ಪೆರ್ಲ: ಕೆಪಿಸಿಸಿ ಕೇಂದ್ರ ಕಚೇರಿಯನ್ನು ಡಿವೈಎಫ್ ಐ ಕಾರ್ಯಕರ್ತರು ಅಕ್ರಮಿಸಿದ್ದನ್ನು ಪ್ರತಿಭಟಿಸಿ ಎಣ್ಮಕಜೆ ಮಂಡಲ ಕಾಂಗ್ರೆಸ್ ಸಮಿತಿ ವತಿಯಿಂದ ಪೆರ್ಲ ಪೇಟೆಯಲ್ಲಿ ಕರಿ ದಿನಾಚರಣೆ ಹಾಗೂ ಪ್ರತಿಭಟನಾ ಮೆರವಣಿಗೆ ನಡೆಯಿತು. ಕಾಂಗ್ರೆಸ್ ಕಚೇರಿ ಪರಿಸರದಿಂದ ಆರಂಭಗೊಂಡ ಪ್ರತಿಭಟನೆ ಕೆಳಗಿನ ಪೇಟೆಯಲ್ಲಿ ಸಮಾಪ್ತಿಗೊಂಡಿತು.
ಡಿಸಿಸಿ ಪ್ರಧಾನ ಕಾರ್ಯದರ್ಶಿ ಸೋಮಶೇಖರ್ ಜೆ.ಎಸ್. ಸಭೆಯನ್ನು ಉದ್ಘಾಟಿಸಿದರು. ಎಣ್ಮಕಜೆ ಮಂಡಲ ಕಾಂಗ್ರೆಸ್ ಅಧ್ಯಕ್ಷ ಬಿ.ಎಸ್.ಗಾಂಭೀರ್ ಅಧ್ಯಕ್ಷತೆ ವಹಿಸಿದ್ದರು. ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ವಿಲ್ಫ್ರೆಡ್ ಡಿಸೋಜ, ಮಂಡಲ ಕಾಂಗ್ರೆಸ್ ಉಪಾಧ್ಯಕ್ಷ ರಸಾಕ್ ನಲ್ಕ, ನೇತಾರರಾದ ಅಬ್ದುಲ್ಲ ಕುರೆಡ್ಕ, ಚಂದ್ರಶೇಖರ್ ಭಟ್ ಕಜಂಪಾಡಿ, ಬಟ್ಯ ನಲ್ಕ, ಲೋಕನಾಥ ಶೆಟ್ಟಿ ಮಾಯಿಲೆಂಗಿ, ಹ್ಯಾರಿಸ್ ವಳಮುಗೇರ್, ಶ್ರೀನಿವಾಸ ಶೆಣೈ, ದೀಪಕ್ ಕಾಟುಕುಕ್ಕೆ, ಸಂದೇಶ್ ರೈ, ಹನೀಫ್ ಕಾಟುಕುಕ್ಕೆ, ನವೀನ್ ಕುಮಾರ್ ನಾಯಕ್, ಫಾರೂಕ್ ಅರಿಯಪ್ಪಾಡಿ, ಜನಾರ್ಧನ ರೈ ಸೇರಾಜೆ, ಮಹಾಲಿಂಗ ನಾಯ್ಕ್ ಬೇಂಗಪದವು, ತುಕರಾಮ್ ಕಾಟುಕುಕ್ಕೆ, ಕಮಲಾಕ್ಷ ಕಾನ, ದಿನೇಶ್ ಕುಕ್ಕಿಲ, ಕುಂಞÂ್ಞ ಮೂಲ್ಯ, ನೌಷಾ ಕುದ್ರೆಡ್ಕ ಮೊದಲಾದವರು ಪಾಲ್ಗೊಂಡರು.
ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಅಬ್ದುಲ್ ರಹಿಮಾನ್ ಸ್ವಾಗತಿಸಿ, ಯೂತ್ ಕಾಂಗ್ರೆಸ್ ಎಣ್ಮಕಜೆ ಮಂಡಲಾಧ್ಯಕ್ಷ ನಿಸಾರ್ ಬಣ್ಪುತ್ತಡ್ಕ ವಂದಿಸಿದರು.

.jpg)
.jpg)
