ಕುಂಬಳೆ: ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿಯ ಪೆರ್ಮುದೆ ಘಟಕದ ಮಹಾಸಭೆಯು ಪೆರಿಯಡ್ಕ ಷಣ್ಮುಖ ಕಾಂಪ್ಲೆಕ್ಸ್‍ನಲ್ಲಿ ನಡೆಯಿತು. ಎ.ವೈ ಅಬ್ಬಾಸ್ ಅವರ ಆಧ್ಯಕ್ಷತೆಯಲ್ಲಿ ನಡೆದ ಮಹಾಸಭೆಯನ್ನು ಜಿಲ್ಲಾ ಪದಾಧಿಕಾರಿ ಕೆ.ಜೆ.ಸಜಿ ಉದ್ಘಾಟಿಸಿದರು.
ಸಂಘಟನೆಯ ನೇತಾರರಾದ ವಿಕ್ರಮ ಪೈ ಮತ್ತು ಶಿಯಾಬ್ ಉಸ್ಮಾನ್ ವ್ಯಾಪಾರಿಗಳಿಗೆ ಇರುವ ಕೆಲವು ಸೌಲಭ್ಯ ಗಳ ಕುರಿತು ಮಾಹಿತಿ ನೀಡಿದರು. ಜಯಪ್ರಕಾಶ ಕೆ ವರದಿ ಮಂಡಿಸಿದರು.
ಬಳಿಕ 2022_2024 ರ ಆವದಿಗೆ ಹೊಸ ಕಾರ್ಯುಕಾರಿ ಸಮಿತಿ ರೂಪಿಕರಿಸಲಾಯಿತು. ಆಧ್ಯಕ್ಷರಾಗಿ ಎ ವೈ ಅಬ್ಬಾಸ್, ಉಪಾಧ್ಯಕ್ಷರಾಗಿ ಪ್ರವೀಣ್ ಕ್ರಾಸ್ತ ಹಾಗೂ ರಹಿಮ್ ಎ ಅರ್ ಎಸ್, ಪ್ರಧಾನ ಕಾರ್ಯದರ್ಶಿ ಯಾಗಿ ಜಯಪ್ರಕಾಶ ಕೆ, ಜೊತೆ ಕಾರ್ಯದರ್ಶಿಗಳಾಗಿ ಶಶಿಕಾಂತ ಮತ್ತು ಲತೀಫ್ ಬಿ ಎ, ಕೊಶಾಧಿಕಾರಿಯಾಗಿ ಅಬ್ಬಾಸ್ ಸುಪಾರಿ ಅವರನ್ನು ಕಾರ್ಯಕಾರಿ ಸಮಿತಿಗೆ ಜನಾರ್ಧನ ಮಂಡೆಕಾಪು, ಗೋವಿಂದರಾಜು ಭಟ್,ಯೂಸಪ್ ಆಂಗಡಿಮೋಗರು, ವಿಜಯ ಕುಮಾರ್, ಅಜಿತ್,ವಿಠಲ ಹಾಗೂ ಸಂತೋಷ್ ಬಾಡೂರ್ ಸರ್ವಾನುಮತದಿಂದ ಆರಿಸಲಾಯಿತು. ಎಲ್ಲಾ ಸದಸ್ಯರು ತಮ್ಮ ಸದಸ್ಯತ್ವವನ್ನು ನವೀಕರಿಸುವುದಲ್ಲದೆ ಹೊಸ ಸದಸ್ಯರ ನ್ನು ಸೇರ್ಪಡಿಸುವ ಬಗ್ಗೆ ತೀರ್ಮಾನಿಸಲಾಯಿತು. ಬಿ ಎ ಲತೀಫ್ ಸ್ವಾಗತಿಸಿ, ವಂದಿಸಿದರು.



.jpg)
