ಕುಂಬಳೆ: ಎಸ್ ಸಿ ಮೋರ್ಚಾ ಜಿಲ್ಲಾ ಸಮಿತಿಯ ವತಿಯಿಂದ ಕಾಸರಗೋಡಿನ ವಿವಿಧ ಮಂಡಲಗಳಲ್ಲಿ ನರೇಂದ್ರ ಮೋದಿ ಸರ್ಕಾರದ ಎಂಟನೇ ವಾರ್ಷಿಕ ದ ಭಾಗವಾಗಿ ಚೌಪಾಲ್ ಸಮ್ಮೇಳನವನ್ನು ಆಯೋಜಿಸಲಾಯಿತು.
ಎಸ್ ಸಿ ಮೋರ್ಚಾ ಜಿಲ್ಲಾ ಅಧ್ಯಕ್ಷ ಸಂಪತ್ ಪೆರ್ಣಡ್ಕರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಎಸ್ ಸಿ ಮೋರ್ಚಾ ದೇಶೀಯ ಕಾರ್ಯದರ್ಶಿ ನ್ಯಾಯವಾದಿ. ಜೈಕುಮಾರ್ ಖಾಂಗೆ ಉದ್ಘಾಟಿಸಿ ಮಾತನಾಡಿದರು. ಬಿಜೆಪಿ ಜಿಲ್ಲಾ ಅಧ್ಯಕ್ಷ ರವೀಶ ತಂತ್ರಿ ಕುಂಟಾರು, ಎಸ್ ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಎ ಕೆ ಕಯ್ಯಾರ್, ಬಿಜೆಪಿ ಉಪಾಧ್ಯಕ್ಷ ರಾಮಪ್ಪ ಮಂಜೇಶ್ವರ, ಎಸ್ ಸಿ ಮೋರ್ಚಾ ರಾಜ್ಯ ಕೋಶಾಧಿಕಾರಿ ರತೀಶ್, ಮಂಡಲ ಅಧ್ಯಕ್ಷ ಹರೀಶ್ ನಾರಂಪಾಡಿ, ಸವಿತಾ ಟೀಚರ್, ಉಮಾ ಕಡಪ್ಪುರ, ಮಧು, ಮಣಿ ನೆಲ್ಕಳ, ಸುರೇಶ್ ಬಿ ಕೆ, ಸುಂದರ ಮವ್ವಾರ್, ಹರೀಶ್ ಗೋಸಾಡ, ರಕ್ಷಿತ್ ಕೆದಿಲಾಯ,ನಳಿನಾಕ್ಷಿ,ಹಾಗೂ ಜಿಲ್ಲೆ, ಮಂಡಲ, ಪಂಚಾಯತಿ ಸಮಿತಿಗಳ ಸದಸ್ಯರು ಭಾಗವಹಿಸಿದ್ದರು. ಕಾಸರಗೋಡಿನ ನೆಲ್ಕಳ, ಅನಂತಪುರ, ಕುಂಬಳೆಯ ಕಿದೂರು, ಕುಂಬ್ಡಾಜೆಯ ಮಾಚಾವು ಕಾಲನಿಗಳಲ್ಲಿ ಕಾರ್ಯಕ್ರಮ ನಡೆಯಿತು. ಎಸ್ ಸಿ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾರಾಯಣ ಪಿ ಪೆರಡಾಲ ಸ್ವಾಗತಿಸಿ, ಕಾರ್ಯದರ್ಶಿ ರಘು ಮಾಚಾವು ವಂದಿಸಿದರು.

.jpg)
