ಉಪ್ಪಳ: ಕಾಸರಗೋಡಿನ ಕನ್ನಡ ಭವನ ಗ್ರಂಥಾಲಯದ ರೂವಾರಿಗಳಾದ ವಾಮನ್ ರಾವ್ ಬೇಕಲ್- ಸಂಧ್ಯಾರಾಣಿ ದಂಪತಿಗೆ ಕಲ್ಕೂರ ಸೇವಾ ಸುಧಾರಕ ಸಿರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರ, ಕಲ್ಕೂರಾ ಪ್ರತಿಷ್ಠಾನದ ಆಶ್ರಯದಲ್ಲಿ, ಪೈವಳಿಕೆ ಜೋಡುಕಲ್ಲಿನ ಜನಾರ್ಧನ ಕಲಾವೃಂದದ ಸಹಕಾರದಲ್ಲಿ ನಡೆದ ಕಯ್ಯಾರ ಕಿಂಞಣ್ಣ ರೈ ಜನ್ಮದಿನದ ಸಂಭ್ರಮದಲ್ಲಿ ಈ ಪ್ರಶಸ್ತಿ ನೀಡಲಾಯಿತು.
ಈ ಸಂದರ್ಭದಲ್ಲಿ ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಸಿ ಸೋಮಶೇಖರ್ ಮಾತನಾಡಿ,'ಕಾಸರಗೋಡಿನಲ್ಲಿ ಕನ್ನಡ ರಕ್ಷಣೆಗೆ 20 ವರ್ಷದಿಂದ ಗ್ರಂಥಾಲಯ ಸ್ಥಾಪಿಸಿ, ಕನ್ನಡ ಪರ ಕಾರ್ಯಕ್ರಮ ನಡೆಸಿ, ಅನೇಕ ಕನ್ನಡದ ಪ್ರತಿಭೆಗಳನ್ನು, ಗುರುತಿಸಿ ಕನ್ನಡದ ರಾಯಭಾರಿಗಳಿಗೆ ಉಚಿತ ವಸತಿ ಹಾಗೂ ದಾಸೋಹ ನೀಡುವ ವಾಮನ್ ರಾವ್ ಬೇಕಲ್ ದಂಪತಿಯ ಕನ್ನಡ ಸೇವೆ ಶ್ಲಾಘನೀಯ' ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪ್ರದೀಪ್ ಕುಮಾರ್ ಕಲ್ಕೂರ, ಮಂಜೇಶ್ವರ ಶಾಸಕ ಎಂ ಕೆ ಅಶ್ರಫ್, ಡಾ.ರಮಾನಂದ ಬನಾರಿ, ಡಾ. ಪ್ರಸನ್ನ ರೈ, ಜನಾರ್ಧನ ಹಂದೆ, ಪ್ರೊ. ಎ. ಶ್ರೀನಾಥ್, ಪಂಚಾಯಿತಿ ಸದಸ್ಯೆ ಸುಜಾತಾ ಶೆಟ್ಟಿ, ಕಾಸರಗೋಡು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಎ ಆರ್ ಸುಬ್ಬಯ್ಯಕಟ್ಟೆ, ಪ್ರಭಾಕರ ಕಲ್ಲೂರಾಯ ಬನದಗದ್ದೆ, ಸಂತೋಷ್ ಕುಮಾರ್, ಅನೀಶ್ ಮಡಂದೂರು, ಅರಿಬೈಲು ಗೋಪಾಲ ಶೆಟ್ಟಿ, ಡಾ. ಕೆ. ಪಿ ಹೊಳ್ಳ, ಪತ್ರಕರ್ತ ರವಿ ನಾಯ್ಕಾಪು ಉಪಸ್ಥಿತರಿದ್ದರು.

.jpg)
