HEALTH TIPS

ತಮಿಳುನಾಡಿನಲ್ಲಿ ಒಮೈಕ್ರಾನ್ ಬಿಎ.4 ಪ್ರಭೇದದ ಮೊದಲ ಪ್ರಕರಣ ಪತ್ತೆ

             ಚೆನ್ನೈ: ಸರಕಾರಿ ಪ್ರಯೋಗಾಲಯದಲ್ಲಿ ನಡೆಸಲಾದ ಜೆನೋಮ್ ಸೀಕ್ವೆನ್ಸಿಂಗ್ ಮೂಲಕ ರಾಜ್ಯದಲ್ಲಿ ಮೊದಲ ಬಿಎ.4 ರೂಪಾಂತರದ ಮೊದಲ ಕೋವಿಡ್ ಪ್ರಕರಣವನ್ನು ಪತ್ತೆ ಹಚ್ಚಲಾಗಿದೆ ಎಂದು ತಮಿಳುನಾಡು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಶನಿವಾರ ತಿಳಿಸಿದೆ.

           ಇದು ದೇಶದಲ್ಲಿ ವರದಿಯಾಗಿರುವ ಎರಡನೇ ಬಿಎ.4 ಪ್ರಭೇದ ಪ್ರಕರಣವಾಗಿದೆ. ಇಂತಹ ಮೊದಲ ಪ್ರಕರಣ ಮೇ 20ರಂದು ತೆಲಂಗಾಣದಲ್ಲಿ ವರದಿಯಾಗಿತ್ತು. ಆದಾಗ್ಯೂ ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರದಿಂದ ಈಗ ಪತ್ತೆಯಾಗಿರುವ ಪ್ರಕರಣದ ದೃಢೀಕರಣಕ್ಕಾಗಿ ಕಾಯಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದರು.
                ಚೆಂಗಲಪಟ್ಟು ಜಿಲ್ಲೆಯ ನವಲೂರು ನಿವಾಸಿಯಾಗಿರುವ 19ರ ಹರೆಯದ ಯುವತಿಯಲ್ಲಿ ಬಿಎ.4 ಪ್ರಭೇದ ಪತ್ತೆಯಾಗಿದೆ. ಯುವತಿಯ ಕುಟುಂಬದಲ್ಲಿ ನಾಲ್ವರು ಸದಸ್ಯರಿದ್ದು,ಜ್ವರದ ಲಕ್ಷಣಗಳು ಕಾಣಿಸಿಕೊಂಡಿದ್ದ ಯುವತಿ ಮತ್ತು ಆಕೆಯ ತಾಯಿ ತಪಾಸಣೆಗೊಳಗಾಗಿದ್ದರು. ಮೇ 9ರಂದು ಅವರ ವರದಿ ಪಾಸಿಟಿವ್ ಆಗಿದ್ದು,ಆರೋಗ್ಯ ಇಲಾಖೆಯು ಅವರ ರಕ್ತದ ಮಾದರಿಗಳನ್ನು ಸಂಪೂರ್ಣ ಜೆನೋಮ್ ಸೀಕ್ವೆನ್ಸಿಂಗ್‌ಗೆ ಕಳುಹಿಸಿತ್ತು.

              ಇಬ್ಬರೂ ಮನೆಯಲ್ಲಿ ಐಸೊಲೇಶನ್ನಲ್ಲಿದ್ದು ಮೂರು ದಿನಗಳಲ್ಲಿ ಚೇತರಿಸಿಕೊಂಡಿದ್ದರು. ಅವರು ಯಾವುದೇ ಪ್ರಯಾಣ ಇತಿಹಾಸವನ್ನು ಹೊಂದಿರಲಿಲ್ಲ.
                 ಎರಡೂ ಪ್ರಕರಣಗಳಿಗೆ ಸಾರ್ಸ್-ಕೋವ್-2 ವೈರಸ್‌ನ ಒಮೈಕ್ರಾನ್ ಪ್ರಭೇದ ಕಾರಣವಾಗಿತ್ತು. ತಾಯಿಯಲ್ಲಿ ಒಮೈಕ್ರಾನ್‌ನ ಬಿಎ.2 ಉಪ ವಂಶಾವಳಿ ಹಾಗೂ ಪುತ್ರಿಯಲ್ಲಿ ಬಿಎ.4 ಪ್ರಭೇದ ಪತ್ತೆಯಾಗಿದ್ದವು.ಆರೋಗ್ಯ ಕಾರ್ಯದರ್ಶಿ ಜೆ.ರಾಧಾಕೃಷ್ಣನ್ ಅವರು ಶುಕ್ರವಾರ ಯುವತಿಯ ಮನೆಗೆ ಭೇಟಿ ನೀಡಿ ಆರೋಗ್ಯವನ್ನು ವಿಚಾರಿಸಿದ್ದಾರೆ. ಪ್ರದೇಶದಲ್ಲಿ ಇತರ ಯಾವುದೇ ಪ್ರಕರಣಗಳು ವರದಿಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

                 ಬಿಎ.4 ಮತ್ತು ಬಿಎ.5 ಪ್ರಭೇದಗಳು ಕೋವಿಡ್ ಪ್ರಕರಣಗಳಲ್ಲಿ ಏರಿಕೆಗೆ ಕಾರಣವಾಗಬಹುದು ಎಂದು ವಿಜ್ಞಾನಿಗಳು ಕಳವಳ ವ್ಯಕ್ತಪಡಿಸಿದ್ದಾರೆ. ಅಮೆರಿಕ ಮತ್ತು ಯುರೋಪ್‌ನಲ್ಲಿ ಈ ಪ್ರಭೇದಗಳ ಪ್ರಕರಣಗಳು ಹೆಚ್ಚುತ್ತಿವೆ.ರಾಜ್ಯದಲ್ಲಿ ಬಿಎ.4 ಪ್ರಭೇದ ಪತ್ತೆಯಾಗಿರುವುದು ತಕ್ಷಣದ ಆತಂಕಕ್ಕೆ ಕಾರಣವಾಗಬೇಕಿಲ್ಲ ಎಂದು ತಿಳಿಸಿದ ಡಾ.ರಾಧಾಕೃಷ್ಣನ್,ಎಲ್ಲ ಅರ್ಹ ವ್ಯಕ್ತಿಗಳು ಲಸಿಕೆಯನ್ನು ಪಡೆದುಕೊಳ್ಳುವ ಮತ್ತು ಕೋವಿಡ್ ಸೂಕ್ತ ಶಿಷ್ಟಾಚಾರವನ್ನು ಪಾಲಿಸುವ ಅಗತ್ಯಕ್ಕೆ ಒತ್ತು ನೀಡಿದರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries