ಸಮರಸ ಚಿತ್ರಸುದ್ದಿ: ಬದಿಯಡ್ಕ: ಕೇರಳ ಸರ್ಕಾರದ ರಾಜ್ಯ ಮಟ್ಟದ ಕರ್ಷಕೋತ್ತಮ ಪ್ರಶಸ್ತಿ ವಿಜೇತ ಎಡನಾಡು-ಕಣ್ಣೂರು ಸೇವಾ ಸಹಕಾರಿ ಬ್ಯಾಂಕಿನ ಸದಸ್ಯ ಕಣ್ಣೂರಿನ ಶಿವಾನಂದ ಬಲೆಕ್ಕಿಲ ಇವರನ್ನು ಎಡನಾಡು ಕಣ್ಣೂರು ಸೇವಾ ಸಹಕಾರಿ ಬ್ಯಾಂಕಿನ ಆಡಳಿತ ಮಂಡಳಿಯ ಪರವಾಗಿ ಅವರ ಮನೆಯಲ್ಲಿ ಶಾಲು ಹೊದೆಸಿ, ಸ್ಮರಣಿಕೆ ಹಾಗೂ ಫಲಪುಷ್ಪಗಳನ್ನು ನೀಡಿ ಅಭಿನಂದಿಸಲಾಯಿತು. ಬ್ಯಾಂಕಿನ ಅಧ್ಯಕ್ಷ ಜಯಂತ ಪಾಟಾಳಿ, ಉಪಾಧ್ಯಕ್ಷ ಶ್ಯಾಮರಾಜ ದೊಡ್ಡಮಾಣಿ, ನಿರ್ದೇಶಕರುಗಳಾದ ಎಚ್ ರಾಮ ಭಟ್, ಗೋಪಾಲಕೃಷ್ಣ ಮುಖಾರಿ, ವೆಂಕಪ್ಪ ಭಟ್, ಜನಾರ್ಧನ ಪೂಜಾರಿ, ಉದಯ ಕುಮಾರ್, ಸುನಿಲ್ ಕುಮಾರ್, ಬಿಜು, ಆನಂದ ಭಂಡಾರಿ, ಲಕ್ಷ್ಮೀ ವಿ ಭಟ್, ಕಮಲಾಕ್ಷಿ, ಶಶಿಕಲಾ, ಕಾರ್ಯದರ್ಶಿ ಶ್ರೀಕೃಷ್ಣ ಭಟ್ ಉಪಸ್ಥಿತರಿದ್ದರು.




.jpg)
