ನವದೆಹಲಿ:ಉತ್ತರಾಖಂಡ್ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಇತ್ತೀಚೆಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ, ರಾಜ್ಯಕ್ಕೆ ಏಕರೂಪ ನಾಗರಿಕ ಸಂಹಿತೆ ರೂಪಿಸಲು ಸಮಿತಿಯ ರಚನೆಗೆ ರಾಜ್ಯ ಕ್ಯಾಬಿನೆಟ್ ಅನುಮೋದನೆ ನೀಡಿದೆ ಎಂದು ಹೇಳಿದರು.
0
samarasasudhi
ಮೇ 25, 2022
ನವದೆಹಲಿ:ಉತ್ತರಾಖಂಡ್ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಇತ್ತೀಚೆಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ, ರಾಜ್ಯಕ್ಕೆ ಏಕರೂಪ ನಾಗರಿಕ ಸಂಹಿತೆ ರೂಪಿಸಲು ಸಮಿತಿಯ ರಚನೆಗೆ ರಾಜ್ಯ ಕ್ಯಾಬಿನೆಟ್ ಅನುಮೋದನೆ ನೀಡಿದೆ ಎಂದು ಹೇಳಿದರು.
'ನಾವು ಶೀಘ್ರದಲ್ಲೇ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೊಳಿಸುತ್ತೇವೆ. ಇತರ ರಾಜ್ಯಗಳು ಈ ಮಾದರಿಯನ್ನು ಅನ್ನು ಅನುಸರಿಸಬೇಕೆಂದು ನಾನು ಬಯಸುತ್ತೇನೆ,' ಎಂದು ಧಾಮಿ ಹೇಳಿದ್ದಾಗಿ Timesofindia.com ವರದಿ ಮಾಡಿದೆ.
ಧಾಮಿ ಅವರು ʼಹೆಚ್ಚು ಕಠಿಣʼ ಮತಾಂತರ-ವಿರೋಧಿ ಕಾನೂನನ್ನು ರೂಪಿಸುವ ಭರವಸೆ ನೀಡಿದರು ಮತ್ತು ʼಉತ್ತರಾಖಂಡದಲ್ಲಿ ಅಣಬೆಗಳಂತೆ ಬೆಳೆಯುತ್ತಿರುವ ಮಝಾರ್ (ದರ್ಗಾ)ʼಗಳ ಕುರಿತು ಕಠಿಣ ತೀರ್ಮಾನವನ್ನು ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಗಿ ವರದಿಯಾಗಿದೆ.
ಪ್ರಸ್ತುತ ಮತಾಂತರ-ವಿರೋಧಿ ಕಾನೂನು, ಧರ್ಮದ ಸ್ವಾತಂತ್ರ್ಯ ಕಾಯಿದೆ, 2018, ಅಥವಾ ಲವ್ ಜಿಹಾದ್ ವಿರೋಧಿ ಕಾನೂನು ಜಾರಿಯಲ್ಲಿದೆ. ಹಿಂದೂ ಮಹಿಳೆಯರನ್ನು ಮದುವೆಯಾಗಲು ಮತ್ತು ಮತಾಂತರಿಸಲು ಮುಸ್ಲಿಮರು ಸಂಚು ಹೂಡಿದ್ದಾರೆ ಎಂಬ ಹಿಂದುತ್ವ ಸದಸ್ಯರ ಸಮರ್ಥನೆಯ ಅನ್ವಯ ಕನಿಷ್ಠ ಐದು ವರ್ಷಗಳ ಜೈಲು ಶಿಕ್ಷೆ ನೀಡಬಹುದಾಗ ಅವಕಾಶವನ್ನು ಈ ಕಾನೂನು ಹೊಂದಿದೆ. ಅದೇ ಸಮಯದಲ್ಲಿ, ದಿ ವೈರ್ ವರದಿ ಮಾಡಿದಂತೆ, ಉತ್ತರಾಖಂಡವು ಅಂತರ್ಧರ್ಮೀಯ ವಿವಾಹವನ್ನು ಪ್ರೋತ್ಸಾಹಿಸುವ ಯೋಜನೆಯನ್ನೂ ಹೊಂದಿದೆ.