ತಮಗೆಂದು ಮೀಸಲಿರಿಸಲಾಗಿದ್ದ ಆಸನ ದೊರೆಯಲಿಲ್ಲ ಎಂಬ ಕಾರಣಕ್ಕೆ ಸಂಸದ ಹಾಗೂ ಮಾಜಿ ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಅವರು ಇಂದು ದಿಲ್ಲಿ ಲೆಫ್ಟಿನೆಂಟ್ ಗವರ್ನರ್ ವಿನಯ್ ಕುಮಾರ್ ಸಕ್ಸೇನಾ ಅವರ ಪ್ರಮಾಣವಚನ ಸ್ವೀಕಾರ ಸಮಾರಂಭದಿಂದ ಹೊರನಡೆದ ಘಟನೆ ನಡೆದಿದೆ ಎಂದು ndtv.com ವರದಿ ಮಾಡಿದೆ.
0
samarasasudhi
ಮೇ 26, 2022
ತಮಗೆಂದು ಮೀಸಲಿರಿಸಲಾಗಿದ್ದ ಆಸನ ದೊರೆಯಲಿಲ್ಲ ಎಂಬ ಕಾರಣಕ್ಕೆ ಸಂಸದ ಹಾಗೂ ಮಾಜಿ ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಅವರು ಇಂದು ದಿಲ್ಲಿ ಲೆಫ್ಟಿನೆಂಟ್ ಗವರ್ನರ್ ವಿನಯ್ ಕುಮಾರ್ ಸಕ್ಸೇನಾ ಅವರ ಪ್ರಮಾಣವಚನ ಸ್ವೀಕಾರ ಸಮಾರಂಭದಿಂದ ಹೊರನಡೆದ ಘಟನೆ ನಡೆದಿದೆ ಎಂದು ndtv.com ವರದಿ ಮಾಡಿದೆ.
ರಾಜಧಾನಿಯ ರಾಜ್ ನಿವಾಸ್‌ದಲ್ಲಿ ಇಂದು ಬೆಳಿಗ್ಗೆ ಆಯೋಜಿಸಲಾಗಿದ್ದ ಕಾರ್ಯಕ್ರಮದಿಂದ ಡಾ. ಹರ್ಷವರ್ಧನ್ ಆಕ್ರೋಶಭರಿತರಾಗಿ ಹೊರನಡೆಯುತ್ತಿರುವ ವೀಡಿಯೋ ಕೂಡ ಹೊರಬಿದ್ದಿದೆ. ಈ ಕುರಿತು ಪ್ರಶ್ನಿಸಿದಾಗ ಆಸನ ಏರ್ಪಾಟು ಕುರಿತು ಅಸಮಾಧಾನ ವ್ಯಕ್ತಪಡಿಸಿದ ಅವರು ಈ ವಿಚಾರವನ್ನು ಸಕ್ಸೇನಾ ಅವರ ಬಳಿ ಎತ್ತುವುದಾಗಿ ತಿಳಿಸಿದರು.
ʻʻಅವರು ಸಂಸದರಿಗಾಗಿಯೂ ಆಸನಗಳನ್ನು ಮೀಸಲಿರಿಸಿಲ್ಲ,ʼʼ ಎಂದು ಅವರು ಹೇಳಿದರು.
ಕಳೆದ ವರ್ಷ ಕೇಂದ್ರ ಸಂಪುಟ ವಿಸ್ತರಣೆಗೆ ಮುನ್ನ ಡಾ. ಹರ್ಷವರ್ಧನ್ ಅವರು ತಮ್ಮ ಸಚಿವ ಹುದ್ದೆಗೆ ರಾಜೀನಾಮೆ ನೀಡಿದ್ದರು. ಕೋವಿಡ್ ಸಾಂಕ್ರಾಮಿಕವನ್ನು ನಿಭಾಯಿಸಿದ ರೀತಿಗೂ ಅವರು ಟೀಕೆಗೊಳಗಾಗಿದ್ದರು.