HEALTH TIPS

ಸಹನಾ ಸಾವು ಪ್ರಕರಣ: ನಟಿಯ ಕೋಣೆಯಲ್ಲಿ ಪತ್ತೆಯಾದ ಡೈರಿಯಲ್ಲಿ ಗಂಡನ ಕರಾಳ ಮುಖ ಬಯಲು

           ಕೊಯಿಕ್ಕೋಡ್​: ಕಾಸರಗೋಡಿನ ನಟಿ ಮತ್ತು ರೂಪದರ್ಶಿ ಸಹನಾ (20) ಅನುಮಾನಾಸ್ಪದ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಮಾಹಿತಿಯನ್ನು ತನಿಖಾ ತಂಡ ಕಲೆಹಾಕಿದೆ. ಸಹನಾ ಮನೆಯನ್ನು ಆಕೆ ಬರೆದಿರುವ ಡೈರಿ ಪತ್ತೆಯಾಗಿದ್ದು, ಗಂಡನ ಕರಾಳ ಮುಖವಾಡ ಬಯಲಾಗಿದೆ.

           ನಟಿ ಸಹನಾ ಮೃತದೇಹ ಸಂಶಯಾಸ್ಪದ ರೀತಿಯಲ್ಲಿ ಕೇರಳದ ಕೊಯಿಕ್ಕೋಡ್​ನ ಬಾಡಿಗೆ ಮನೆಯಲ್ಲಿ ಮೇ. 12 ರಂದು ಪತ್ತೆಯಾಗಿತ್ತು. ಈ ಪ್ರಕರಣದಲ್ಲಿ ಈಗಾಗಲೇ ಸಹನಾ ಪತಿ ಸಾಜ್ಜದ್​ನನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ.

             ಇದೀಗ ಪತ್ತೆಯಾಗಿರುವ ಡೈರಿಯಲ್ಲಿ ತನ್ನ ಗಂಡ ನೀಡುತ್ತಿದ್ದ ಕಿರುಕುಳದ ಬಗ್ಗೆ ಸಹನಾ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ತನ್ನ ಪತಿಯೊಂದಿಗೆ ಸಹನಾ ಖುಷಿಯಾಗಿ ಇರಲಿಲ್ಲ ಎಂಬುದನ್ನು ಡೈರಿಯಲ್ಲಿರುವ ಬರಹ ಹೇಳುತ್ತದೆ. ಮದುವೆಯಾದ 20 ದಿನಗಳ ನಂತರ ಆಕೆ ಬರೆಯಲು ಶುರು ಮಾಡಿದ ಡೈರಿಯ ಟಿಪ್ಪಣಿಗಳು ಇದೀಗ ಬೆಳಕಿಗೆ ಬಂದಿವೆ.

               ತನ್ನ ಡೈರಿಯಲ್ಲಿ ಸೆಂಜು ಎಂದು ಪ್ರೀತಿಯಿಂದ ಕರೆಯಲ್ಪಡುವ ತನ್ನ ಗಂಡ ಸಾಜ್ಜದ್‌ನಿಂದ ತಾನು ಎದುರಿಸಿದ ಕೌಟುಂಬಿಕ ಹಿಂಸೆಯ ಬಗ್ಗೆ ಸಹನಾ ಬರೆದಿದ್ದಾರೆ. ಸಾಜ್ಜದ್‌ನ ಕುಟುಂಬಸ್ಥರು ಆಕೆಗೆ ಚಿತ್ರಹಿಂಸೆ ನೀಡಿದ್ದಾರೆ ಎಂದು ಟಿಪ್ಪಣಿಗಳು ಬಹಿರಂಗಪಡಿಸಿವೆ. ಸಾಜ್ಜದ್ ಮತ್ತು ಆತನ ಕುಟುಂಬ ಸಹನಾಳನ್ನು ಹಸಿವಿನಿಂದ ತಮ್ಮ ಮನೆಯಲ್ಲಿ ಬಿಟ್ಟು ಕಿರುಕುಳ ನೀಡಿದ್ದರು ಎಂದು ಬರೆದಿದ್ದಾರೆ.

               ಕೆಲವೊಮ್ಮೆ ಊಟ ನೀಡದೇ ಹಿಂಸಿಸಿದರೆ, ಇನ್ನು ಕೆಲವೊಮ್ಮೆ ಕೇವಲ ಎರಡು ತುಣುಕು ಬ್ರೆಡ್​ ಮಾತ್ರ ನೀಡುತ್ತಿದ್ದರಂತೆ. ಸಾಜ್ಜದ್​ ತಾಯಿಗೆ ಸೋಸೆ ಬೇಕಾಗಿರಲಿಲ್ಲ. ಆಕೆಗೆ ಒಬ್ಬ ಸೇವಕಿ ಬೇಕಾಗಿತ್ತು. ನನ್ನನ್ನು ಟೀಕಿಸುವ ಮೂಲಕ ಅವಳು ಸಂತೋಷ ಪಡುತ್ತಿದ್ದರು. ಆಕೆಯ ಕಾಟ ಸಹಿಸದೇ ನಾವು ಶೀಘ್ರದಲ್ಲೇ ಹೊಸ ಮನೆಗೆ ಹೋಗುತ್ತೇವೆ ಎಂದು ಸಾಜ್ಜದ್​ ನನಗೆ ಹೇಳಿದರು ಎಂದು ಸಹನಾ ಡೈರಿಯಲ್ಲಿ ಬರೆದಿದ್ದಾಳೆ.

              ನನಗಾಗಿ ಯಾರೂ ಇಲ್ಲ. ವಿನಾಕಾರಣ ನನ್ನನ್ನು ಥಳಿಸಿದ್ದಾರೆ. ಗಂಡನನ್ನು ನಂಬಿ ಈ ಮನೆಗೆ ಬಂದಿದ್ದೆ. ಆದರೆ ಅವನೂ ನನ್ನನ್ನು ಅರ್ಥಮಾಡಿಕೊಳ್ಳುತ್ತಿಲ್ಲ. ಈ ಮನೆಯಲ್ಲಿ ನನಗೆ ಯಾವ ಬೆಲೆಯೂ ಇಲ್ಲ. ಸಾಜ್ಜದ್​ ನನಗೆ ಬೆಂಬಲ ನೀಡುತ್ತಿಲ್ಲ. ಅವರೀಗ ಬೇರೆ ವ್ಯಕ್ತಿಯಾಗಿದ್ದಾರೆ ಎಂದು ಸಹನಾ ಡೈರಿಯಲ್ಲಿ ಅಳಲು ತೋಡಿಕೊಂಡಿದ್ದಾರೆ.

                ಸಾಜ್ಜದ್​ಗೆ ಇದ್ದ ಆರ್ಥಿಕ ಸಮಸ್ಯೆಗಳನ್ನೂ ಸಹನಾ ಅವರ ಡೈರಿಯಲ್ಲಿ ವಿವರಿಸಲಾಗಿದೆ. ಗಂಡನ ಅತೃಪ್ತ ಜೀವನದಿಂದಾಗಿ ಸಹನಾ ತೀವ್ರ ಖಿನ್ನತೆಗೆ ಒಳಗಾಗಿದ್ದರು ಎಂಬ ವಿಚಾರ ಡೈರಿಯಿಂದ ತಿಳಿದುಬಂದಿದೆ.

             ಅಂದಹಾಗೆ ಸಹನಾ ಸಹೋದರ ಚೆರುವತ್ತೂರಿನ ಆಕೆಯ ನಿವಾಸದಿಂದ ಡೈರಿಯನ್ನು ಪತ್ತೆಹಚ್ಚಿದ್ದು, ಅದನ್ನು ತನಿಖಾ ಅಧಿಕಾರಿಗಳಿಗೆ ಹಸ್ತಾಂತರಿಸಿದ್ದಾರೆ. ಇದರಿಂದ ತನಿಖಾಧಿಕಾರಿಗಳಿಗೆ ಬಲವಾದ ಸಾಕ್ಷಿ ಸಿಕ್ಕಿದಂತಾಗಿದೆ.

               ಕಾಸರಗೋಡಿನ ಚೆರುವತ್ತೂರಿನವರಾದ ಸಹನಾ ಕೆಲವು ಆಭರಣಗಳ ಜಾಹೀರಾತುಗಳಲ್ಲಿ ಮತ್ತು ತಮಿಳು ಚಲನಚಿತ್ರಗಳಲ್ಲಿ ಕೆಲವು ಸಣ್ಣ ಪಾತ್ರಗಳಲ್ಲಿ ನಟಿಸಿದ್ದಾರೆ. ಕಳೆದ ವರ್ಷ ಈ ಜೋಡಿ ಮದುವೆಯಾಗಿತ್ತು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries