HEALTH TIPS

ಹೊಸ ವಿಮಾನದ ವಿನ್ಯಾಸ ನೋಡಿದ್ರೆ ಬೆರಗಾಗ್ತೀರಾ! ಆಕಾಶ ಏರ್​​ಲೈನ್​​ ವಿಮಾನದ ಮೊದಲ ಚಿತ್ರ ಹಂಚಿಕೊಂಡ ಸಂಸ್ಥೆ

            ನವದೆಹಲಿ: ವಿಮಾನಯಾನ ಕ್ಷೇತ್ರಕ್ಕೆ ಹೊಸ ವಿಮಾನವೊಂದು ಸೇರ್ಪಡೆಯಾಗಿತ್ತಿದೆ. ಇದರ ವಿನ್ಯಾಸ ಭಾರೀ ಆಕರ್ಷಿಸುತ್ತಿದ್ದು, ಶೀಘ್ರದಲ್ಲೇ ಪ್ರಯಾಣಿಕರಿಗೆ ಸೇವೆ ಆರಂಭಿಸಲಿದೆ. ಹೂಡಿಕೆದಾರ ರಾಕೇಶ್​ ಝುಂಜುನ್​​ವಾಲಾ ಅವರ ಕನಸಿನ ಈ ವಿಮಾನದ ವಿನ್ಯಾಸ ಪೂರ್ಣಗೊಂಡಿದ್ದು, ಮೊದಲ ಚಿತ್ರವನ್ನು ಹಂಚಿಕೊಂಡು ಸಂಭ್ರಮಿಸಿದ್ದಾರೆ.

            ಶೀಘ್ರದಲ್ಲೇ ಸೇವೆ ಆರಂಭಗೊಳಲ್ಲಿದ್ದು, ವಿಮಾನದ ಪೂರ್ಣ ಕೆಲಸ ಮುಗಿದಿದ್ದು, ಸಂಸ್ಥೆಗೆ ಕ್ಯೂಪಿ ಕೋಡ್​​​ ಸಿಕ್ಕಿದ್ದು, ಇನ್ನೇನು ಹಾರಾಟ ಆರಂಭಿಸಲಿದೆ. ಇನ್ನು ನಾವು ಕಾಯುವುದಿಲ್ಲ ಎಂಬ ಶೀರ್ಷಿಕೆಯೊಂದಿಗೆ ಟ್ವೀಟ್​ ಮಾಡಿದ್ದಾರೆ.


              ಪ್ರತಿ ವಿಮಾನಯಾದ ಕ್ಯೂಪಿ ಕೋಡ್​​​ ಸಂಖ್ಯೆ ಪ್ರತ್ಯೇಕವಾಗಿರುತ್ತದೆ. ವಿಮಾನ ಹಾರಾಟ ಪ್ರಾರಂಭಕ್ಕೂ ಮುನ್ನ ನಾಗರಿಕ ವಿಮಾನಯಾನ ಸಚಿವಾಲಯದಿಂದ ಈ ಕೋಡನ್ನು ನೀಡಲಾಗುತ್ತದೆ. ಉದಾಹರಣೆಯಾಗಿ ಇಂಡಿಗೋ 6ಈ, ಗೋ ಫಸ್ಟ್​​ ಜೀ8 ಮತ್ತು ಏರ್​ ಇಂಡಿಯಾ ಎಐ ಕ್ಯೂಪಿ ಕೋಡ್​ ಹೊಂದಿದೆ. ಇದೀಗ ಹೊಸ ವಿಮಾನಯಾನಕ್ಕೂ ಕ್ಯೂಪಿ ಕೋಡ್​ ನೀಡಲಾಗಿದೆ.

         ಸದ್ಯ ಹೊಸ ವಿನ್ಯಾಸದೊಂದಿಗೆ ಬುಲೆಟ್​ ಟ್ರೈನ್​ ಮಾದರಿಯಲ್ಲಿ ಕಾಣುವ ಸುಸಜ್ಜಿತ ವಿಮಾನ ಇನ್ನು ಕೆಲವೇ ದಿನಗಳಲ್ಲಿ ಹಾರಾಟ ನಡೆಸಲಿದ್ದು, ಈ ಹೊಸ ವಿಮಾನ ಯಾವ್ಯಾವ ದೇಶಕ್ಕೆ ಸಂಚರಿಸಲಿದೆ ಎಂಬುದನ್ನು ಶೀಘ್ರದಲ್ಲೇ ಸಂಸ್ಥೆ ಪಟ್ಟಿ ನೀಡಲಿದೆ.

              2021 ನವಂಬರ್​​ 26ರಂದು 72 ಮ್ಯಾಕ್ಸ್​​ ವಿಮಾನ ತಯಾರಿಕೆಗೆ ಬೋಯಿಂಗ್​​ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿತ್ತು. ಒಪ್ಪಂದದಂತೆ ವಿಮಾನ ತಯಾರಾಗಿದ್ದು, ಮೊದಲ ಜೂನ್​​ ತಿಂಗಳಲ್ಲಿ ಹಸ್ತಾಂತರ ಮಾಡಲಿದೆ. ಸದ್ಯ ಕೆಲವು ವಿಮಾನಗಳಷ್ಟೇ ಹಾರಾಟ ನಡೆಸಲಿದೆ ಎಂದು ಆಕಾಶ ಸಂಸ್ಥೆ ತಿಳಿಸಿದೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries