HEALTH TIPS

ಪತ್ತೆಯಾಗದ ವಾಚರ್ ರಾಜನ್: ಅರಣ್ಯದಲ್ಲಿ ಹುಡುಕಾಟ ಅಂತ್ಯಗೊಳಿಸಲು ಅರಣ್ಯ ಇಲಾಖೆ ಚಿಂತನೆ

             ಇಡುಕ್ಕಿ:  ಸೈಲೆಂಟ್ ವ್ಯಾಲಿಯ ಸೈರಂದ್ರಿ ಅರಣ್ಯದಲ್ಲಿ ನಾಪತ್ತೆಯಾಗಿರುವ ಅರಣ್ಯ ವೀಕ್ಷಕ ರಾಜನ್ ಪತ್ತೆಗೆ ಮಾಡುತ್ತಿರುವ ಶೋಧ ಕಾರ್ಯವನ್ನು ಅಂತ್ಯಗೊಳಿಸಲು ಅರಣ್ಯ ಇಲಾಖೆ ನಿರ್ಧರಿಸಿದೆ.

                       ಎಪ್ಪತ್ತು ಕ್ಯಾಮೆರಾಗಳನ್ನು ಬಳಸಿ ಪರಿಶೀಲಿಸಲಾಗಿತ್ತಾದರೂ ಫಲಿತಾಂಶ ನಿರಾಶಾದಾಯಕವಾಗಿದೆ. ರಾಜನ್ ಅವರ ಮೊಬೈಲ್ ಪೋನ್ ಹುಡುಕಿದರೂ ಯಾವುದೇ ಮಾಹಿತಿ ಸಿಗಲಿಲ್ಲ. ವಾಚರ್ ವನ್ಯಜೀವಿಗಳ ದಾಳಿಗೆ ಒಳಗಾಗಿರುವ ಸಾಧ್ಯತೆಯಿಲ್ಲ ಎಂದು ತಜ್ಞರು ಹೇಳುತ್ತಾರೆ. ಅಗಳಿ ಡಿವೈಎಸ್ಪಿ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

                  ಮಾವೋವಾದಿಗಳು ರಾಜನ್‍ನನ್ನು ಅಪಹರಿಸುವ ಸಾಧ್ಯತೆಯನ್ನು ಕುಟುಂಬ ಸಂಶಯಿಸಿದೆ. ಸೈರಂಧ್ರಿ ಅರಣ್ಯ ಪ್ರದೇಶವು ಮಾವೋವಾದಿಗಳು ಇರುವ ಅರಣ್ಯವಾಗಿ ದೃಢಪಟ್ಟಿದೆ. 20 ವರ್ಷಗಳಿಂದ ಇಲ್ಲಿ ಕೆಲಸ ಮಾಡುತ್ತಿರುವ ರಾಜನ್ ಗೆ ಕಾಡಾನೆಗಳೆಲ್ಲ ಚಿರಪರಿಚಿತ ಎನ್ನುತ್ತಾರೆ ಕುಟುಂಬದವರು.

                 ರಾಜನ್ ನನ್ನು ಮಾವೋವಾದಿಗಳು ಮಾರ್ಗದರ್ಶನಕ್ಕಾಗಿ ಕರೆದುಕೊಂಡು ಹೋಗಿದ್ದಾರಾ ಎಂಬಿತ್ಯಾದಿ ವಿಷಯ ತಿಳಿಯಬೇಕಿದೆ. ಕಾಡು ಬಿಟ್ಟು ಬೇರೆಲ್ಲೂ ತಂದೆಯವರು ಹೋದವರಲ್ಲ ಎಂದು ಮಗಳು ಹೇಳುತ್ತಾಳೆ. ಮುಂದಿನ ತಿಂಗಳು 11ರಂದು ರಾಜನ್ ಪುತ್ರಿಯ ವಿವಾಹ ನಿಶ್ಚಯಿಸಲಾಗಿದೆ.  ಅದಕ್ಕೂ ಮೊದಲು ರಾಜನ್‍ನನ್ನು ಹುಡುಕಬೇಕೆಂದು ಕುಟುಂಬ ಬಯಸಿದೆ. ಕುಟುಂಬವು ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಲು ಯೋಚಿಸುತ್ತಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries