HEALTH TIPS

ತಾರನಾಥ ವರ್ಕಾಡಿಯವರಿಗೆ ಉಡುಪಿಯಲ್ಲಿ “ಯಕ್ಷಗಾನ ಸಾಧಕ ಪ್ರಶಸ್ತಿ” ಪ್ರದಾನ

              ಉಡುಪಿ:  ಪ್ರತಿಷ್ಠಿತ ಯಕ್ಷಗಾನ ಕಲಾರಂಗ ಉಡುಪಿ  ಸಂಸ್ಥೆಯು ತಲ್ಲೂರು ಕನಕಾ-ಅಣ್ಣಯ್ಯ ಶೆಟ್ಟಿ ಸ್ಮರರಣಾರ್ಥ ಕೊಡಮಾಡುವ 2022ನೇ ಸಾಲಿನ ‘ಯಕ್ಷಗಾನ ಸಾಧಕ’ ಪ್ರಶಸ್ತಿ ಯನ್ನು ಗಡಿನಾಡಿನ ಹೆಮ್ಮೆಯ ಹಿರಿಯ ಯಕ್ಷಗಾನ ಗುರು, ಕಲಾವಿದ, ಯಕ್ಷಕವಿ, ಲೇಖಕ ತಾರನಾಥ ವರ್ಕಾಡಿಯವರಿಗೆ  ಇತ್ತೀಚೆಗೆ ಪ್ರದಾನಮಾಡಿ ಗೌರವಿಸಿತು. 

            ಕೃಷ್ಣಾಪುರ ಪರ್ಯಾಯ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು ಆಶೀರ್ವಚನ ನೀಡಿ ಮಾತನಾಡುತ್ತಾ, “ಉಡುಪಿ ಯಕ್ಷಗಾನ ಕಲೆಯ ಕೇಂದ್ರ ಸ್ಥಾನವಾಗಿದ್ದು ಇಲ್ಲಿಂದಲೇ ತೆಂಕು ಬಡಗು ಕಲಾ ಪ್ರಕಾರಗಳು ಪ್ರಾರಂಭವಾಯಿತು, ಮಣ್ಣಿನ ಸತ್ವ ಹೊಂದಿರುವ ಕಲೆಯಲ್ಲಿ ಅನೇಕ ಮಂದಿ ಪ್ರಾವೀಣ್ಯ ಪಡೆದಿದ್ದಾರೆ, ಅಂತಹ ಹಿರಿಯರನ್ನು ಗುರುತಿಸುವ ಕೆಲಸವನ್ನು ಯಕ್ಷಗಾನ ಕಲಾರಂಗ ವತಿಯಿಂದ ನಡೆಯುತ್ತಿರುವುದು ಶ್ಲಾಘನೀಯ” ಎಂದರು.

               ಜಾನಪದ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ, ಹಿರಿಯ ಯಕ್ಷಗಾನ ವಿದ್ವಾಂಸ ಚಂದ್ರಶೇಖರ ದಾಮ್ಲೆ, ಹಿರಿಯ ಸ್ತ್ರೀ ವೇಶಧಾರಿ ಡಾ.ಬೇಗಾರು ಶಿವಕುಮಾರ್, ಯಕ್ಷಗಾನ ಕಲಾರಂಗದ ಎಸ್ ವಿ ಭಟ್ ಉಪಸ್ಥಿತರಿದ್ದರು. ಯಕ್ಷಗಾನ ಕಲಾರಂಗದ ಗಂಗಾಧರ್ ರಾವ್ ಸ್ವಾಗತಿಸಿ ಮುರಳಿ ಕಡೇಕಾರ್ ನಿರೂಪಿಸಿ ವಂದಿಸಿದರು.

               ಸಮಾರಂಭವನ್ನು ಹಿರಿಯ ಯಕ್ಷಗಾನ ಕಲಾವಿದ ಕೆ ಗೋವಿಂದ ಭಟ್ ಉದ್ಘಾಟಿಸಿದರು. ಆ ಬಗ್ಗೆ ನಡೆದ ಲೇಖಕ ಕವಿ ತಾರಾನಾಥ ವಿಚಾರ ಗೋಷ್ಠಿಯಲ್ಲಿ ಡಾ.ಮೋಹನ ಕುಂಟಾರ್ ಅಧ್ಯಕ್ಷತೆ ವಹಿಸಿದ್ದು, ಗಾಯತ್ರಿ ಉಡುಪಕಿನ್ನಿಗೋಳಿ, ಲೇಖಕರಾಗಿ ಪತ್ರಕರ್ತರಾಗಿ, ತಾರನಾಥ, ಯೋಗೀಶ ರಾವ್ ಚಿಗುರುಪಾದೆ ಯಕ್ಷಗಾನಕವಿಯಾಗಿ ತಾರಾನಾಥರು,  ಶಾಂತಾರಾಮ ಕುಡ್ವ ಸಹೃದಯಿಕಲೋಪಾಸಕನಾಗಿ ವರ್ಕಾಡಿ ತಾರಾನಾಥರು ಎನ್ನುವ ವಿಚಾರದಲ್ಲಿ ಉಪನ್ಯಾಸ ನೀಡಿದರು.ಗೋವಿಂದ ನಂದ ಮುಕುಂದ ಪಾಹಿದೇವ ಪ್ರಾತ್ಯಕ್ಷಿಕೆ, ಸಪ್ತತಾಳಗಳ ಹೆಜ್ಜೆ ನಾಟ್ಯ ಅಭಿನಯ  ಕಾರ್ಯಕ್ರಮ ಜರಗಿತು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries