HEALTH TIPS

ನಾಲ್ಕು ಹೊಸ ಹಿರಿಯ ಕಾರ್ಯನಿರ್ವಾಹಕರನ್ನು ನೇಮಕ ಮಾಡಿದ ಜೆಟ್ ಏರ್ವೇಸ್

           ನವದೆಹಲಿ: ಇತ್ತೀಚಿಗೆ ಡಿಜಿಸಿಎ ನಿಂದ ಮರುಮೌಲ್ಯೀಕರಿಸಿದ ಏರ್ ಆಪರೇಟರ್ ಪ್ರಮಾಣಪತ್ರ ಪಡೆದಿದ್ದ ವಿಮಾನಯಾನ ಸಂಸ್ಥೆ ಜೆಟ್ ಏರ್ವೇಸ್ ಈಗ ನಾಲ್ಕು ಹೊಸ ಹಿರಿಯ ಕಾರ್ಯನಿರ್ವಾಹಕರನ್ನು ನೇಮಕ ಮಾಡಿರುವುದಾಗಿ ಸೋಮವಾರ ಪ್ರಕಟಿಸಿದೆ.

            ಜೆಟ್ ಏರ್ವೇಸ್, ಮೇ 20 ರಂದು ಏರ್‌ಲೈನ್‌ ಏರ್ ಆಪರೇಟರ್ ಪ್ರಮಾಣಪತ್ರ ಪಡೆದಿತ್ತು. ಇದರೊಂದಿಗೆ ಜೆಟ್ ಏರ್ವೇಸ್ ವಾಣಿಜ್ಯ ವಿಮಾನ ಕಾರ್ಯಾಚರಣೆಯನ್ನು ಪುನರಾರಂಭಿಸಲು ಅನುಮತಿ ಪಡೆದಿತ್ತು.

                ಪ್ರಭಾ ಶರಣ್ ಸಿಂಗ್ ಅವರನ್ನು ಮುಖ್ಯ ಡಿಜಿಟಲ್ ಅಧಿಕಾರಿಯಾಗಿ, ಎಚ್ ಆರ್ ಜಗನ್ನಾಥ್ ಅವರನ್ನು ಇಂಜಿನಿಯರಿಂಗ್ ಉಪಾಧ್ಯಕ್ಷರಾಗಿ, ಮಾರ್ಕ್ ಟರ್ನರ್ ಅವರನ್ನು ಇನ್‌ಫ್ಲೈಟ್ ಉತ್ಪನ್ನ ಮತ್ತು ಸೇವೆಗಳ ಉಪಾಧ್ಯಕ್ಷರಾಗಿ ಮತ್ತು ವಿಶೇಷ್ ಖನ್ನಾ ಅವರನ್ನು ಮಾರಾಟ, ವಿತರಣೆ ಮತ್ತು ಗ್ರಾಹಕ ಉಪಾಧ್ಯಕ್ಷರಾಗಿ ನೇಮಕ ಮಾಡಲಾಗಿದೆ ಎಂದು ಏರ್‌ಲೈನ್ಸ್ ಪ್ರಕಟಣೆಯಲ್ಲಿ ತಿಳಿಸಿದೆ.

            ಪ್ರಭಾ ಶರಣ್ ಸಿಂಗ್ ಅವರು ಜೂನ್ 1 ರಂದು ಅಧಿಕಾರ ವಹಿಸಿಕೊಳ್ಳಲಿದ್ದು, ಜಗನ್ನಾಥ್ ಅವರು ಸೋಮವಾರ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಟರ್ನರ್ ಜೂನ್ 15 ರಂದು ಹಾಗೂ ಖನ್ನಾ ಅವರು ಜುಲೈನಲ್ಲಿ ಸ್ವಲ್ಪ ಸಮಯದ ನಂತರ ಏರ್‌ಲೈನ್‌ಗೆ ಸೇರಲಿದ್ದಾರೆ ಎಂದು ಏರ್‌ಲೈನ್ಸ್ ತಿಳಿಸಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries