HEALTH TIPS

ಫ್ಯಾಟ್‌ ಸರ್ಜರಿ ಬಗ್ಗೆ ನೀವು ತಿಳಿದರಲೇಬೇಕಾದ ಸಂಗತಿಗಳಿವು

 ಲಿಪೋಸಕ್ಷನ್‌ ಬಗ್ಗೆ ಕೇಳಿರುತ್ತೀರ, ಇದು ಸೌಂದರ್ಯವರ್ಧಕ ಚಿಕಿತ್ಸೆಯಾಗಿದ್ದು ಇದರಲ್ಲಿ ಹೆಚ್ಚಾದ ಮೈ ತೂಕ ಶಸ್ತ್ರ ಚಿಕಿತ್ಸೆ ಮೂಲಕ ಕಡಿಮೆ ಮಾಡಿ ಮೈ ತೂಕ ಕಡಿಮೆ ಮಾಡಲಾಗುವುದು, ಇದನ್ನು ಸಾಮಾನ್ಯ ಭಾಷೆಯಲ್ಲಿ ಫ್ಯಾಟ್‌ ಸರ್ಜರಿ ಎಂದು ಕೂಡ ಕರೆಯಲಾಗುತ್ತಿದೆ.

ಇವತ್ತು ಜನ ಈ ಫ್ಯಾಟ್ ಸರ್ಜರಿ ಬಗ್ಗೆ ತುಂಬಾನೇ ಮಾತನಾಡುತ್ತಿದ್ದಾರೆ, ಅದಕ್ಕೆ ಕಾರಣ ಯುವ ನಟಿಯೊಬ್ಬರು ಬಳಕುವ ಮೈಮಾಟ ಬಯಸಿ ಇಮಥ ಸರ್ಜರಿ ಮಾಡಿಸಲು ಹೋಗಿ ದುರಮತ ಸಾವನ್ನಪ್ಪಿರುವುದು.

ಈ ರೀತಿಯ ಘಟನೆ ಇದೇ ಮೊದಲೆಲ್ಲಾ ಇಂಥ ಹಲವು ಉದಾಹರಣೆಗಳಿವೆ. ತುಂಬಾ ಆಕರ್ಷಕವಾಗಿ ಕಾಣಿಸಬೇಕೆಂದು ಸರ್ಜರಿ ಮಾಡಿಸಲು ಹೋಗಿ ಇರುವ ಅಂದವನ್ನು ಕಳೆದುಕೊಂಡವರು ಎಷ್ಟೋ ಜನರ ಉದಾಹರಣೆಗಳು ನಮ್ಮ ಕಣ್ಣ ಮುಂದೆಯೇ ಇದು.

ಕಾಸ್ಮೆಟಿಕ್ ಸರ್ಜರಿ ಆಸ್ಪತ್ರೆಯವರು ತಮ್ಮ ಪ್ರಮೋಷನ್‌ನಲ್ಲಿ ತುಂಬಾ ಭರವಸೆ ಕೊಡುತ್ತಾರೆ, ಇದರ ಅಡ್ಡಪರಿಣಾಮಗಳ ಬಗ್ಗೆ ಅಷ್ಟಾಗಿ ಹೇಳುವುದಕ್ಕೇ ಹೋಗಲ್ಲ, ನಿಮ್ಮ ಅಂದ ಹೆಚ್ಚು ಮಾಡುತ್ತೇವೆ, ಈ ಚಿಕಿತ್ಸೆ ಮಾಡಿಸಿದರೆ ಯಾವುದೇ ವ್ಯಾಯಾಮ, ಡಯಟ್‌ ಇಲ್ಲದೆ ತೂಕ ಇಳಿಕೆ ಮಾಡಬಹುದು ಎಂದೆಲ್ಲಾ ಹೇಳುತ್ತಾರೆ, ಆದರೆ ಹೀಗೆ ತೂಕ ಇಳಿಕೆಗೆ ಶಾರ್ಟ್ ಕಟ್‌ ಹಿಡಿದರೆ ಅದರಿಂದ ಆರೋಗ್ಯಕ್ಕೆ ತುಂಬಾನೇ ಅಪಾಯಕಾರಿ ಎಂಬುವುದರಲ್ಲಿ ನೋ ಡೌಟ್‌.

ಕಿರುತೆರೆ ನಟಿ ಚೇತನಾ ರಾಜ್‌ ತೂಕ ಇಳಿಕೆಗಾಗಿ ಸರ್ಜರಿ ಮಾಡಿಸಲು ಹೋಗಿ ಸಾವನ್ನಪ್ಪಿದ್ದಾರೆ, ಅವರೇನು ಅತಿಯಾದ ಮೈ ತೂಕ ಹೊಂದಿರಲಿಲ್ಲ, ಸೊಂಟದ ಸುತ್ತ ಸ್ವಲ್ಪ ದಪ್ಪವಿತ್ತು ಹಾಗಾಗಿ ಬಳಕುವ ಮೈ ಮಾಟ ಬೇಕೆಂದು ಬಯಸಿ ಸರ್ಜರಿ ಮಾಡಲು ಮುಂದಾಗಿದ್ದರು, ಆದರೆ ಪರಿಣಾಮ ಸಾವನ್ನಪ್ಪಿದ್ದಾರೆ.

ಲಿಪೋಸಕ್ಷನ್‌ ಸರ್ಜರಿ ಕುರಿತು ನೀವು ತಿಳಿಯಲೇಬೇಕಾದ ಸಂಗತಿಗಳ ಬಗ್ಗೆ ಮಾಹಿತಿ ಇಲ್ಲಿದೆ

ಸರ್ಜರಿ ಮಾಡಿಸುವ ಮುನ್ನ ಏನು ಮಾಡಬೇಕು? ಈ ಬಗೆಯ ಸರ್ಜರಿಗೆ ಒಳಪಡುವ ಮುನ್ನ ನೀವು ತಜ್ಞರ ಜೊತೆ ಚರ್ಚಿಸಿ ಅದರ ಅಡ್ಡಪರಿಣಾಮಗಳ ಬಗ್ಗೆಯೂ ತಿಳಿದುಕೊಳ್ಳಬೇಕು. ನಿಮ್ಮ ಸರ್ಜನ್‌ ನೀವು ಪಾಲಿಸಬೇಕಾದ ಡಯಟ್‌ ಹಾಗೂ ಯಾವ ಅಹಾರಗಳನ್ನು ತಿನ್ನಬಾರದು, ಮದ್ಯ ಮುಟ್ಟಬಾರದು ಇವುಗಳ ಕುರಿತು ಸಂಪೂರ್ಣ ಮಾಹಿತಿ ನೀಡುತ್ತಾರೆ. * ಅಲ್ಲದೆ ನೋವು ಯಾವುದಾದರೂ ಸಪ್ಲಿಮೆಂಟ್ಸ್ ಅಥವಾ ಇತರ ಕಾಯಿಲೆಗೆ ಔಷಧಿ ತೆಗೆದುಕೊಳ್ಳುತ್ತಿದ್ದೀರಾ ಎಂಬುವುದರ ಬಗ್ಗೆ ಮಾಹಿತಿ ಕಲೆ ಹಾಕುತ್ತಾರೆ.

ನೀವೇನು ಮಾಡಬೇಕು? ನೀವು ಈ ಚಿಕಿತ್ಸೆ ಮಾಡಿಸುವ ಮುನ್ನ ನಿಮ್ಮ ಮನೆಯವರಿಗೆ ತಿಳಿಸಬೇಕು. ಮನೆಯವರು ಜೊತೆಗಿರಲಿ. ಜೊತೆಗೆ ಬೆಳಗ್ಗೆ ಸರ್ಜರಿ ಮಾಡಿದರೆ ಸಂಜೆ ಹೋಗಬಹುದೇ ಅಥವಾ ಒಂದು ದಿನ ಇರಬೇಕಾಗುತ್ತಾ ಎಂಬುವುದೆಲ್ಲಾ ತಿಳಿದುಕೊಳ್ಳಿ. ಅಲ್ಲದೆ ಲಿಪೋಸಕ್ಷನ್‌ ಮಾಡುವ ಮುನ್ನ ಯಾವ ಭಾಗ ಮಾಡುತ್ತಾರೋ ಅದನ್ನು ಮಾರ್ಕ್ ಮಾಡಲಾಗುವುದು, ಸರ್ಜರಿ ಮಾಡುವ ಮುನ್ನ ಹಾಗೂ ನಂತರ ಫೋಟೋಗಳನ್ನು ತೆಗೆಯಲಾಗುವುದು.

ಲಿಪೋಸಕ್ಷನ್‌ ವಿಧಗಳು ಟ್ಯೂಮೆಸೆಂಟ್‌ ಲಿಪೋಸಕ್ಷನ್ (Tumescent liposuction): ಹೆಚ್ಚಾಗಿ ಈ ವಿಧಾನ ಬಳಸುತ್ತಾರೆ. ಅಲ್ಟ್ರಾಸೌಂಡ್‌ ಅಸಿಸ್ಟೆಂಟ್‌ ಲಿಪೋಸಕ್ಷನ್ (Ultrasound-assisted liposuction, or UAL): ತ್ವಚೆ ಅಡಿಯಲ್ಲಿ ಅಲ್ಟ್ರಾಸೌಂಡ್‌ ತಂತ್ರಜ್ಞಾನ ಬಳಸಿ ಕೊಬ್ಬನ್ನು ತೆಗೆಯಲಾಗುವುದು. ಲೇಸರ್‌ ಅಸಿಸ್ಟೆಂಟ್‌ ಲಿಪೋಸಕ್ಷನ್‌ (Laser-assisted liposuction, or SmartLipo): ಲೇಸರ್‌ ಟ್ರೀಟ್ಮೆಂಟ್‌ ಮೂಲಕ ಕೊಬ್ಬು ಕರಗಿಸಲಾಗುವುದು.

ಲಿಪೋಸಕ್ಷನ್‌ ಚಿಕಿತ್ಸೆ ಮಾಡಿದ ಬಳಿಕ ಚೇತರಿಕೆಗೆ ಎಷ್ಟು ಸಮಯಬೇಕು? * ನೀವು ಯಾವ ಚಿಕಿತ್ಸೆಗೆ ಒಳಪಡುತ್ತೀರಾ ಅದರ ಮೇಲೆ ಚೇತರಿಸಿಕೊಳ್ಳಲು ಎಷ್ಟು ದಿನ ಬೇಕಾಗುವುದು ಎಂದು ಹೇಳಲಾಗುವುದು. ಸರ್ಜರಿ ಆದ ಬಳಿಕ ಕಂಪ್ರೆಷನ್‌ ಗಾರ್ಮಂಟ್‌ 1-2 ತಿಂಗಳು ಧರಿಸಬೇಕಾಗುವುದು. * ಸಾಮಾನ್ಯವಾಗಿ 2 ವಾರದೊಳಗೆ ನಾರ್ಮಲ್‌ ಲೈಫ್‌ಗೆ ಮರಳಬಹುದು. ಇದು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತೆ.

ಅಡ್ಡಪರಿಣಾಮಗಳೇನು? * ರಕ್ತಸ್ರಾವವಾಗಬಹುದು * ಅನಸ್ತೇಷಿಯಾದಿಂದ ಅಡ್ಡಪರಿಣಾಮ ಉಂಟಾಗಬಹುದು * ಅಧಿಕ ದ್ರವಾಂಶ ಕಳೆದುಕೊಂಡು ವ್ಯಕ್ತಿ ಕೋಮಾಕ್ಕೆ ಜಾರಬಹುದು * ಸೋಂಕು ತಗುಲಬಹುದು * ರಕ್ತ ಸಂಚಾರಕ್ಕೆ ತೊಂದರೆ ಉಂಟಾಗಬಹುದು * ದೇಹದಲ್ಲಿ ಕೊಬ್ಬಿನಂಶ ಒಂದೇ ರೀತ ಕಾಣದೆ ದೇಹದ ಶೇಪ್ ಮತ್ತಷ್ಟು ಹಾಳಾಗಬಹುದು * ರಿಯಾಕ್ಷನ್ ಆಗಬಹುದು * ತ್ವಚೆ ಮತ್ತಷ್ಟು ಸೂಕ್ಷ್ಮವಾಗಬಹುದು * ನರಗಳಿಗೆ ಹಾನಿಯುಂಟಾಗಬಹುದು * ಸಾವು ಕೂಡ ಸಂಭವಿಸಬಹುದು

ಲಿಪೋಸಕ್ಷನ್‌ ಶಸ್ತ್ರಚಿಕಿತ್ಸೆಯ ಫಲಿತಾಂಶ ಶಾಶ್ವತವೇ? ಕೊಬ್ಬಿನಂಶ ಕಣಗಳನ್ನು ಲಿಪೋಸಕ್ಷನ್‌ ಚಿಕಿತ್ಸೆಯಲ್ಲಿ ಶಾಶ್ವತವಾಗಿ ತೆಗೆಯಲಾಗುವುದು. ಆದರೆ ಕೆಲವರು ಹಲವು ವರ್ಷಗಳ ಬಳಿಕ ಮತ್ತೆ ದಪ್ಪಗಾಗಬಹುದು ಅಥವಾ ಲಿಪೋಸಕ್ಷನ್‌ ಮಾಸಿರುವ ಭಾಗ ಹೊರತು ಪಡಿಸಿ ಇತರ ಕಡೆ ದಪ್ಪಗಾಗಬಹುದು. ಸರ್ಜರಿ ಬಳಿಕ ಆರೋಗ್ಯಕರ ಆಹಾರಕ್ರಮ ಹಾಗೂ ವ್ಯಾಯಾಮ ಮೂಲಕ ದೇಹವನ್ನು ಫಿಟ್‌ ಆಗಿಡುವುದು ಕೂಡ ಮುಖ್ಯ. ಲಿಪೋಸಕ್ಷನ್‌ಗೆ ಹೆಲ್ತ್‌ ಇನ್ಸ್ಯೂರೆನ್ಸ್ ಇದೆಯೇ? ಇದು ಸೌಂದರ್ಯವರ್ಧಕ ಚಿಕಿತ್ಸೆ ಆಗಿರುವುದರಿಂದ ಹೆಲ್ತ್‌ ಇನ್ಸ್ಯೂರೆನ್ಸ್ ಇರಲ್ಲ.




Tags

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries