಿ ದರ್ಗಾ ಶರೀಫ್ ಗೆ ಈ ವರ್ಷವೂ ಭಕ್ತರು ರೊಟ್ಟಿ ಸಹಿತ ಆಗಮಿಸಿದ್ದರು. ಕೋಟಿಕುಳಂ ಅಕ್ಕರ ಕುಟುಂಬ ಪ್ರತಿನಿಧಿಗಳು ರೊಟ್ಟಿಯೊಂದಿಗೆ ಆಗಮಿಸಿ ಹಂಚಿದರು.
600 ವರ್ಷಗಳ ಹಿಂದೆ, ಅಕ್ಕರ ಕುಟುಂಬದಲ್ಲಿ ಹೆಣ್ಣು ಮಗು ಹುಟ್ಟದ ಹಿನ್ನೆಲೆಯಲ್ಲಿ ಉಣ್ಣಿಯಪ್ಪ( ಪುಟಾಣಿ ಅಪ್ಪ-ಒಂದು ಖಾದ್ಯ ಪದಾರ್ಥ)ದೊಂದಿಗೆ ಈ ದರ್ಗಾಕ್ಕೆ ಭೇಟಿ ನೀಡುವುದಾಗಿ ಹರಕೆ ವಚನ ನೀಡಲಾಗಿತ್ತು. ಬಳಿಕ ಆಸೆ ಪೂರೈಸಲು ಹರಕೆ ಹೊತ್ತ ಕುಟುಂವಬದವರು ಅಂದು 800 ಉಣ್ಣಿಯಪ್ಪಗಳೊಂದಿಗೆ ಕಣ್ಣೂರು ದರ್ಗಾಕ್ಕೆ ಆಗಮಿಸಿ ಹರಕೆ ಪೂರೈಸಿದರು. ಈ ಪರಿಪಾಠ ಬಳಿಕ ನಿರಂತರವಾಗಿ ನಡೆದುಬಂದಿತ್ತು. ಕೋವಿಡ್ ಬಿಕ್ಕಟ್ಟಿನಿಂದ ಎರಡು ವರ್ಷಗಳಿಂದ ದರ್ಗಾಕ್ಕೆ ಬರಲು ಸಾಧ್ಯವಾಗಿರಲಿಲ್ಲ. ಈ ಬಾರಿ 8000 ಅಪ್ಪಗಳೊಂದಿಗೆ ಅಕ್ಕರ ಕುಟುಂಬದವರು ಆಗಮಿಸಿದ್ದರು. ಈ ದರ್ಗಾದ ಹಿರಿಮೆಯು ಇಲ್ಲಿಗೆ ಹರಕೆ ಹೊತ್ತರೆ ಕುಟುಂಬಗಳಲ್ಲಿ ಹೆಣ್ಣುಮಕ್ಕಳಿಗೆ ಜನ್ಮ ನೀಡುತ್ತದೆ ಎಂದು ನಂಬಿಕೆ ಇದೆ.
ಬುಧವಾರ ನಡೆದ ಸರಳ ಸಮಾರಂಭದಲ್ಲಿ ಎ. ಎಂ. ಇಬ್ರಾಹಿಂ, ಮುಹಮ್ಮದ್ ಕುಂಞÂ್ಞ, ಶಾನವಾಝ್, ಅಕ್ಕರ ಅಜೀಜ್, ಸಿದ್ದೀಕ್ ಮಿಲ್, ನಾಝಿ ತಿರುವಕೊಲ್ಲಿ, ಅಝೀಝ್, ಟಿ. ಕೆ. ಅಬ್ದುಲ್ಲಾ ಹಾಜಿ, ಎನ್. ಬಿ. ಅಶ್ರಫ್, ಅಬ್ಬಾಸ್ ಹಾಜಿ, ಅಸೈನಾರ್ ಮಿಸ್ಬಾಹಿ, ಲತೀಫ್ ಫೈಝಿ, ಟಿ. ಶರೀಫ್ ಮೊದಲಾದವರು ನೇತೃತ್ವ ವಹಿಸಿದ್ದರು.

.jpg)
.jpg)
