HEALTH TIPS

ಅಗ್ನಿಪಥ: ರೈಲು ಸಂಚಾರ ಸಹಜ ಸ್ಥಿತಿಗೆ

 ನವದೆಹಲಿ: ಕೇಂದ್ರ ಸರ್ಕಾರದ 'ಅಗ್ನಿಪಥ' ಯೋಜನೆ ವಿರೋಧಿಸಿ ದೇಶದಾದ್ಯಂತ ನಡೆದ ಪ್ರತಿಭಟನೆಗಳು ಹಿಂಸಾಚಾರಕ್ಕೆ ತಿರುಗಿದ ಪರಿಣಾಮ ಕಳೆದ 5 ದಿನಗಳಿಂದ ಅಸ್ತವ್ಯಸ್ಥವಾಗಿದ್ದ ರೈಲು ಸಂಚಾರವು ಬುಧವಾರ ಸಹಜ ಸ್ಥಿತಿಗೆ ಮರಳಿದೆ.

ಅಗ್ನಿಪಥ ಪ್ರತಿಭಟನೆಗಳಿಂದ ರೈಲು ಸಂಚಾರ ಸ್ಥಗಿತಗೊಂಡಿದ್ದ ಕಡೆಗಳ ಪೈಕಿ ಸಾಧ್ಯವಿರುವ ಕಡೆಗಳಲ್ಲಿ ರೈಲು ಸೇವೆ ಪುನರ್ ಆರಂಭಿಸುವಂತೆ ರೈಲ್ವೆ ವಲಯಗಳಿಗೆ ರೈಲ್ವೆ ಮಂಡಳಿ ಸೂಚಿಸಿದೆ.

ಇದರಿಂದಾಗಿ ಬುಧವಾರ ರೈಲು ಸಂಚಾರವು ಸಾಮಾನ್ಯ ಸ್ಥಿತಿಗೆ ಮರಳಿದೆ. ಆದರೆ, ಅಸ್ಸಾಂನಲ್ಲಿ ಪ್ರವಾಹ ಪರಿಸ್ಥಿತಿಯಿಂದಾಗಿ ಬುಧವಾರ ಕೆಲವು ರೈಲುಗಳು ರದ್ದಾಗಿವೆ ಎಂದು ಅಧಿಕಾರಿಗಳು ತಿಳಿಸಿದರು.

ಅಗ್ನಿಪಥ ಯೋಜನೆ ವಿರೋಧಿಸಿ ದೇಶದಾದ್ಯಂತ ನಡೆದ ಪ್ರತಿಭಟನೆ ವೇಳೆ ಪ್ರತಿಭಟನಕಾರರು, ರೈಲು ಬೋಗಿಗಳಿಗೆ ಬೆಂಕಿ ಹಚ್ಚಿದ್ದರು. ಅಲ್ಲದೆ, ರೈಲ್ವೆ ಇಲಾಖೆಗೆ ಸೇರಿದ ಆಸ್ತಿಗಳನ್ನು ಹಾನಿ ಮಾಡಿದ್ದರು. ಇದರಿಂದ ಪ್ರತಿ ದಿನ ಸರಾಸರಿ 400 ರೈಲುಗಳ ಸಂಚಾರ ರದ್ದಾಗಿತ್ತು.

ಈ ಪ್ರತಿಭಟನೆಯಿಂದಾಗಿ ರೈಲ್ವೆ ಇಲಾಖೆಯ ಎಷ್ಟು ಪ್ರಮಾಣದ ಆಸ್ತಿಗೆ ಹಾನಿಯಾಗಿದೆ ಎಂದು ಅಂದಾಜಿಸಲಾಗಿಲ್ಲ. ಆದರೆ, ಪೂರ್ವ ಕೇಂದ್ರದ ರೈಲ್ವೆ ವಲಯದ ವ್ಯಾಪ್ತಿಯಲ್ಲಿ 60ಕ್ಕೂ ಹೆಚ್ಚು ಬೋಗಿಗಳು ಮತ್ತು 10 ಎಂಜಿನ್‌ಗಳು ಹಾನಿಗೀಡಾಗಿವೆ ಎಂದು ವಕ್ತಾರರು ತಿಳಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries