HEALTH TIPS

ಮತದಾರರ ಕರಡುಪಟ್ಟಿ ಇಂದು ಪ್ರಕಟ: ಪಟ್ಟಾಜೆ, ಪೆರ್ವಾಡ್ ಸಹಿತ ವಿವಿಧೆಡೆ ಉಪ ಚುನಾವಣೆ ಪೂರ್ವಭಾವೀ ಚಟುವಟಿಕೆ ಆರಂಭ

               ಕಾಸರಗೋಡು: ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಕೆಲವೊಂದು ಕಾರಣಗಳಿಂದ ತೆರವಾಗಿರುವ ಸದಸ್ಯರ ಆಯ್ಕೆಗಾಗಿ ನಡೆಯಲಿರುವ ಉಪ ಚುನಾವಣೆಗಾಗಿ ಜಿಲ್ಲೆಯ ಕಾಂಜಂಗಾಡ್ ನಗರಸಭೆಯ ತೋಯಮ್ಮಲ್ ವಾರ್ಡ್, ಬದಿಯಡ್ಕ ಗ್ರಾಮ ಪಂಚಾಯಿತಿಯ ಪಟ್ಟಾಜೆ ವಾರ್ಡ್, ಪಳ್ಳಿಕೆರೆ ಗ್ರಾಪಂನ ಪಳ್ಳಿಪುಳ ವಾರ್ಡ್, ಕುಂಬಳೆ ಗ್ರಾಪಂನ  ಪೆರ್ವಾಡ್ ವಾರ್ಡುಗಳಲ್ಲಿನ ಮತದಾರರ ಕರಡು ಪಟ್ಟಿ ಮೇ 25 ರಂದು ಪ್ರಕಟಗೊಳ್ಳಲಿದೆ.

             ಕರಡುಪಟ್ಟಿ ಬಗೆಗಿನ ದೂರುಗಳು ಮತ್ತು ಆಕ್ಷೇಪಗಳಿದ್ದಲ್ಲಿ ಜೂ.8 ರಂದು ಸಂಜೆ 5ರ ವರೆಗೆ ಸ್ವೀಕರಿಸಲಾಗುವುದು. ಮತದಾರರ ಅಂತಿಮ ಪಟ್ಟಿ ಜೂ.18 ರಂದು ಪ್ರಕಟಗೊಳ್ಳಲಿದೆ. 

                 ಚುನಾವಣೆ ನಡೆಯುವ ವಾರ್ಡ್‍ಗಳ ಇಲೆಕ್ಟರಲ್ ನೋಂದಣಿ ಅಧಿಕಾರಿ, ಸಹಾಯಕ ಇಲೆಕ್ಟರಲ್ ನೋಂದಣಿ ಅಧಿಕಾರಿ, ಸಹಾಯಕ ಜಿಲ್ಲಾ ಚುನಾವಣಾಧಿಕಾರಿ, ನಗರ ಕಾರ್ಯ ವಲಯ ಜಂಟಿ ನಿರ್ದೇಶಕರ ಸಭೆ ಎ.ಡಿ.ಎಂ ರಮೇಂದ್ರನ್ ಅವರ ಅಧ್ಯಕ್ಷತೆಯಲ್ಲಿ ಆನ್‍ಲೈನ್ ಮೂಲಕ ನಡೆಯಿತು. ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು, ನವೀಕರಿಸಲು ಅರ್ಜಿದಾರರ ಆಯೋಗದ election.kerala.gov.in  ಎಂಬ ವೆಬ್ ಸೈಟ್ ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಮತದಾರರ ಕರಡುಪಟ್ಟಿಯನ್ನು ಸಂಬಂಧಪಟ್ಟ ಪಂಚಾಯಿತಿ, ನಗರಸಭೆ, ತಾಲೂಕು, ಗ್ರಾಮಾಧಿಕಾರಿ ಕಚೇರಿಗಳಲ್ಲಿ ಪ್ರಕಟಿಸಲಾಗುವುದು. ಕಾಞಂಗಾಡ್ ನಗರಸಭಾ ಕಾರ್ಯದರ್ಶಿ ರೋಯಿ ಮ್ಯಾಥ್, ಕುಂಬಳೆ ಗ್ರಾಪಂ ಕಾರ್ಯದರ್ಶಿ ಪಿ ಗೀತಾಕುಮಾರಿ, ಪಳ್ಳಿಕೆರೆ ಗ್ರಾಪಂ ಕಾರ್ಯದರ್ಶಿ ಎಂ ಕೆ ರಾಧಕೃಷ್ಣನ್, ಬದಿಯಡ್ಕ ಗ್ರಾಪಂ ಕಾರ್ಯದರ್ಶಿ ಸಿ ರಾಜೇಂದ್ರನ್, ಜಿಲ್ಲಾ ವಾರ್ತಾ ಮತ್ತು ಮಾಹಿತಿ ಅಧಿಕಾರಿ ಎಂ ಮಧುಸೂದನನ್ ಸಭೆಯಲ್ಲಿ ಉಪಸ್ಥಿತರಿದ್ದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries