HEALTH TIPS

ಮಹಾ ಪಾತಕಿಗಳಾದ ಕೊಟ್ಟೂರು ಮತ್ತು ಸೆಫಿ ಹೊರಬಂದಿದ್ದು ಹೇಗೆ? ಅನುಮಾನದಲ್ಲಿರುವ 9 ವಿಷಯಗಳು; ಹೈಕೋರ್ಟ್ ಹೇಳಿದ್ದೇನು?

                                              

                    ಕೊಚ್ಚಿ:  ಸಿಸ್ಟರ್ ಅಭಯಾ ಹತ್ಯೆ ಪ್ರಕರಣದ ಆರೋಪಿ ಫಾದರ್ ಥಾಮಸ್ ಕೊಟ್ಟೂರ್ ಹಾಗೂ ಸಿಸ್ಟರ್ ಸೆಫಿ ಹೈಕೋರ್ಟ್ ಜಾಮೀನು ಪಡೆದು ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಕೇರಳ ಹೈಕೋರ್ಟ್ ಜೀವಾವಧಿಗೆ  ತಡೆಯಾಜ್ಞೆ ನೀಡಿದ ನಂತರ ಇಬ್ಬರನ್ನು ಬಿಡುಗಡೆ ಮಾಡಲಾಯಿತು. ಆದರೆ 28 ವರ್ಷಗಳ ಕಾನೂನು ಪ್ರಕ್ರಿಯೆಗಳು ಮತ್ತು ವಿವಾದಗಳ ನಂತರ ಅಂತಿಮವಾಗಿ ಎರಡು ಜೀವಾವಧಿ ಶಿಕ್ಷೆಗೆ ಗುರಿಯಾದ ಆರೋಪಿಗಳು ಈಗ ಹೇಗೆ ಹೊರಬಂದರು? ಇಬ್ಬರಿಗೂ ಹೈಕೋರ್ಟ್ ಜಾಮೀನು ನೀಡಿದ್ದು ಏಕೆ?

                         ತೀರ್ಪಿನ ಅನುಮಾನಗಳು:

           ಡಿಸೆಂಬರ್ 23, 2021 ರಂದು, ನ್ಯಾಯಾಲಯವು ಪ್ರಕರಣದಲ್ಲಿ ಪಾದ್ರಿ ಮತ್ತು ಸನ್ಯಾಸಿನಿಗೆ ಎರಡು ಜೀವಾವಧಿ ಶಿಕ್ಷೆಯನ್ನು ವಿಧಿಸಿತು. ಕೊಲೆ ಸೇರಿದಂತೆ ಪ್ರಕರಣಗಳಲ್ಲಿ ಫಾ. ಥಾಮಸ್ ಕೊಟ್ಟೂರ್ ಮತ್ತು ಸಿಸ್ಟರ್ ಸೆಫಿಯನ್ನು ತಪ್ಪಿತಸ್ಥರೆಂದು ಘೋಷಿಸಿತ್ತು. ಆದರೆ, ಕೇವಲ ಎರಡು ಸಾಕ್ಷ್ಯಗಳ ಆಧಾರದ ಮೇಲೆ ನ್ಯಾಯಾಲಯ ಆರೋಪಿಗಳಿಗೆ ಶಿಕ್ಷೆ ವಿಧಿಸಿದ್ದು, ವರ್ಷಗಳ ನಂತರ ಸಾಕ್ಷಿ ರಾಜು ಬಹಿರಂಗಪಡಿಸಿರುವುದು ಅನುಮಾನಾಸ್ಪದವಾಗಿದೆ ಎಂದು ಪ್ರತಿವಾದಿಯು ವಿಚಾರಣಾ ನ್ಯಾಯಾಲಯದ ತೀರ್ಪಿನ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ್ದರು.

                              ಕೊಟ್ಟಾಯಂ ಚರ್ಚ್‍ನಲ್ಲಿ 1992 ರಲ್ಲಿ ನಡೆದ ಘಟನೆ: 

             ಕೊಟ್ಟಾಯಂನ ಪಿಯಾಸ್ಟ್ ಟೆಂಟ್ ಕಾನ್ವೆಂಟ್‍ನಲ್ಲಿದ್ದ  ಸಿಸ್ಟರ್ ಅಭಯಾ ಅವರನ್ನು ಮಾರ್ಚ್ 27, 1992 ರಂದು ಅನುಮಾನಾಸ್ಪದವಾಗಿ ಮೃತರಾದರು. ಎರಡನೇ ವರ್ಷದ ಪದವಿ ವಿದ್ಯಾರ್ಥಿನಿ ಅಭಯಾ ಚರ್ಚ್  ಸಮೀಪದ ಬಾವಿಯಲ್ಲಿ ಶವವಾಗಿ ಪತ್ತೆಯಾಗಿದ್ದಳು. ವಿಚಾರಣಾ ನ್ಯಾಯಾಲಯವು ಚರ್ಚ್ ನ  ಅಡುಗೆಮನೆ ಮತ್ತು ಕೆಲಸದ ಪ್ರದೇಶ ಘಟನೆಯ ದಿನ  ಅಸ್ತವ್ಯಸ್ತವಾಗಿತ್ತು ಎಂದು ಪತ್ತೆಮಾಡಿತ್ತು. ಮತ್ತು ಆರೋಪಿ ಸಿಸ್ಟರ್ ಸೆಫಿ ಚರ್ಚ್  ನೆಲ ಮಹಡಿಯಲ್ಲಿ ಪತ್ತೆಯಾಗಿದ್ದಾಳೆ. ಈ ವೇಳೆ ಚರ್ಚ್ ಪಾದ್ರಯನ್ನೂ ಕಂಡಿದ್ದೇನೆ ಎಂದು ಅಲ್ಲಿ ಆ ವೇಳೆ ನೇರ ನೋಟಕನಾಗಿದ್ದ ರಾಜು ಕೂಡ ಹೇಳಿಕೆ ನೀಡಿದ್ದ.

           ಆರನೇ ಸಾಕ್ಷಿಯಾದ ಕಲರ್‍ಕೋಡ್ ವೇಣುಗೋಪಾಲ್ ಅವರು ಸಿಸ್ಟರ್ ಸೆಫಿಗೆ ಆತ್ಮೀಯರಾಗಿದ್ದರು ಎಂದು ಕೊಟ್ಟೂರಿಗೆ ತಿಳಿಸಿದ್ದು, ಸಿಸ್ಟರ್ ಸೆಫಿ ಅವರೇ ಈ ಬಗ್ಗೆ ವೈದ್ಯರಿಗೆ ತಿಳಿಸಿದ್ದಾರೆ ಎಂದು ವಿಚಾರಣಾ ನ್ಯಾಯಾಲಯವು ಕಂಡುಹಿಡಿದಿದೆ. ಇದರ ಜೊತೆಗೆ, ವಿಚಾರಣಾ ನ್ಯಾಯಾಲಯವು ಪರಿಗಣಿಸಿದ ಇತರ ವಿಷಯಗಳೆಂದರೆ, ಸಿಸ್ಟರ್ ಸೆಫಿಯ ಕನ್ಯಾಪೆÇರೆಗೆ ನಡೆಸಿದ ಶಸ್ತ್ರಚಿಕಿತ್ಸೆ, ಪ್ರತಿವಾದಿಗಳಲ್ಲಿ ಅಸಂಗತತೆಗಳು 'ಅನುಮಾನಾಸ್ಪದ ಸಂದರ್ಭಗಳ ಬಗ್ಗೆ ವಿವರಣೆಗಳು, ಅಭಯಾ ಸಾವಿನ ಬಗ್ಗೆ ಪ್ರತಿವಾದಿಗಳ ವಿವರಣೆಗಳು ಮತ್ತು ಸಾಕ್ಷ್ಯ ನಾಶ. ಈ ವಿಷಯಗಳನ್ನು ಹೈಕೋರ್ಟ್ ಮರುಪರಿಶೀಲಿಸಿತು.

                      ಉಚ್ಚ ನ್ಯಾಯಾಲಯದ ನಿಲುವು: 

               ಆದರೆ, ಅಭಯಾ ಹತ್ಯೆಗೆ ಸಂಬಂಧಿಸಿದಂತೆ ಆರೋಪಿಗಳಿಗೆ ಶಿಕ್ಷೆ ನೀಡಲು ಸಾಕಷ್ಟು ಸಾಕ್ಷ್ಯಾಧಾರಗಳಿಲ್ಲ ಎಂದು ಹೈಕೋರ್ಟ್ ಗಮನಿಸಿದೆ. ವಿಚಾರಣಾ ನ್ಯಾಯಾಲಯವು ಗಣನೆಗೆ ತೆಗೆದುಕೊಂಡ ಎಲ್ಲಾ ಒಂಬತ್ತು ಅಂಶಗಳನ್ನು ಪರಿಗಣಿಸಿದ ನಂತರ ನ್ಯಾಯಾಲಯದ ಮೌಲ್ಯಮಾಪನವನ್ನು ಕ್ರೋಢೀಕರಿಸಿತು. 

             ಚರ್ಚ್ ನ ಅಡುಗೆ ಕೋಣೆ ಅವ್ಯವಸ್ಥೆಯಿಂದ ಕೂಡಿದ್ದು, ಇಲ್ಲಿ ಅಭಯ ಪಾದರಕ್ಷೆ, ಸ್ಕಾರ್ಫ್ ಪತ್ತೆಯಾಗಿದ್ದು, ಇದು ಯಾವುದೇ ಅಪರಾಧಕ್ಕೆ ಸಾಕ್ಷಿಯಲ್ಲ ಎಂದು ಹೈಕೋರ್ಟ್ ಹೇಳಿದೆ. ಅಲ್ಲದೆ, ಸಿಸ್ಟರ್ ಸೆಫಿ ಕೆಳ ಮಹಡಿಯಲ್ಲಿ ಕಾಣಿಸಿಕೊಂಡಿರುವುದು ಸಾಕಷ್ಟು ಸಾಕ್ಷ್ಯವಲ್ಲ.  ರಾಜು ಅವರ ಹೇಳಿಕೆಯನ್ನೂ ಹೈಕೋರ್ಟ್ ಪರಿಶೀಲಿಸಿದೆ.

                    ಪ್ರಮುಖ ಆರೋಪಿ ಫಾದರ್ ಕೊಟ್ಟೂರು ಅವರನ್ನು ಚರ್ಚ್ ನಲ್ಲಿ  ನೋಡಿದ್ದೇನೆ ಎಂಬುದು  ರಾಜು ಅವರ ಮಹತ್ವದ ಹೇಳಿಕೆ. ಮರುದಿನ ಚರ್ಚ್ ನಿಂದ ತಾನು  ಕದ್ದ ನೀರಿನ ಮೀಟರ್ ಅನ್ನು ಮಾರಾಟ ಮಾಡಲು ಫಾದರ್ ನನ್ನು ನೋಡಿದ್ದೇನೆ ಎಂದು  ರಾಜು ಹೇಳಿದ್ದಾರೆ. ತನಿಖಾಧಿಕಾರಿಗಳಿಗೆ  ಮೀಟರ್ ಅನ್ನು ಪತ್ತೆಹಚ್ಚಲು ಸಾಧ್ಯವಾಗಲಿಲ್ಲ.  ಮಧ್ಯರಾತ್ರಿ 2ರಿಂದ 2.30ರ ನಡುವೆ ಚರ್ಚ್‍ಗೆ ತೆರಳಿದ್ದೆ ಎಂದು ರಾಜು ನ್ಯಾಯಾಲಯಕ್ಕೆ ತಿಳಿಸಿದ್ದ.  ಆದರೆ ಪೋಲೀಸರಿಗೆ ನೀಡಿರುವ ಹೇಳಿಕೆ ಮೂರೂವರೆಯಿಂದ ನಾಲ್ಕರ ನಡುವೆ ಇತ್ತು. ವಿಚಾರಣೆ ವೇಳೆ  ರಾಜು ಬೆಳಗ್ಗೆ 5ರವರೆಗೆ ಮಠದಲ್ಲೇ ಇರುವುದಾಗಿ ಹೇಳಿದ್ದರು. ಆದರೆ, ರಾಜು ಹೇಳಿಕೆ ನಿಜವಾಗಿದ್ದಲ್ಲಿ ರಾಜು ಅಭಯ ಹತ್ಯೆಗೆ ಸಾಕ್ಷಿಯಾಗಬೇಕಿತ್ತು ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

              ಪಾದ್ರಿ ಮತ್ತು ಸನ್ಯಾಸಿನಿಯ ನಡುವಿನ ಸಂಬಂಧಕ್ಕೂ ಅಪರಾಧಕ್ಕೂ ನೇರ ಸಂಬಂಧವಿಲ್ಲ ಎಂದು ನ್ಯಾಯಾಲಯ ತೀರ್ಪು ನೀಡಿದೆ. ನ್ಯಾಯಾಲಯದ ದಾಖಲೆಗಳ ಪ್ರಕಾರ, ಸಾಮಾಜಿಕ ಕಾರ್ಯಕರ್ತ ಕಲರ್‍ಕೋಡ್ ವೇಣುಗೋಪಾಲ್ ಅವರು ಕೊಟ್ಟೂರ್ ಅನ್ನು ನಾರ್ಕೋ-ಅನಾಲಿಸಿಸ್‍ಗೆ ಒಳಪಡಿಸಿದ ಬಗ್ಗೆ ತಿಳಿದು ಬಂದಿದೆ. ಈ ಸಮಯದಲ್ಲಿ, ಅದನ್ನು ಥಾಮಸ್ ಕೊಟ್ಟೂರ್ ಬಹಿರಂಗಪಡಿಸಿದ್ದಾರೆ ಎನ್ನುತ್ತಾರೆ ವೇಣುಗೋಪಾಲ್. ಆದರೆ, ಕೊಲೆ ಪ್ರಕರಣದಲ್ಲಿ ಈ ಹೇಳಿಕೆಯನ್ನು ಗಣನೆಗೆ ತೆಗೆದುಕೊಳ್ಳುವುದು ವಿಚಿತ್ರವಾಗಿದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. 

         ಸಿಸ್ಟರ್. ಸೆಫಿ ಅವರು ತಮ್ಮ ಕನ್ಯತ್ವವನ್ನು ಪುನಃಸ್ಥಾಪಿಸಲು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆಯೇ ಎಂಬ ಅನುಮಾನವೂ ಹೈಕೋರ್ಟ್‍ಗೆ ಇದೆ. ಈ ವಿಷಯದಲ್ಲಿ ವೈದ್ಯರು ಒಂದೇ ನಿಲುವನ್ನು ಹೊಂದಿಲ್ಲ. ಕನ್ಯಾಪೆÇರೆ ಮೇಲೆ ಗಾಯಗಳಿರುವ ವೀಕ್ಷಣೆಯೂ ತಪ್ಪಾಗಿದೆ ಎಂದು ಗಮನಿಸಲಾಗಿದೆ.

               ಅಭಯ ನೀರಿನಲ್ಲಿ ಮುಳುಗಿಸಿ ಮಚ್ಚಿನಿಂದ ಹಲ್ಲೆ ನಡೆಸಿರುವುದಾಗಿ ಮರಣೋತ್ತರ ಪರೀಕ್ಷೆ ವರದಿಯಲ್ಲಿ ತಿಳಿಸಲಾಗಿದೆ. ಆದರೆ ದಾಳಿಗೆ ಬಳಸಲಾಗಿದೆ ಎನ್ನಲಾದ ಕೈ ಕೊಡಲಿ ಪತ್ತೆಯಾಗಿಲ್ಲ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries